ಮಧುಮೇಹ ನಿರ್ವಹಣೆಗೆ 5 ಗಿಡಮೂಲಿಕೆ ಚಹಾಗಳು

29-03-22 07:53 pm       Source: Vijayakarnataka   ಡಾಕ್ಟರ್ಸ್ ನೋಟ್

ಸಕ್ಕರೆ ಕಾಯಿಲೆಯನ್ನು ನಿರ್ವಹಣೆ ಮಾಡಲು ಲೇಖನದಲ್ಲಿ ಹೇಳಲಾಗಿರುವ 7 ಗಿಡಮೂಲಿಕೆ ಚಹಾಗಳನ್ನು ಸೇವನೆ ಮಾಡಿ.

ಸಕ್ಕರೆ ಕಾಯಿಲೆ ಅಥವಾ ಮಧುಮೇಹವು ಒಮ್ಮೆ ಬಂದರೆ ಅದನ್ನು ನಿಯಂತ್ರಿಸಿಕೊಳ್ಳಬಹುದೇ ವಿನಃ ಪೂರ್ತಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನಿಯಮಿತವಾದ ಆಹಾರ ಮತ್ತು ಪ್ರತಿನಿತ್ಯ 30 ನಿಮಿಷಗಳ ದೇಹದಂಡನೆಯಿಂದ ಮಾತ್ರ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು.

ಸಾಮಾನ್ಯವಾಗಿ ಆಸ್ಪತ್ರೆ, ಔಷಧಿಗಳಿಗೆ ಮೊರೆ ಹೋಗುವ ಜೊತೆಗೆ ಮಧುಮೇಹವನ್ನು ನಿಯಂತ್ರಿಸಲು ನಿಮ್ಮ ಸಣ್ಣ ಪ್ರಯತ್ನವು ಕೂಡ ಬೇಕು. ನಿಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಕೆಲವು ಗಿಡಮೂಲಿಕೆಗಳಿಂದ ತಯಾರಿಸಲಾದ ಚಹಾ ಸೇವನೆ ಮಾಡುವುದು ಬಹಳ ಒಳ್ಳೆಯದು.

ಈ ಚಹಾಗಳು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಹಾಗಾದರೆ ಆ ಚಹಾ ಯಾವುವು ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.

ಜಿನ್ಸೆಂಗ್‌

15 Best Herbal Teas & Their Health Benefits | Organic Facts

ಜಿನ್ಸೆಂಗ್ ಚಹಾ ಮಾನವನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಈ ಜಿನ್ಸೆಂಗ್‌ ವ್ಯಾಪಕವಾಗಿ ದೊರೆಯುತ್ತದೆ. ವಾಸ್ತವವಾಗಿ, ಹಲವಾರು ಔಷಧೀಯ ಪ್ರಯೋಜನಗಳನ್ನು ಹೊಂದಿರುವ ಈ ಗಿಡಮೂಲಿಕೆಯು ಪ್ರತಿರಕ್ಷಣಾ ಕಾರ್ಯ, ಕೇಂದ್ರ ನರಮಂಡಲದ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಅಲ್ಲದೆ, ಒತ್ತಡವನ್ನು ನಿವಾರಿಸಲು ಮತ್ತು ಉತ್ಕರ್ಷಣ ನಿರೋಧಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಈ ಜಿನ್ಸೆಂಗ್‌ ಮಧುಮೇಹ ಹೊಂದಿರುವವರಿಗೆ ಅತ್ಯುತ್ತಮವಾದ ದಿವ್ಯೌಷಧ ಎಂದು ಪರಿಗಣಿಸಲಾಗಿದೆ. ಇದರಿಂದ ನೀವು ಕಷಾಯ ಅಥವಾ ಚಹಾ ಕೂಡ ಮಾಡಿ ಕುಡಿಯಬಹುದು.

ಅಲೋವೆರಾ ಚಹಾ

Honey-And-Aloe-Vera-For-Pimples – The Daily Crisp

ಅಲೋವೆರಾ ನೈಸರ್ಗಿಕವಾಗಿ ಚರ್ಮ ಮತ್ತು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದೊಂದು ಪ್ರಾಚೀನವಾದ ಮೂಲಿಕೆಯಾಗಿದ್ದು, ಕಚ್ಚಾ ರೂಪದಲ್ಲಿ ಅಥವಾ ಬೇಯಿಸಿ ಸೇವನೆ ಮಾಡುವುದರಿಂದ ಮಧುಮೇಹವನ್ನು ತಡೆಯಬಹುದು. ಸಾಕಷ್ಟು ಮಂದಿ ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಅಲೋವೆರಾ ಚಹಾವನ್ನು ಸೇವನೆ ಮಾಡುತ್ತಾರೆ.ತಾಜಾ ಅಲೋವೆರಾ ರಸವನ್ನು ಚೆನ್ನಾಗಿ ಕುದಿಯುತ್ತಿರುವ ನೀರಿಗೆ ಬೇರೆಸಿ. ನಂತರ ಸೋಸಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ.

ಸೇಜ್‌ ಟೀ

5 teas that can help you live longer and reduce the risk of chronic  diseases - Times of India

ಈ ಸೇಜ್‌ ಚಹಾವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದ ಗ್ಲೂಕೋಸ್‌ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ಇಂಟರ್‌ ನ್ಯಾಷನಲ್‌ ಜರ್ನಲ್‌ ಆಫ್‌ ಮಾಲಿಕ್ಯುಲರ್‌ ಸೈನ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿದಿನ ಬೆಳಿಗ್ಗೆ ಈ ಸೇಜ್‌ ಚಹಾವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಈ ಸೇಜ್ ಚಹಾದಲ್ಲಿ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಸಂಯುಕ್ತಗಳಿಂದ ಶ್ರೀಮಂತವಾಗಿದೆ. ಮೆದುಳಿನ ಆರೋಗ್ಯ, ಮನಸ್ಥಿತಿಯನ್ನು ಸುಧಾರಿಸುವುದರ ಮೂಲಕ ಹೃದಯದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಒಟ್ಟಾರೆ ಮಧುಮೇಹ ಮತ್ತು ಮಹಿಳೆಯರಿಗೆ ಈ ಸೇಜ್‌ ಚಹಾ ಬಹಳ ಒಳ್ಳೆಯದು.

ದಾಸವಾಳ ಚಹಾ

Hibiscus flower infusions: Take your pick from tea, salad or cocktail -  Hindustan Times

ದಾಸವಾಳ ಚಹಾವು ಸಕ್ಕರೆ ಕಾಯಿಲೆಯ ನಿಯಂತ್ರಣದ ಜೊತೆ ಜೊತೆಗೆ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಒಣಗಿದ ದಾಸವಾಳದ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು.

ಈ ಚಹಾವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ದಾಸವಾಳದ ಚಹಾವನ್ನು ಸೇವನೆ ಮಾಡುವುದರಿಂದ ಟೈಪ್‌ 2 ಮಧುಮೇಹವನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.

ಅರಿಶಿಣದ ಚಹಾ

Yogi Turmeric Tea Recipe

ಅರಿಶಿಣವು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿದ್ದು, ಮಧುಮೇಹ ಮತ್ತು ಹೃದಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಒಂದು ಕಪ್‌ ಅರಿಶಿಣದ ಚಹಾವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಉರಿಯೂತವನ್ನು ತಡೆಯುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮುಖ್ಯವಾಗಿ ಅರಿಶಿಣದಲ್ಲಿರುವ ಕರ್ಕ್ಯುಮಿನ್ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮಧುಮೇಹದ ಇತರ ತೊಡಕುಗಳನ್ನು ಕಡಿಮೆ ಮಾಡುತ್ತದೆ.

Benefits Of Herbal Tea For Diabetes In Kannada.