ಸಿಪ್ಪೆ ಸಮೇತ ಸೇಬು ಹಣ್ಣು ತಿನ್ನಿ, ಆರೋಗ್ಯಕ್ಕೆ ಬಹಳ ಒಳ್ಳೆಯದು...

12-04-22 07:37 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಸೇಬು ಹಣ್ಣನ್ನು ಸಿಪ್ಪೆಯ ಸಮೇತ ಅಥವಾ ಸಿಪ್ಪೆ ತೆಗೆದು ತಿನ್ನಬೇಕೇ? ಈ ಬಗ್ಗೆ ಆರೋಗ್ ತಜ್ಞರು ಏನು ಹೇಳುತ್ತಾರೆ? ಇಲ್ಲದೆ ನೋಡಿ ಡಿಟೇಲ್ಸ್.

ದಿನಕ್ಕೊಂದು ಸೇಬು ತಿನ್ನಿ ಹಾಗೂ ವೈದ್ಯರಿಂದ ದೂರವಿರಿ ಎನ್ನುವ ನಾಣ್ಣುಡಿಯನ್ನು ನಾವೆಲ್ಲಾ ಸಣ್ಣವರು ಇರುವಾಗಲೇ ಕೇಳುತ್ತಾ ಬಂದಿದೆವೆ, ಅಲ್ಲವೇ? ಅದು ನಿಜ ಕೂಡ, ಇದಕ್ಕೆ ಮುಖ್ಯ ಕಾರಣ ಸೇಬು ಹಣ್ಣಿನಲ್ಲಿ, ನಮ್ಮ ಆರೋಗ್ಯಕ್ಕೆ ಬೇಕಾಗುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಹಾಗೂ ಆರೋಗ್ಯ ವೃದ್ಧಿಸುವ ಗುಣಲಕ್ಷಣಗಳು ಹೇರಳವಾಗಿ ಕಂಡು ಬರುವುದರಿಂದ,ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ!

ಇನ್ನು ನಾವೆಲ್ಲಾ ಹೆಚ್ಚಾಗಿ ಏನು ಮಾಡುತ್ತೇವೆ ಅಂದರೆ, ಸೇಬುಹಣ್ಣಿನ ಮೇಲ್ಭಾಗದ ಸಿಪ್ಪೆ ಗಳನ್ನೆಲ್ಲಾ ತೆಗೆದು, ಆನಂತರ ಅದರ ಒಳಗಿನ ಬಿಳಿ ತಿರುಳನ್ನು ಮಾತ್ರ ಸೇವಿಸುತ್ತೇವೆ. ಹೆಚ್ಚಿನವರಿಗೆ ಈ ಅಭ್ಯಾಸ ಇರುವುದರಿಂದ, ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆದು ಹಾಗೆಯೇ ಬಿಸಾಡಿ ಬಿಡುತ್ತಾರೆ! ಆದರೆ ತಜ್ಞರು ಹೇಳುವ ಪ್ರಕಾರ ಸೇಬು ಹಣ್ಣನ್ನು ಸಿಪ್ಪೆ ಸಹಿತ ಸೇವನೆ ಮಾಡುವುದರಿಂದ, ಆರೋಗ್ಯಕ್ಕೆ ಇನ್ನಿಲ್ಲದ ಪ್ರಯೋಜನಗಳನ್ನು ನಿರೀಕ್ಷಿಸ ಬಹುದಂತೆ! ಹಾಗಾದರೆ ಅಂತಹ ಆರೋಗ್ಯ ಪ್ರಯೋಜನಗಳು ಏನು ಎಂಬುದನ್ನು ಮುಂದೆ ಓದಿ...

ಪೌಷ್ಟಿಕಾಂಶಗಳ ಆಗರವೇ ಈ ಸೇಬುಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ

The #1 Way You're Eating Apples Wrong, Science Says — Eat This Not That

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಸೇಬು ಹಣ್ಣಿನ ತಿರುಳಿನಂತೆಯೇ, ಇದರ ಸಿಪ್ಪೆಯಲ್ಲಿ ಕೂಡ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ, ವಿಟಮಿನ್ಸ್‌ಗಳು, ಖನಿಜಾಂಶಗಳು, ಕರಗುವ ನಾರಿನಾಂಶ ಗಳು, ಕ್ಯಾಲ್ಸಿಯಂ, ಫೋಲೆಟ್ ಇತ್ಯಾದಿಗಳ ಆರೋಗ್ಯಕಾರಿ ಅಂಶಗಳು, ಈ ಹಣ್ಣಿನ ಸಿಪ್ಪೆಯಲ್ಲಿ, ಯಥೇಚ್ಛವಾಗಿ ಕಂಡು ಬರುತ್ತದೆ.

ನೆನಪಿನ ಶಕ್ತಿ ಹೆಚ್ಚಿಸುತ್ತದೆ

brain injury causes : ಮೆದುಳಿಗೆ ತೀವ್ರ ಗಾಯದಿಂದ, ನೆನಪಿನ ಶಕ್ತಿ ಹೋಗುವ ರಿಸ್ಕ್  ಜಾಸ್ತಿಯಂತೆ!! - study reveals that brain injury can increase risk of  alzheimer's disease | Vijaya Karnataka

  • ಮೆರೆವು ಅಥವಾ ನೆನೆಪಿನ ಶಕ್ತಿ ಕಮ್ಮಿ ಆಗುತ್ತಾ ಹೋಗುವುದು, ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ವರಲ್ಲಿಯೂ ಕಂಡು ಬರುತ್ತಿರುವುದು ಕಾಮನ್ ಸಮಸ್ಯೆಯಾಗಿ ಬಿಟ್ಟಿದೆ. ವಿದ್ಯಾರ್ಥಿ ಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ರೆಡಿಯಾಗಿರುತ್ತಾರೆ ಆದ್ರೆ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ,ಓದಿದೆಲ್ಲಾ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ!
  • ಇಂತಹ ಸಮಸ್ಯೆಯನ್ನು ಹೋಗ ಲಾಡಿಸಲು, ದಿನಕ್ಕೊಂದು ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವಿಸಬೇಕು, ಅಲ್ಲದೆ ಮಕ್ಕಳಿಗೆ ದಿನಕ್ಕೊಂದು ಗ್ಲಾಸ್ ಸೇಬು ಹಣ್ಣಿನ ಜ್ಯೂಸ್ ಮಾಡಿ ಕೊಡಬೇಕು. ಇನ್ನು ಮನೆಯಲ್ಲಿ ವಯಸ್ಸಾದವರು ಇದ್ದರೆ, ಸೇಬುಹಣ್ಣಿನ ಸಿಪ್ಪೆಯ ಸಹಿತ ಫ್ಯೂರಿ ತಯಾರು ಮಾಡಿ, ಅವರಿಗೆ ಸೇವಿಸಲು ನೀಡಿದ್ದರೆ ಒಳ್ಳೆಯದು

ಹಲ್ಲುಗಳ ಹಾಗೂ ವಸಡುಗಳ ಆರೋಗ್ಯಕ್ಕೆ ಬೇಕೇ ಬೇಕು

swollen gums home remedy: ಹಲ್ಲಿನ ವಸಡುಗಳು ಊದಿಕೊಂಡಿದ್ದರೆ ಅದಕ್ಕೆ ಇಲ್ಲಿದೆ ಸುಲಭ  ಪರಿಹಾರಗಳು - Vijaya Karnataka

ದಿನಕ್ಕೊಂದು ಸಿಪ್ಪೆ ಸಮೇತ ಸೇಬು ಹಣ್ಣನ್ನು ಸೇವಿಸುವುದರಿಂದ ಹಲ್ಲುಗಳು ಮತ್ತು ವಸಡುಗಳು ಗಟ್ಟಿಯಾಗುತ್ತವೆ. ಅಷ್ಟೇ ಅಲ್ಲದೇ ಯಾವುದೇ ರೀತಿಯ ಹುಳುಕು ಹಲ್ಲಿನ ಸಮಸ್ಯೆಗಳು, ಉಂಟಾಗದೇ ಆರೋಗ್ಯಕರವಾದ ಹಲ್ಲುಗಳನ್ನು ಹೊಂದಲು ನೆರವಾಗುತ್ತದೆ. ಸಾಧ್ಯವಾದರೆ ಆಗಾಗ ಸಿಪ್ಪೆ ಸಮೇತ ಸೇಬು ಹಣ್ಣಿನ ಸಲಾಡ್ ತಯಾರು ಮಾಡಿ ಸವಿಯುವುದು ಆರೋಗ್ಯ ಕರವಾಗಿರುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು

ಸಕ್ಕರೆ ಕಾಯಿಲೆ ಹೇಗೆ ಬರುತ್ತೆ? ಬಂದ್ರೆ ಏನು ಮಾಡಬೇಕು- ಇಲ್ಲಿದೆ ಸರಳ ಮಾರ್ಗ – Public  TV

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ಈ ಮಧುಮೇಹ ಕಾಯಿಲೆ, ಒಮ್ಮೆ ಬಂದರೆ ಹೋಗುವ ಕಾಯಿಲೆ ಮಾತ್ರ ಖಂಡಿತ ಅಲ್ಲ! ಹಾಗಾಗಿ ಈ ಖತರ್ನಾಕ್ ಕಾಯಿಲೆ ಬರುವ ಮುಂಚೆ ಎಚ್ಚರಿಕೆ ತೆಗೆದು ಕೊಳ್ಳುವುದು ಜಾಣತನದ ಕ್ರಮ...
  • ಹಾಗಾಗಿ ಈ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಲು ಕಟ್ಟುನಿಟ್ಟಾದ ಆಹಾರ ಪದ್ಧತಿ ಮತ್ತು ವ್ಯಾಯಾಮ ಇದಕ್ಕೆ ಪರಿಹಾರ ಎಂದು ಹೇಳಬಹುದು, ಇದರ ಜೊತೆಗೆ ಸೇಬುಹಣ್ಣುನ್ನು ಸಿಪ್ಪೆ ಸಮೇತ ಸೇವಿಸುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು.
  • ವಿಶೇಷವಾಗಿ ಸೇಬು ಹಣ್ಣಿನ ಸಿಪ್ಪೆಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣ ಮಾಡುವ ಗುಣವನ್ನು ಪಡೆದು ಕೊಂಡಿದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಸಿಪ್ಪೆಯ ಸಹಿತ ಸೇಬುಹಣ್ಣನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ.

ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ

  • ಕ್ಯಾನ್ಸರ್ ಕಾಯಿಲೆ ಎಂದು ಹೇಳುವಾಗಲೇ ಕೈಕಾಲುಗಳು ನಡುಕ ಉಂಟಾಗುತ್ತದೆ. ಈ ಕಾಯಿಲೆ ಬಂದು ಬಿಟ್ಟರೆ ಕೊನೆಗೆ ಸಾವೇ ಗತಿ ಎಂದು ಹೆಚ್ಚಿನವರು ಈಗಾಗಲೇ ಅಂದುಕೊಂಡು ಬಿಟ್ಟಿ ದ್ದಾರೆ. ಹೀಗಾಗಿ ಈ ಕಾಯಿಲೆ ನಮ್ಮನ್ನು ಆವರಿಸುವ ಮೊದಲು ಇದರಿಂದ ಆದಷ್ಟು ದೂರ ಇರುವ ಹಾಗೇ ನೋಡಿಕೊಳ್ಳಬೇಕು. ಇದಕ್ಕಾಗಿ ಆರೋಗ್ಯಕಾರಿ ಜೀವನ ಶೈಲಿಯ ಜೊತೆಗೆ ಸಿಯಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು
  • ಒಂದು ಸಂಶೋಧನೆಯ ಮೂಲದ ಪ್ರಕಾರ ಯಾರು ಪ್ರತಿದಿನ ಸಿಪ್ಪೆಸಹಿತ ಸೇಬುಹಣ್ಣನ್ನು ಸೇವನೆ ಮಾಡುತ್ತಾರೆಯೋ, ಅವರಿಗೆ ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಉಂಟಾಗುವ ಸಾಧ್ಯತೆ ಕಮ್ಮಿ ಇರುತ್ತದೆಯಂತೆ!

Is It Better To Eat An Apple With Or Without The Skin These Things You Must Know.