ಅಡುಗೆಯಲ್ಲಿ ಕ್ಯಾಪ್ಸಿಕಂ ತಪ್ಪದೇ ಬಳಸಬೇಕು ಯಾಕೆ ಗೊತ್ತಾ?

07-04-22 09:24 pm       Source: Vijayakarnataka   ಡಾಕ್ಟರ್ಸ್ ನೋಟ್

ಕ್ಯಾಪ್ಸಿಕಂ ಅಡುಗೆಯಲ್ಲಿ ಬಳಸುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಗೊತ್ತಾ?

ಕ್ಯಾಪ್ಸಿಕಂ ಅಥವಾ ದೊಡ್ಡ ಮೆಣಸಿನಕಾಯಿ ರುಚಿಯಾದ ತರಕಾರಿಯಾಗಿದ್ದು ವಿವಿಧ ಬಣ್ಣಗಳಲ್ಲಿ ದೊರೆಯುತ್ತವೆ. ಉದಾಹರಣೆಗೆ ಹಳದಿ, ಕಿತ್ತಳೆ, ಕೆಂಪು ಮತ್ತು ಹಸಿರು. ಕ್ಯಾಪ್ಸಿಕಂ ಅನ್ನು ಬೇಯಿಸಿ ಅಥವಾ ಕಚ್ಚಾವಾಗಿ ಕೂಡ ಸೇವನೆ ಮಾಡಬಹುದು. ಈ ಕ್ಯಾಪ್ಸಿಕಂ ವಾಸ್ತವವಾಗಿ ಅಮೆರಿಕಾದ ಉಷ್ಣವಲಯದಲ್ಲಿ ಹುಟ್ಟಿಕೊಂಡಿತು. ಇದೊಂದು ತರಕಾರಿಯಾಗಿ ಮಾತ್ರವಲ್ಲದೇ ಅತ್ಯುತ್ತಮವಾದ ಔಷಧಿಯಾಗಿ ಕೂಡ ಬಳಸಲಾಗುತ್ತದೆ.

ಕ್ಯಾಪ್ಸಿಯಂನಲ್ಲಿ ಕೊಬ್ಬಿನಂಶ ಕಡಿಮೆ ಇರುವುದರಿಂದ ಅನೇಕ ರೋಗಗಳನ್ನು ಹುಟ್ಟಿನಿಂದಲೇ ತಡೆಯುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪೋಷಕಾಂಶಗಳಿಂದ ಶ್ರೀಮಂತವಾಗಿದೆ. ಕ್ಯಾಪ್ಸಿಕಂನಲ್ಲಿರುವ ಕಿಣ್ವಗಳು ಗ್ಯಾಸ್ಟ್ರಿಕ್‌, ಕ್ಯಾನ್ಸರ್‌ ಮತ್ತು ಅನ್ನನಾಳದ ಕ್ಯಾನ್ಸರ್‌ ಅನ್ನು ತಡೆಯಲು ಸಹಾಯ ಮಾಡುತ್ತದೆ.

ಅಲ್ಲದೆ, ಖನಿಜಗಳು ಮತ್ತು ಜೀವಸತ್ವಗಳನ್ನು ಸಮೃದ್ಧವಾಗಿ ಹೊಂದಿದೆ. ಹಾಗಾದರೆ ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ದೊರೆಯುವ ಲಾಭಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿ ತಿಳಿಯಿರಿ.

ನಿಮ್ಮ ಹೃದಯಕ್ಕೆ ಒಳ್ಳೆಯದು

Weight Loss Tip of the Week: How Eating Bell Peppers Can Help You Lose  Weight | 🍏 LatestLY

ಕ್ಯಾಪ್ಸಿಕಂ ಅನ್ನು ಪ್ರತಿನಿತ್ಯ ಅಡುಗೆಯಲ್ಲಿ ಬಳಸಬೇಕು. ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಇದೊಂದು ವಿಶಿಷ್ಟವಾದ ತರಕಾರಿಯಾಗಿದ್ದು, ಫೋಲೇಟ್ ಮತ್ತು ವಿಟಮಿನ್‌ ಬಿ 6 ಅನ್ನು ಹೇರಳವಾಗಿ ಹೊಂದಿದೆ.

ವಾಸ್ತವವಾಗಿ ಇದು ಹೋಮೊಸಿಸ್ಟೈನ್‌ ಮಟ್ಟವನ್ನು ತಗ್ಗಿಸುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾಪ್ಸಿಕಂ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುವುದರಿಂದ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಪಾರು ಮಾಡುತ್ತದೆ.ಒಟ್ಟಾರೆ ಉತ್ತಮ ಹೃದಯಕ್ಕೆ ಆಹಾರದಲ್ಲಿ ಕ್ಯಾಪ್ಸಿಕಂ ಸೇವನೆ ಮಾಡುವುದು ಬಹಳ ಒಳ್ಳೆಯದು.

​ಚಯಾಪಚಯ ಕ್ರಿಯೆ ಸುಧಾರಿಸುತ್ತದೆ

Best 500+ Bell Pepper Pictures | Download Free Images on Unsplash

ಕ್ಯಾಪ್ಸಿಕಂ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ಈ ಕಾರಣದಿಂದಲೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.ಹಾಗೆಯೇ ತೂಕವನ್ನು ಇಳಿಸಿಕೊಳ್ಳಲು ಕೂಡ ಈ ವಿಶಿಷ್ಟವಾದ ತರಕಾರಿ ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ಕೊಬ್ಬಿನಂಶವಿರುವ ಕ್ಯಾಪ್ಸಿಕಂ ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಮೂಲಕ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ನೀವು ತ್ವರಿತವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತೀರಿ.

ಕ್ಯಾನ್ಸರ್‌ ವಿರೋಧಿ ಗುಣವನ್ನು ಹೊಂದಿದೆ

Cut up a bell pepper in seconds with the easiest kitchen hack ever (VIDEO)  – SheKnows

ಕ್ಯಾಪ್ಸಿಕಂ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವುದರಿಂದ ಹಲವಾರು ಕ್ಯಾನ್ಸರ್‌ ವಿರೋಧಿ ಪ್ರಯೋಜನಗಳನ್ನು ನೀಡುತ್ತವೆ. ಅಲ್ಲದೆ, ಕ್ಯಾಪ್ಸಿಕಂನಲ್ಲಿರುವ ಕಿಣ್ವಗಳು ಅನ್ನನಾಳ, ಗ್ಯಾಸ್ಟ್ರಿಕ್‌ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿ

8,139 Wet Pepper Stock Photos, Pictures & Royalty-Free Images - iStock

ಕ್ಯಾಪ್ಸಿಕಂನಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಸಂಧಿವಾತದ ಅಪಾಯವನ್ನುಕಡಿಮೆಮಾಡುತ್ತದೆ.ಹಾಗೆಯೇರೋಗನಿರೋಧಕಶಕ್ತಿಯನ್ನುಹೆಚ್ಚಿಸುತ್ತದೆ.ಕ್ಯಾಪ್ಸಿಕಂನಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವ ಮೂಲಕ ಕಣ್ಣಿನ ಪೊರೆ ಮತ್ತು ಅಸ್ಥಿ ಸಂಧಿವಾತದಂತಹ ಕಾಯಿಲೆಗಳಿಂದ ಕಾಪಾಡುತ್ತದೆ.

ಮಾನಸಿಕವಾಗಿ ನೀವು ಆತಂಕ, ಖಿನ್ನತೆಗಳನ್ನು ನೀವು ಹೊಂದಿದ್ದರೆ ಕ್ಯಾಪ್ಸಿಕಂ ಇಂತಹ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಕ್ಯಾಪ್ಸಿಕಂನಲ್ಲಿ ಮೆಗ್ನೀಶಿಯಮ್‌ ಮತ್ತು ವಿಟಮಿನ್‌ ಬಿ6 ಶ್ರೀಮಂತವಾಗಿದೆ. ಇವುಗಳು ಜೀವಸತ್ವಗಳ ನರಗಳ ಕಾರ್ಯಚಟುವಟಿಕೆಗೆ ಅವಶ್ಯಕವಾಗಿದೆ. ಅಲ್ಲದೆ, ಆತಂಕವನ್ನು ತಡೆಯುತ್ತದೆ. ಆತಂಕದಿಂದ ಉಂಟಾಗುವ ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ.

ಕಬ್ಬಿಣದ ಕೊರತೆ

How To Store Bell Peppers: Everything You Need To Know 2022

ಅಪೌಷ್ಟಿಕ ಆಹಾರದಿಂದಾಗಿ ಬಹಳಷ್ಟು ಮಂದಿ ಕಬ್ಬಿಣದ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಂತವರು ಕ್ಯಾಪ್ಸಿಕಂ ಅನ್ನು ನಿಯಮಿತವಾಗಿ ಪ್ರತಿ ನಿತ್ಯ ಸೇವನೆ ಮಾಡುವುದು ಬಹಳ ಒಳ್ಳೆಯದು.ಕ್ಯಾಪ್ಸಿಕಂ ವಿಟಮಿನ್‌ ಸಿಯನ್ನು ಹೊಂದಿ ಸಮೃದ್ಧವಾಗಿದೆ. ಇದು ದೇಹದಿಂದ ಕಬ್ಬಿಣವನ್ನು ಹೀರಿಕೊಳ್ಳುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಅಲ್ಲದೆ, ವಿಟಮಿನ್‌ ಸಿ ದೈನಂದಿನ ಅಗತ್ಯದ ಸುಮಾರು 300 ಪ್ರತಿಶತವನ್ನು ಹೊಂದಿರುತ್ತದೆ. ಯಾರೆಲ್ಲಾ ಕಬ್ಬಿಣದ ಕೊರತೆ ಹೊಂದಿರುವಿರೋ ಅವರೆಲ್ಲಾ ಕೆಂಪು ಕ್ಯಾಪ್ಸಿಕಂ ತಿನ್ನಲು ಶಿಫಾರಸ್ಸು ಮಾಡಲಾಗಿದೆ.

ನೋವು ನಿವಾರಕ

The Difference Between Red and Green Peppers, Explained - Thrillist

ಕ್ಯಾಪ್ಸಿಕಂ ಅತ್ಯುತ್ತಮವಾದ ನೋವು ನಿವಾರಕ ಗುಣವನ್ನು ಹೊಂದಿದೆ. ಇದರಲ್ಲಿರುವ ಕ್ಯಾಪ್ಸೈಸಿನ್‌ ಎಂಬ ಸಂಯುಕ್ತವು ಬೆನ್ನುಹುರಿ ನೋವನ್ನು ತಗ್ಗಿಸುತ್ತದೆ. ಅಲ್ಲದೆ, ವಿಟಮಿನ್‌ ಕೆ ಮೂಳೆಗಳನ್ನು ಬಲಿಷ್ಠಗೊಳಿಸಲು ಮತ್ತು ಮೂಳೆ ಮುರಿತದ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

6 Amazing Benefits Of Capsicum In Kannada.