ಅಧ್ಯಯನ: ಬಿಳಿ ಅಕ್ಕಿ ಅಥವಾ ಕಂದು ಅಕ್ಕಿ ಯಾವುದು ಬೆಸ್ಟ್?

05-04-22 08:56 pm       Source: Vijayakarnataka   ಡಾಕ್ಟರ್ಸ್ ನೋಟ್

ಆರೋಗ್ಯಕ್ಕೆ ಬ್ರೌನ್‌ ರೈಸ್‌ ಅಥವಾ ಬಿಳಿ ಅಕ್ಕಿ ಯಾವುದು ಉತ್ತಮ?

ಸಾವಿರಾರು ವರ್ಷಗಳಿಂದ ಅನ್ನವನ್ನು ಆಹಾರದ ಪ್ರಧಾನ ಅಂಶವಾಗಿ ಸೇವನೆ ಮಾಡಲಾಗುತ್ತಿದೆ. ನಿಮಗೆ ತಿಳಿದಿರಲಿ, ಇಂದು ಅಕ್ಕಿಯು 100 ಕ್ಕೂ ಹೆಚ್ಚು ಸಂಸ್ಕೃತಿಗಳಲ್ಲಿ ಪ್ರಧಾನವಾಗಿದ್ದು, 40,000 ಕ್ಕಿಂತ ಹೆಚ್ಚು ಪ್ರಭೇದಗಳನ್ನು ಬೆಳೆಯಲಾಗುತ್ತದೆ.

ಅಕ್ಕಿಗಳಲ್ಲಿ ಬ್ರೌನ್‌ ರೈಸ್‌ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಏಕೆಂದರೆ ಬ್ರೌನ್ ರೈಸ್‌ ಅಥವಾ ಕಂದು ಅಕ್ಕಿ ಎಂದೇ ಕರೆಯಲಾಗುವ ಈ ಅಕ್ಕಿಯು ಸಂಪೂರ್ಣವಾಗಿ ಧಾನ್ಯವಾಗಿದ್ದು, ಹೆಚ್ಚು ಪೋಷಕಾಂಶಗಳಿಂದ ಶ್ರೀಮಂತವಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ.

ಕಂದು ಅಕ್ಕಿಯು ಹೃದಯದ ಆರೋಗ್ಯವನ್ನು ಕಾಪಾಡಲು, ಪಾರ್ಶ್ವವಾಯು, ಮಧುಮೇಹದ ಅಪಾಯವನ್ನು ತಗ್ಗಿಸುತ್ತದೆ. ಬಿಳಿ ಅಕ್ಕಿಗಿಂತ ಕಂದು ಅಕ್ಕಿ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಪಾರು ಮಾಡುತ್ತದೆ ಎಂದು ಸಂಶೋಧನೆಗಳೇ ಸಾಬೀತು ಪಡಿಸಿವೆ.ಹಾಗಾದರೆ ಕಂದು ಅಕ್ಕಿ ಆರೋಗ್ಯಕ್ಕೆ ಹೇಗೆಲ್ಲಾ ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ.

ಬಿಳಿ ಅಕ್ಕಿಗಿಂತ ಕಂದು ಅಕ್ಕಿ ಹೇಗೆ ಉತ್ತಮ?

Brown Rice Recipes to Try | Femina.in

ಸಾಮಾನ್ಯವಾಗಿ ನಾವೆಲ್ಲರೂ ಬಿಳಿ ಅಕ್ಕಿಯನ್ನು ಪ್ರತಿನಿತ್ಯ ಸೇವನೆ ಮಾಡುತ್ತೇವೆ. ಕೆಲವು ಸಂಶೋಧನೆಗಳ ಪ್ರಕಾರ, ಬಿಳಿ ಅಕ್ಕಿಗೆ ಹೋಲಿಸಿದರೆ ಕಂದು ಅಕ್ಕಿ ಆರೋಗ್ಯಕರವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

USDA ಫುಡ್‌ಡೇಟಾ ಸೆಂಟ್ರಲ್ ಪ್ರಕಾರ, ಕಂದು ಅಕ್ಕಿಯು ಮ್ಯಾಂಗನೀಸ್‌, ಕಬ್ಬಿಣ, ಸತು, ರಂಜಕ, ಕ್ಯಾಲ್ಸಿಯಂ, ಸೆಲೆನಿಯಮ್‌, ಮೆಗ್ನೀಶಿಯಮ್‌ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಖನಿಜಗಳನ್ನು ಹೊಂದಿದೆ.

ಬಿಳಿ ಅಕ್ಕಿಗೆ ಹೋಲಿಸಿದರೆ ಕಂದು ಅಕ್ಕಿ ರುಚಿಯಾಗಿಲ್ಲದಿರಬಹುದು ಆದರೆ ವಿವಿಧ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಕಂದು ಅಕ್ಕಿ ಬೆಸ್ಟ್‌.

ಮಧುಮೇಹಕ್ಕೆ ಬಹಳ ಒಳ್ಳೆಯದು

Diabetes: ಮಧುಮೇಹ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

ಕಂದು ಅಕ್ಕಿಯು ಫೈಟಿಕ್‌ ಆಸಿಡ್‌, ಫೈಬರ್‌ ಮತ್ತು ಪಾಲಿಫಿನಾಲ್‌ಗಳಿಂದ ತುಂಬಿದೆ. ಈ ಅಕ್ಕಿಯು ಕಡಿಮೆ ಗ್ಲೈಸೆಮಿಕ್‌ ಸೂಚಿಯನ್ನು ಹೊಂದಿದ್ದು, ಇನ್ಸುಲಿನ್‌ ಉಲ್ಬಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಉತ್ತೇಜಿಸುತ್ತದೆ.

ಇದು ಸಂಕೀರ್ಣ ಕಾಬೋಹೈಡ್ರೇಟ್‌ ಆಗಿದ್ದು, ಬಿಳಿ ಅಕ್ಕಿಗೆ ಹೋಲಿಸಿದರೆ ಸಕ್ಕರೆಯನ್ನು ನಿಧಾನಗತಿಯಲ್ಲಿ ಬಿಡುಗಡೆ ಮಾಡುತ್ತದೆ. ಹಾಗಾಗಿ ಮಧುಮೇಹ ಹೊಂದಿರುವವರು ನಿಸ್ಸಂದೇಹವಾಗಿ ಕಂದು ಅಕ್ಕಿಯನ್ನು ಸೇವನೆ ಮಾಡಬಹುದು.

ಜೀರ್ಣಕ್ರಿಯೆ ಮತ್ತು ತೂಕ ನಷ್ಟಕ್ಕೆ ಉತ್ತಮ

Why Brown Rice Is Better Than White Rice | Brown Rice Nutrition Facts

ಬ್ರೌನ್‌ ರೈಸ್‌ ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಪಡಿಸುವುದಿಲ್ಲ. ಇದರಲ್ಲಿರುವ ಫೈಬರ್‌ ಕರುಳಿನ ಚಲನವಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಪದೇ ಪದೇ ಹಸಿವಾಗುವುದನ್ನು ನಿಯಂತ್ರಿಸುತ್ತದೆ. ಇದರಿಂದ ನೀವು ಯಾವಾಗಲೂ ಪೂರ್ಣವಾಗಿರುತ್ತೀರಿ.

ಇದರಿಂದ ನೀವು ಹೆಚ್ಚೆಚ್ಚು ಕ್ಯಾಲೋರಿಗಳಿರುವ ಆಹಾರದಿಂದ ದೂರ ಉಳಿಯುತ್ತೀರಿ. ಹಾಗಾಗಿ ನಿಮ್ಮ ತೂಕ ನಷ್ಟಕ್ಕೆ ಬ್ರೌನ್ ರೈಸ್‌ ಸೇವನೆ ಮಾಡುವುದು ಬಹಳ ಒಳ್ಳೆಯದು. ಬಹುತೇಕ ಮಂದಿ ತೂಕ ನಿರ್ವಹಣೆಗೆ ಅನ್ನವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾರೆ. ಬಿಳಿ ಅಕ್ಕಿಯ ಬದಲಾಗಿ ಬ್ರೌನ್‌ ರೈಸ್‌ ಆಯ್ಕೆ ಮಾಡಿಕೊಳ್ಳಿ.

ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ

Premium Photo | White rice (thai jasmine rice) and unmilled rice isolated  on white background

ಬಿಳಿ ಅಕ್ಕಿಗೆ ಹೋಲಿಸಿದರೆ ಬ್ರೌನ್ ರೈಸ್‌ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಸಾಮಾನ್ಯವಾಗಿ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ಕಡಿಮೆ ಮಾಡಲು, ದೇಹದಲ್ಲಿರುವ ವಿಷವನ್ನು ತೊಡೆದು ಹಾಕಲು ಉತ್ತೇಜಿಸುತ್ತದೆ. ಒಟ್ಟಾರೆ ಉತ್ಕರ್ಷಣ ನಿರೋಧಕವಿರುವ ಆಹಾರವು ಆರೋಗ್ಯ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.

ಕೊಲೆಸ್ಟ್ರಾಲ್‌

ಕೊಲೆಸ್ಟ್ರಾಲ್‌ ಹೊಂದಿರುವವರು ಬ್ರೌನ್‌ ರೈಸ್‌ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ತಗ್ಗಿಸಿಕೊಳ್ಳಬಹುದು.

ಅಧ್ಯಯನದ ಪ್ರಕಾರ, ಕಂದು ಮತ್ತು ಕಪ್ಪು ಅಕ್ಕಿಯಂತಹ ಧಾನ್ಯಗಳು ಬಾಡಿ ಮಾಸ್‌ ಇಂಡೆಕ್ಸ್‌ ಮತ್ತು ಕೊಬ್ಬಿನ ಇಳಿಕೆಗೆ ಸಂಬಂಧಿಸುವುದರಿಂದ ದೇಹದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಬಹಿರಂಗ ಪಡಿಸಿದೆ.

ನಿಮಗೆ ತಿಳಿದಿರಲಿ, ಅಧಿಕ ಕೊಲೆಸ್ಟ್ರಾಲ್‌ ಆಹಾರಗಳು ನ್ಯೂರೋ ಡಿಜೆನೆರಟಿವ್ ಡಿಸಾರ್ಡರ್‌ಗಳ ಅಪಾಯವನ್ನು ಹೆಚ್ಚಿಸುತ್ತವೆ. ಅಲ್ಲದೆ ಅರಿವಿನ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತದೆ.

ಬ್ರೌನ್‌ ರೈಸ್‌ನ ಮತ್ತಷ್ಟು ಆರೋಗ್ಯ ಪ್ರಯೋಜನಗಳು

10 Early Signs of Heart Disease You Should Not Ignore | Medanta

  • ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
  • ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ
  • ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬುತ್ತದೆ
  • ಖಿನ್ನತೆಯನ್ನು ದೂರವಾಗಿಸುತ್ತದೆ
  • ಬಲಿಷ್ಠವಾದ ಮೂಳೆಯನ್ನು ಪಡೆಯಬಹುದು
  • ಸುಖವಾದ ನಿದ್ರೆಗೆ ಸಹಾಯಕಾರಿ

 

Which Rice Is Better For You White Rice Or Brown Rice.