ದಿನಕ್ಕೊಂದು ಲೋಟ ತಂಪಾದ ಹಾಲು ಕುಡಿಯಬೇಕಂತೆ! ಯಾಕೆ ಗೊತ್ತಾ?

27-03-22 10:31 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ದಿನಾ ಒಂದು ಲೋಟ ತಂಪಾದ ಹಾಲು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನೋಡಿ.

ಹಸುವಿನ ಹಾಲು ಆಮೃತಕ್ಕೆ ಸಮಾನ ಎಂದು ನಮ್ಮ ಹಿರಿಯರು ಹೇಳಿರುವುದನ್ನು ನಾವು ಎಷ್ಟೋ ಬಾರಿ ಕೇಳಿರುತ್ತೇವೆ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಬಹುತೇಕ ಪೌಷ್ಟಿಕ ಸತ್ವಗಳು ಸಿಗುತ್ತವೆ. ಹೀಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಲನ್ನು ನಾವು ಬಳಕೆ ಮಾಡುವುದು ತುಂಬಾ ಒಳ್ಳೆಯದು.

ನಮಗೆಲ್ಲ ಗೊತ್ತೇ ಇರುವ ಹಾಗೆ ಪುಟ್ಟ ಮಕ್ಕಳಾಗಿದ್ದ ಸಂದರ್ಭದಲ್ಲಿ ಮನೆಯಲ್ಲಿನ ನಮ್ಮ ಪೋಷಕರು ನಮಗೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲನ್ನು ಕೊಟ್ಟು ಮಲಗಿಸುತ್ತಿದ್ದರು. ಇನ್ನು ಸ್ವಲ್ಪ ಹುಷಾರು ಇಲ್ಲದಿದ್ದರೆ ಅದೇ ಹಾಲಿಗೆ ಸ್ವಲ್ಪ ಅರಿಶಿನ ಪುಡಿ ಮಿಶ್ರಣ ಮಾಡಿ ಕುಡಿಯಲು ನೀಡುತ್ತಿದ್ದರು, ಇದರಿಂದ ಶೀತ ನೆಗಡಿ ಕೆಮ್ಮು ದೂರವಾಗುತ್ತದೆ ಎಂದು ಹೇಳುತ್ತಿದ್ದರು.

ಇನ್ನು ನಮಗೆಲ್ಲಾ ಗೊತ್ತಿರುವ ಹಾಗೆ, ತಂಪಾದ ಆಹಾರ ಪದಾರ್ಥಗಳ ಬದಲು ಆದಷ್ಟು ಬಿಸಿಬಿಸಿ ಇರುವ ಆಹಾರ ಪದಾರ್ಥಗಳೇ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಂಗತಿಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ನಮ್ಮ ಹಿರಿಯರು ಕೂಡ ಅಷ್ಟೇ, ಬಿಸಿಬಿಸಿಯಾದ ಆಹಾರ ಪದಾರ್ಥ ಗಳನ್ನು ಮಾತ್ರ ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ ನಿಮಗೆ ಕೆಲವೊಂದು ಸಮಸ್ಯೆಗಳಿಗೆ ತಂಪಾದ ಪಾನೀಯಗಳು ಕೂಡ ಆರೋಗ್ಯವನ್ನು ಕಾಪಾಡುತ್ತದೆ!

ಇದಕ್ಕೆ ಒಂದು ಉದಾಹರಣೆಯಾಗಿ ನೋಡುವುದಾದರೆ, ಒಂದು ವೇಳೆ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿದ್ದರೆ, ಒಂದು ಲೋಟ ತಂಪಾದ ಹಾಲು ಕುಡಿಯುವು ದರಿಂದ ಸಮಸ್ಯೆ ದೂರವಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ತಂಪಾದ ಹಾಲನ್ನು ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಆರೋಗ್ಯದ ಹಾಗೂ ಸೌಂದರ್ಯದ ಲಾಭಗಳು ಏನು ಎಂಬುದನ್ನು ನೋಡೋಣ ಬನ್ನಿ...

ಜೀರ್ಣಶಕ್ತಿ ಹೆಚ್ಚಾಗುತ್ತದೆ

Hot milk or Cold milk: Which one is better and more beneficial for health?

  • ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಜೀರ್ಣಕ್ರಿಯೆ ಸಮಸ್ಯೆಯು ಕಾಡುತ್ತಲೇ ಇರುವುದು. ಇದಕ್ಕೆ ನಾವು ತಿನ್ನುವಂತಹ ಫಾಸ್ಟ್ ಫುಡ್ ಹಾಗೂ ದೈಹಿಕ ಶ್ರಮವಿಲ್ಲದೆ ಇರುವಂತಹ ಕೆಲಸವು ಕಾರಣವಾಗಿರ ಬಹುದು. ಹೀಗಾಗಿ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯು ನಿಧಾನವಾಗಿ ಅದರಿಂದ ಹಲವಾರು ರೀತಿಯ ಅನಾರೋಗ್ಯವು ಆರಂಭವಾಗಬಹುದು.
  • ಹೀಗಾಗಿ ಇದಕ್ಕೆಲ್ಲಾ ಮೆಡಿಕಲ್‌ಗಳಲ್ಲಿ ಸಿಗುವಂತಹ ಔಷಧಿಗಳನ್ನು ಅಥವಾ ವೈದ್ಯರ ನೀಡಿರುವ ಔಷಧಿಗಳನ್ನು ನುಂಗುವ ಬದಲು, ಮನೆಯಲ್ಲೇ ಸಿಗುವಂತಹ ಮನೆಮದ್ದುಗಳನ್ನು ಬಳಸಿ ಕೊಂಡರೆ ಅದರಿಂದ ಜೀರ್ಣಕ್ರಿಯೆ ವೇಗ ಪಡೆಯುವುದು ಮತ್ತು ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕೂಡ ಉಂಟಾಗದು.
  • ಹೀಗಾಗಿ ಈ ಸಮಯದಲ್ಲಿ ತಂಪಾದ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಬೇಕೆಂದರೆ ತಂಪಾದ ಹಾಲಿಗೆ ಶುಂಠಿ ಅಥವಾ ಕಾಳು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಇನ್ನಷ್ಟು ಪ್ರಭಾವಶಾಲಿ ಪರಿಣಾಮವನ್ನು ನಿಮ್ಮದಾಗಿಸಿ ಕೊಳ್ಳಬಹುದು.

ಎದೆಯುರಿ ಸಮಸ್ಯೆಗೂ ಒಳ್ಳೆಯದು 

Feeling of burning chest can be sign of a heart attack | Praram 9 Hospital

  • ಕೆಲವೊಮ್ಮೆ ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಕೂಡ, ಎದೆಯುರಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಒಂದು ವೇಳೆ ಈ ರೀತಿಯ ಸಮಸ್ಯೆಗಳು ಕಂಡು ಬಂದರೆ, ಅರ್ಧ ಲೋಟ ತಂಪಾದ ಹಾಲನ್ನು ಊಟ ಆದ ನಂತರದಲ್ಲಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿಯ ತೊಂದರೆ ಅನುಭವಿಸುವ ಸಾಧ್ಯತೆಯಿಂದ ಹೊರ ಬರಬಹುದು.
  • ತಂಪಾದ ಹಾಲು ತನ್ನ ಲ್ಯಾಕ್ಟಿಕ್ ಆಮ್ಲದ ಕಾರಣದಿಂದ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಆಮ್ಲಿಯ ಅಂಶವನ್ನು ತಗ್ಗಿಸಿ ತನ್ನ ಅಪಾರ ಪ್ರಮಾಣದ ಕ್ಯಾಲ್ಸಿಯಂ ಅಂಶದಿಂದ ಆಮ್ಲಿಯ ಅಂಶವನ್ನು ಹೀರಿಕೊಂಡು ಗ್ಯಾಸ್ಟಿಕ್ ಸಮಸ್ಯೆಯ ರೋಗಲಕ್ಷಣಗಳನ್ನು ದೂರಮಾಡುತ್ತದೆ.

ನಿರ್ಜಲೀಕರಣ ಸಮಸ್ಯೆಗೆ 

Should humans drink cow's milk? | Health & wellbeing | The Guardian

  • ಸಾಮಾನ್ಯವಾಗಿ ಬೇಸಿಗೆಯಲ್ಲಿ, ದೇಹದಲ್ಲಿ ನೀರಿನಾಂಶ ಬೇಗನೇ, ಬೆವರಿನ ಮೂಲಕ ಹರಿದು ಹೋಗುವು ದರಿಂದ, ನಮಗೆ ಈ ಸಮಯದಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡು ಬರುತ್ತಿರುತ್ತದೆ. ಇದಕ್ಕಾಗಿ ದಿನದಲ್ಲಿ, ಎರಡು ಬಾರಿಯಾದರೂ ತಂಪಾದ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
  • ರಾತ್ರಿಯ ಸಮಯದಲ್ಲಿ ತಂಪಾದ ಹಾಲನ್ನು ಕುಡಿದ ಬಳಿಕ, ಸ್ವಲ್ಪ ಹೊತ್ತು ವಾಕಿಂಗ್ ಮಾಡುವುದನ್ನು ಮರೆಯಬೇಡಿ. ಮಲಗುವ ಮುನ್ನ ಸ್ವಲ್ಪ ಹೊತ್ತು ವಾಕಿಂಗ್ ಮಾಡಿದರೆ ಒಳ್ಳೆಯದು. ನೆನಪಿಡಿ ಹಾಲು ಕುಡಿದ ಕೂಡಲೇ ಮಲಗುವುದು ಬೇಡ. ಈ ವಿಷ್ಯ ನೆನಪಿರಲಿ, ಒಂದು ವೇಳೆ ನಿಮಗೆ ಜ್ವರ ಅಥವಾ ಶೀತವಾಗಿದ್ದರೆ, ತಂಪಾದ ಹಾಲನ್ನು ಕುಡಿಯುವ ಅಭ್ಯಾಸದಿಂದ ದೂರವಿರಿ.

ಮುಖದ ಸೌಂದರ್ಯಕ್ಕೆ 

10 Tips For Healthy Skin | Eminence Organic Skin Care

  • ಮೊದಲೇ ಹೇಳಿದ ಹಾಗೆ ಹಾಲಿನಲ್ಲಿ ಒಳ್ಳೆಯ ಕೊಬ್ಬಿನ ಅಂಶದ ಪ್ರಮಾಣ ಅಧಿಕ ಪ್ರಮಾಣದಲ್ಲಿ ಇರುವುದರಿಂದ ನಿಮ್ಮ ಚರ್ಮದ ಭಾಗದಲ್ಲಿ ತೇವಾಂಶವನ್ನು ಹೆಚ್ಚು ಮಾಡುವ ಎಲ್ಲಾ ಗುಣಲಕ್ಷಣಗಳ ಕೂಡ ಇದರಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲದೇ ಹಾಲಿನಲ್ಲಿ ಕಂಡುಬರುವ ಲ್ಯಾಕ್ಟಿಕ್ ಎನ್ನುವ ಸಂಯುಕ್ತ ಅಂಶವು ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಇದಕ್ಕಾಗಿ ನೀವು ಹೀಗೆ ಮಾಡಬಹುದು, ಒಂದು ಮಧ್ಯಮ ಗಾತ್ರದ ಮಾಗಿದ ಬಾಳೆಹಣ್ಣನ್ನು ತೆಗೆದು ಕೊಂಡು, ಸಣ್ಣ ತುಂಡುಗಳನ್ನಾಗಿ ಮಾಡಿ, ಒಂದು ಬೌಲ್‌ಗೆ ಹಾಕಿಕೊಳ್ಳಿ. ಇನ್ನು ಇದಕ್ಕೆ ಒಂದು ಲೋಟ ತಂಪಾದ ಹಾಲು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಂಡು, ದಪ್ಪಗೆ ಪೇಸ್ಟ್ ರೀತಿ ಮಾಡಿಕೊಳ್ಳಿ
  • ಆಮೇಲೆ ಸುಮಾರು 15 ರಿಂದ 20 ನಿಮಿಷಗಳವರೆಗೆ ಮುಖದ ಮೇಲೆ ಇದು ಹಾಗೆ ಇರುವಂತೆ ನೋಡಿಕೊಳ್ಳಿ. ನಂತರ ತಂಪಾದ ನೀರಿನಿಂದ, ಮುಖ ಸ್ವಚ್ಛ ಮಾಡಿಕೊಳ್ಳಿ. ಉತ್ತಮ ಫಲಿತಾಂಶ ಕ್ಕಾಗಿ, ವಾರದಲ್ಲಿ ಎರಡು ಮೂರು ಬಾರಿ ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚಾಗುವುದರಲ್ಲಿ ಅನುಮಾನವೇ ಬೇಡ!

ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ

Black Marks Treatment @ Dr. Peddis Clinics - Hyderabad

ಪ್ರತಿ ದಿನ ಒಂದು ಲೋಟ ತಂಪಾದ ಹಾಲನ್ನು ಕುಡಿಯುವುದರಿಂದ, ತ್ವಚೆಯ ಕಾಂತಿ ನೈಸರ್ಗಿಕವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣಗಳನ್ನು ನೋಡುವುದಾದರೆ, ಹಾಲಿನಲ್ಲಿ ವಿಟಮಿನ್ ಎ ಮತ್ತು ಇನ್ನಿತರ ಆಂಟಿಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಕಂಡುಬರುವುದರಿಂದ, ನೈಸರ್ಗಿಕವಾಗಿ ದೇಹದ ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

Health Benefits Of Drinking One Glass Of Cold Milk Everyday.