ಆರೋಗ್ಯವಾಗಿ ಇರಬೇಕೆಂದರೆ ಹಾಲು-ಸಕ್ಕರೆ ಹಾಕದ ಚಹಾ ಕುಡಿಯಬೇಕಂತೆ!

30-03-22 07:33 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಮಿತವಾಗಿ ಚಹಾ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಹಾಲು ಬೆರೆಸ ಬಾರದು ಅಷ್ಟೇ....

ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಬಿಸಿ ಬಿಸಿ ಒಂದು ಕಪ್ ಕಾಫಿ ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಇನ್ನು ಕೆಲವರು, ಬೆಳಗ್ಗೆ ಎದ್ದ ಕೂಡಲೇ ತಮ್ಮ ನಿತ್ಯ ಕರ್ಮಗಳನ್ನೆಲ್ಲಾ ಪೂರೈಸಿ ತಿಂಡಿ ತಿನ್ನುವ ಮುಂಚೆ, ಒಂದು ಲೋಟ ಚಹಾ ಕುಡಿಯುವ ಅಭ್ಯಾಸ ಇಟ್ಟುಕೊಂಡಿ ರುತ್ತಾರೆ. ಇನ್ನು ನಮ್ಮ ಆಹಾರ ಪದ್ಧತಿಗಳ ವಿಚಾರ ಬಂದಾಗ ಕಾಫಿ ಮತ್ತು ಚಹಾ ಸೇವನೆ ಕೂಡ ಅದರಲ್ಲಿ ಸೇರಿರುತ್ತದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಒಂದು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಕಾಫಿ ಮತ್ತು ಚಹಾ ಕುಡಿಯುತ್ತಾರೆ, ಎನ್ನುವ ಆಧಾರದ ಮೇಲೆ ಅವರ ಆರೋಗ್ಯ ನಿಂತಿರುತ್ತದೆ ಎಂದು ಹೇಳುತ್ತಾರೆ.

ಇನ್ನು ಈ ಎರಡು ಪಾನೀಯಗಳ ವಿಷ್ಯಕ್ಕೆ ಬಂದಾಗ, ನಮಗೆಲ್ಲಾ ಗೊತ್ತೇ ಇರುವ ಹಾಗೆ ಕಾಫಿ ಯಲ್ಲಿ ಹೇರಳವಾಗಿ ಕೆಫಿನ್ ಅಂಶ ಕಂಡು ಬರುವುದರಿಂದ, ಆದಷ್ಟು ಇದನ್ನು ಮಿತವಾಗಿ ಕುಡಿಯ ಬೇಕು ಎಂದು ಹೇಳಲಾಗುತ್ತದೆ. ಆದರೆ ಚಹಾ ಹಾಗಲ್ಲ! ಕಾಫಿಯಲ್ಲಿ ಇರುವ ಹಾಗೆ ಇದರಲ್ಲಿ ಕೆಫಿನ್ ಅಂಶದ ಪ್ರಮಾಣ ತುಂಬಾನೇ ಕಡಿಮೆ ಇದೆ. ಹಾಗಾಗಿ ಚಹಾ ಸೇವನೆಯಿಂದ ಆರೋಗ್ಯಕ್ಕೆ ಅಷ್ಟು ಸಮಸ್ಯೆ ಇರುವುದಿಲ್ಲ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಎಂದರೆ, ಹಾಲು ಮತ್ತು ಸಕ್ಕರೆ ಬೆರೆಸದೆ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅತ್ಯುತ್ತಮ ಆರೋಗ್ಯ ಲಾಭಗಳನ್ನು ನಾವು ನಿರೀಕ್ಷೆ ಮಾಡಬಹುದು. ಸಾಧ್ಯವಾದರೆ ಮಿತವಾಗಿ ಬ್ಲಾಕ್ ಟೀ ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಅದರಲ್ಲೂ ಮುಖ್ಯವಾಗಿ ಸಕ್ಕರೆ ಹಾಕದೇ, ಕುಡಿಯುವುದರಿಂದ ದೇಹದ ಬೊಜ್ಜು ನಿಯಂತ್ರಣಕ್ಕೆ ಬಂದು, ತೂಕ ಕೂಡ ಕಡಿಮೆ ಆಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಹಾಲು ಮಿಶ್ರಣ ಮಾಡಿದ ಚಹಾ ಸೇವನೆಯಿಂದ ಆರೋಗ್ಯಕ್ಕೆ ಉಂಟಾಗುವ ದುಷ್ಪರಿಣಾಮಗಳು ಯಾವುವು ಎಂದು ಆಲೋಚನೆ ಮಾಡಿ ನೋಡುವುದಾದರೆ...

ನಿದ್ರಾಹೀನತೆ ಸಮಸ್ಯೆ

ನೀವು ಎಷ್ಟು ಗಂಟೆ ನಿದ್ದೆ ಮಾಡುತ್ತೀರಿ ಎಂಬುದೇ ನಿಮ್ಮ ಸಾವನ್ನು ನಿರ್ಧರಿಸುತ್ತೆ..! –  EESANJE / ಈ ಸಂಜೆ

ಮನುಷ್ಯ ರಾತ್ರಿಯ ಹೊತ್ತು ಸರಿಯಾಗಿ ನಿದ್ದೆ ಮಾಡಲೇಬೇಕು. ಅದರಲ್ಲೂ ಸುಮಾರು ಏಳು ಎಂಟು ಗಂಟೆಗಳ ಕಾಲ, ನಿದ್ದೆ ಮಾಡಲೇಬೇಕು. ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ ನಿದ್ರೆಗೆ ತೊಂದರೆ ತಂದುಕೊಳ್ಳಬಾರದು. ಇದು ಮುಂಬರುವ ದಿನಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದಕ್ಕೆಲ್ಲಾ ಉದಾಹರಣೆ ನೋಡುವುದಾದರೆ, ಅಚ್ಚರಿ ಎನ್ನುವಂತೆ ದೇಹದ ತೂಕ ಹೆಚ್ಚಾಗುವುದು, ರಕ್ತದ ಒತ್ತಡದಲ್ಲಿ ಏರುಪೇರಾಗುವುದು, ರಕ್ತದಲ್ಲಿನ ಸಕ್ಕರೆಮಟ್ಟ ಏರುಪೇರಾಗಿ ಮಧುಮೇಹ ಸಮಸ್ಯೆ ಕಂಟ್ರೋಲ್‌ಗೆ ಸಿಗದೇ ಇರುವುದುಇಂತಹ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡಬಹುದು
ಸರಿಯಾಗಿ ನಿದ್ದೆ ಬರದೇ ಇರಲು ಕಾರಣಗಳನ್ನು ನೋಡುವುದಾದರೆ, ಕೆಟ್ಟ ಜೀವನಶೈಲಿ ಹಾಗೂ ಆಹಾರಪದ್ಧತಿ, ಇನ್ನು ಕೆಲವರಿಗೆ ವಯಸ್ಸಾದ ಮೇಲೆ ಕಾಡುವ ನಿದ್ದೆ ಸಮಸ್ಯೆಗಳು ಕೂಡ ಇರಬಹುದು.
ಇಲ್ಲದಿದ್ದರೆ ದಿನನಿತ್ಯ ಸುಮಾರು ಎರಡು ಕಪ್ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಅಥವಾ ಚಹಾ ಸೇವನೆ ಮಾಡುವುದು ಕೂಡ ಇರಬಹುದು. ಹೀಗಾಗಿ ಕಾಫಿ ಅಥವಾ ಚಹಾ ನಿಯಮಿತ ಪ್ರಮಾಣದಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಯಾಕೆಂದರೆ ಮಿತಿಮೀರಿದ ಕೆಫಿನ್ ಅಂಶ ದೇಹ ಸೇರಿದರೆ ಅದರಿಂದ ಮೆದುಳಿನ ಮೇಲೆ ಬೀಳುವ ಒತ್ತಡ ಹೆಚ್ಚಾಗಿ, ಮಾನಸಿಕ ಖಿನ್ನತೆಯ ಜೊತೆಗೆ ನಿದ್ರೆ ಕೂಡ ಬಾರದೆ ಹೋಗಬಹುದು.

ಮುಖದ ಮೇಲೆ ಮೊಡವೆಗಳು ಉಂಟಾಗಬಹುದು

ಮಗುವಿನ ಮುಖದ ಮೇಲೆ ಕೆಂಪು ದದ್ದು. ಮುಖದ ಅಲರ್ಜಿಯ ಸಾಮಾನ್ಯ ಕಾರಣಗಳು. ಮಕ್ಕಳಲ್ಲಿ  ಅಲರ್ಜಿಕ್ ದದ್ದುಗಳ ಚಿಕಿತ್ಸೆ

  • ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಮುಖದ ಮೇಲೆ, ಪದೇ ಪದೇ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕೆ ದೇಹದಲ್ಲಿ ಏರುಪೇರಾಗುವ ಹಾರ್ಮೋನ್‍ಗಳ ಬದಲಾವಣೆ ಎಂದು ಕೂಡ ಹೇಳಲಾಗುತ್ತದೆ.
  • ಇನ್ನು ಸೌಂದರ್ಯ ತಜ್ಞರು ಹೇಳುವ ಪ್ರಕಾರ, ಅತೀಯಾಗಿ ಹಾಲು ಬೆರೆಸಿದ ಚಹಾ ಕುಡಿಯುವ ಕಾರಣದಿಂದ ಕೂಡ ಕೆಲವೊಮ್ಮೆ ತ್ಬಚೆಯ ಭಾಗದ ಸೂಕ್ಷ್ಮ ಚರ್ಮದ ಮೇಲೆ ಮೊಡವೆಗಳು ಉಂಟಾಗುತ್ತವೆಯಂತೆ!
  • ಹೀಗಾಗಿ ಸಾಧ್ಯವಾದರೆ ಹಾಲು ಹಾಗೂ ಸಕ್ಕರೆ ಬೆರೆಸದೇ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದಿಂದ ವಿಷಕಾರಿ ಅಂಶಗಳು ದೂರವಾಗುತ್ತವೆ ಜೊತೆಗೆ ಮೊಡವೆಗಳ ಸಮಸ್ಯೆ ಕೂಡ ಕಮ್ಮಿ ಆಗುತ್ತದೆ.

ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ

Remedies for constipation: ಮಲಬದ್ಧತೆ ಸಮಸ್ಯೆ ನಿವಾರಣೆಗೆ ಅತ್ಯದ್ಭುತ ಮನೆ ಮದ್ದುಗಳು  - Vijaya Karnataka

  • ಕೆಲವೊಮ್ಮೆ ಅನಾರೋಗ್ಯಕಾರಿ ಆಹಾರಗಳ ಸೇವನೆಯಿಂದಾಗಿ, ನಮ್ಮ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಏರುಪೇರು ಉಂಟಾಗುವುದರಿಂದ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ.
  • ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಯಾರು ವಿಪರೀತವಾಗಿ ಚಹಾ ಹೆಚ್ಚಾಗಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆಯೋ, ಅಂತಹವರಿಗೆ ಮಲಬದ್ಧತೆ ಸಮಸ್ಯೆ ಕಾಡುವ ಅಪಾಯ ಹೆಚ್ಚಿರುತ್ತದೆಯಂತೆ..
  • ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ, ಈ ಸಮಯದಲ್ಲಿ ಅತಿಯಾದ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಬಿಡುತ್ತದೆ. ಇದರಿಂದಾಗಿ ದೇಹದಲ್ಲಿರುವ ನೀರಿನಾಂಶ ಕೂಡ ಕಡಿಮೆ ಆಗುತ್ತಾ ಹೋಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗಲು ನೀರಿನ ಅಂಶದ ಕೊರತೆ ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯ ಎಂದು ಹೇಳಬಹುದು.

ಹೊಟ್ಟೆ ಉಬ್ಬರ ಉಂಟಾಗುತ್ತದೆ

ಹೊಟ್ಟೆಯ ಎಡಭಾಗದಲ್ಲಿ ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತೇ? | What Can  Cause Left Side Abdominal Pain? - Kannada BoldSky

ಕೆಲವರು ಚಹಾ ಮಾಡುವಾಗ ತುಂಬಾನೇ ಹಾಲು ಬಳಸುವುದರಿಂದ, ಇದರಿಂದ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವ ಸಂಭವ ಹೆಚ್ಚಿರುತ್ತದೆ.ಹಾಗಾಗಿಯೇ ಬಹಳಷ್ಟು ಜನರು ಖಾಲಿ ಹೊಟ್ಟೆಯಲ್ಲಿ ಹಾಲು, ಕಾಫಿ ಅಥವಾ ಚಹಾ ಸೇವನೆ ಮಾಡಲು ಈಗಲೂ ಹಿಂದೇಟು ಹಾಕುತ್ತಾರೆ.
ಇನ್ನು ಈ ಬಗ್ಗೆ ತಜ್ಞರು ಹೇಳುವ ಪ್ರಕಾರ ಕಾಫಿಯಲ್ಲಿ ಅಥವಾ ಚಹಾದಲ್ಲಿ ಕಂಡುಬರುವ ಕೆಫಿನ್ ಅಂಶ ಹೊಟ್ಟೆ ಉಬ್ಬರ ಸಮಸ್ಯೆಯನ್ನು ಉಂಟು ಮಾಡುತ್ತದೆಯಂತೆ! ವಿಶೇಷವಾಗಿ ಹಾಲಿನ ಜೊತೆ ಕೆಫಿನ್ ಅಂಶ ಮಿಕ್ಸ್ ಆಗಿ ಬಿಟ್ಟರೆ, ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ.

Drinking Tea Without Milk And Sugar Could Be Better For Your Health.