ನಿಮ್ಮ ಚಯಾಪಚಯವನ್ನು ಹೆಚ್ಚಿಸುವ 7 ರಸಭರಿತ ಪಾನೀಯಗಳು

28-03-22 08:52 pm       Source: Vijayakarnataka   ಡಾಕ್ಟರ್ಸ್ ನೋಟ್

ಚಯಾಚಪಯ ಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ನಷ್ಟಕ್ಕೂ ಕಾರಣವಾಗುವ ರಸಭರಿತ ಜ್ಯೂಸ್‌ಗಳ ಪಟ್ಟಿ ಇಲ್ಲಿದೆ ಓದಿ.

ಚಯಾಪಚಯ ಕ್ರಿಯೆಯನ್ನು ವೇಗಗೊಳ್ಳುವುದರಿಂದ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಅವುಗಳಲ್ಲಿ ಪ್ರಮುಖವಾದುದು ತೂಕ ನಷ್ಟ. ತೂಕ ಇಳಿಸಿಕೊಳ್ಳುವ ವಿಷಯದಲ್ಲಿ ಚಯಾಪಚಯ ಕ್ರಿಯೆ ಅತಿ ಮುಖ್ಯವಾದುದು.

ವ್ಯಕ್ತಿಯಿಂದ ವ್ಯಕ್ತಿಗೆ ಚಯಾಪಚಯ ಕ್ರಿಯೆ ಬದಲಾಗುತ್ತದೆ. ಆರೋಗ್ಯಕರವಾದ ಆಹಾರದಿಂದ ಈ ಸಮಸ್ಯೆಯನ್ನು ನಾವು ನಿವಾರಿಸಿಕೊಳ್ಳಬಹುದು. ಸಾಮಾನ್ಯವಾಗಿ ನಿಮ್ಮ ಆಹಾರದಲ್ಲಿ ಹೆಚ್ಚು ಸಿಟ್ರಿಕ್‌ ಆಮ್ಲ ಹೊಂದಿರುವ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಚಯಾಪಚಯವನ್ನು ವೇಗಗೊಳಿಸಿಕೊಳ್ಳಬಹುದು.

ಯಾರೆಲ್ಲಾ ತೂಕ ಇಳಿಕೆ ಮಾಡಿಕೊಳ್ಳುವ ಹಾದಿಯಲ್ಲಿರುವಿರೋ ಅವರೆಲ್ಲಾ ಲೇಖನದಲ್ಲಿ ಹೇಳಲಾಗುವ ಪಾನೀಯಗಳನ್ನು ಸೇವನೆ ಮಾಡಿ.

ಅನಾನಸ್‌ ಜ್ಯೂಸ್‌

Top 15 Best Pineapple Juices in 2022 (Recommended)

  • ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಅನಾನಸ್‌ ಜ್ಯೂಸ್‌ ಬೆಸ್ಟ್‌ ಆಗಿದೆ.
  • ಅನಾನಸ್‌ ಹಣ್ಣು ಬ್ರೋಮೆಲಿನ್‌ ಅನ್ನು ಒಳಗೊಂಡಿದೆ.
  • ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ಉರಿಯೂತದ ಸಮಸ್ಯೆಗೂ ಚಿಕಿತ್ಸೆ ನೀಡುತ್ತದೆ.
  • ಅನಾನಸ್‌ ಹಣ್ಣಿಗೆ ಒಂದು ತುಂಡು ದಾಲ್ಚಿನ್ನಿ ಸೇರಿಸಿ ಕುಡಿಯುವುದರಿಂದ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.
  • ಹೀಗೆ ಕುಡಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ ಅನ್ನು ಕಡಿಮೆ ಮಾಡುವ ಮೂಲಕ ಮಧುಮೇಹವನ್ನು ತಡೆಯುತ್ತದೆ.

ಪುದೀನ ಮಿಶ್ರಿತ ಗ್ರೀನ್‌ ಟೀ

Health benefits of Green Tea: ದಿನಕ್ಕೆ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ  ಎಷ್ಟೆಲ್ಲಾ ಉಪಯೋಗವಾಗಲಿದೆ ಗೊತ್ತಾ? | Do you know how much help to health from  drinking a cup of green tea RH– News18

  • ಗ್ರೀನ್‌ ಟೀ ಚಯಾಪಚಯವನ್ನು ಹೆಚ್ಚಿಸುವ ಮತ್ತೊಂದು ಅದ್ಭುತವಾದ ಪಾನೀಯವಾಗಿದೆ.
  • ಸಾಮಾನ್ಯವಾಗಿ ಹಸಿರು ಚಹಾದಲ್ಲಿರುವ ಕೆಫೀನ್‌ ಉತ್ತೇಜಕವಾಗಿ ಕಾರ್ಯ ನಿರ್ವಹಿಸುತ್ತದೆ.
  • ಹಸಿರು ಚಹಾವು ಕ್ಯಾಟೆಚಿನ್‌ ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ.
  • ಹಾಗೆಯೇ ಪುದೀನ ಕೂಡ ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
  • ಪುದೀನವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ.
  • ಹಾಗಾಗಿ ಪ್ರತಿನಿತ್ಯ ಪುದೀನ ಮಿಶ್ರಿತ ಗ್ರೀನ್‌ ಟೀ ಸೇವನೆ ಮಾಡಿ.

ಆಪಲ್‌ ಸೈಡರ್‌ ವಿನೆಗರ್‌

ಆಪಲ್ ಸೈಡರ್ ವಿನೆಗರ್‌ನ ಹತ್ತಾರು ಅನುಕೂಲಗಳು... | Other Healing Uses Of Apple  Cider Vinegar - Kannada BoldSky

  • ಈ ಆಪಲ್‌ ಸೈಡರ್‌ ವಿನೆಗರ್‌ ಅಸಿಟಿಕ್‌ ಆಮ್ಲವನ್ನು ಹೊಂದಿರುತ್ತದೆ.
  • ನಿಮ್ಮ ಚಯಾಪಚಯ ಕ್ರಿಯೆಯನ್ನು ಇದು ಸುಧಾರಿಸುತ್ತದೆ.
  • ಇನ್ನು ಇನ್ಸುಲಿನ್‌ ಮಟ್ಟವನ್ನು ಕಡಿಮೆ ಮಾಡುವ ಮೂಲಕ ತೂಕ ನಷ್ಟವನ್ನು ಉತ್ತೇಜಿಸುತ್ತದೆ.
  • ಪದೇ ಪದೇ ತಿನ್ನುವ ಬಯಕೆಯನ್ನು ಈ ಆಪಲ್‌ ಸೈಡರ್‌ ವಿನೆಗರ್‌ ತಡೆಯುತ್ತದೆ.
  • ಇದರಲ್ಲಿರುವ ಅಸಿಟಿಕ್ ಆಮ್ಲವು ತೂಕ ಹೆಚ್ಚಾಗುವುದನ್ನು ತಡೆಯುವುದು ಮಾತ್ರವಲ್ಲ, ಹೊಟ್ಟೆ ಮತ್ತು ಯಕೃತ್ತಿನ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ.

ಶುಂಠಿ ಮತ್ತು ನಿಂಬೆ

ನಿಂಬೆ-ಶುಂಠಿ ಬೆರೆಸಿದ ನೀರು ಕುಡಿಯಿರಿ-ತೂಕ ಇಳಿಸಿಕೊಳ್ಳಿ | Drink Lemon Ginger  Water Everyday For Weight Loss-Other Benefits - Kannada BoldSky

  • ಶುಂಠಿಯನ್ನು ಉತ್ತಮವಾದ ಆರೋಗ್ಯ ಮತ್ತು ಔಷಧಿಯಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ.
  • ಇದು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ.
  • ಕರುಳನ್ನು ರಕ್ಷಿಸುವುದು ಮಾತ್ರವಲ್ಲ, ಗುಣಪಡಿಸುತ್ತದೆ.
  • ಹೊಟ್ಡೆ ಉಬ್ಬರ, ಸೆಳೆತಗಳಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  • ಅದೇ ರೀತಿ ನಿಂಬೆ ಕೂಡ ವಿಟಮಿನ್‌ ಸಿ ಯಿಂದ ಶ್ರೀಮಂತವಾಗಿದೆ.
  • ನಿಂಬೆಯಲ್ಲಿರುವ ಪೌಷ್ಟಿಕ ಸತ್ವಗಳು ಸಕ್ಕರೆ ಮತ್ತು ಪಿಷ್ಟಗಳ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಇವೆರಡರ ಸಮ್ಮಿಶ್ರಣವು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.

ತರಕಾರಿ ಜ್ಯೂಸ್‌

Fresh Natural Vegetable Juices – Green Café Foods Limited

ಸಕ್ಕರೆ ಮಿಶ್ರಿತ ಹಣ್ಣಿನ ರಸವು ತೂಕವನ್ನು ಹೆಚ್ಚಿದರೆ ತರಕಾರಿ ಜ್ಯೂಸ್ ಅದರ ವಿರುದ್ಧ ಪರಿಣಾಮಗಳನ್ನು ಹೊಂದಿದೆ. ತರಕಾರಿಗಳು ತಮ್ಮದೇ ಆದ ಅದ್ಭುತವಾದ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ತರಕಾರಿ ರಸವನ್ನು ಸೇವನೆ ಮಾಡುವುದರಿಂದ ತೂಕವನ್ನು ಗಮನಾರ್ಹವಾಗಿ ಕಳೆದುಕೊಳ್ಳಬಹುದಾಗಿದೆ.

Best Drink To Increase Metabolism In Kannada.