ಆರೋಗ್ಯಕರವಾದ ಆಹಾರ ಅಂತ ಜಾಸ್ತಿ ತಿಂತಾ ಇದ್ದೀರಾ?

13-04-22 07:46 pm       Source: Vijayakarnataka   ಡಾಕ್ಟರ್ಸ್ ನೋಟ್

ಈ ಆರೋಗ್ಯಕರವಾದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡ್ತಾ ಇದ್ದೀರಾ?

ಬಹತೇಕರು ಆರೋಗ್ಯಕರವಾದ ಆಹಾರದ ಮೇಲೆ ಹೆಚ್ಚು ಒಲವು ಹೊಂದಿರುತ್ತಾರೆ. ಅವರು ಉತ್ತಮವಾದ ಆರೋಗ್ಯಕ್ಕೆ ಪೋಷಕಾಂಶಗಳಿಂದ ತುಂಬಿದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಆದಷ್ಟು ಜಂಕ್‌ ಫುಡ್‌ಗಳಿಂದ ದೂರವಿರುತ್ತಾರೆ.

ಆದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಅಪಾರ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅಪಾಯವನ್ನು ಎದುರಿಸಬೇಕಾಗಬಹುದು. ಸೂಪರ್ ಫುಡ್‌ಗಳು ಕೂಡ ಕೆಲವೊಮ್ಮೆ ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡಬಹುದು. ಅತಿಯಾದರೆ ಅಮೃತವು ವಿಷ ಎಂಬಂತೆ ಯಾವುದೇ ಒಂದು ಆಹಾರವನ್ನು ಮಿತವಾಗಿ ಸೇವನೆ ಮಾಡಬೇಕು.ನೀವು ಕೂಡ ಈ ಕೆಳಗಿನ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುತ್ತೀರಾ? ಹಾಗಾದರೆ ಏನೆಲ್ಲಾ ಅಡ್ಡ ಪರಿಣಾಮಗಳನ್ನು ಪಡೆಯುತ್ತೀರಿ ಎಂಬುದನ್ನು ಇಲ್ಲಿ ತಿಳಿಯಿರಿ.

​ತುಪ್ಪ

Cow Ghee – orfiagro.com

ಚಿನ್ನದ ಬಣ್ಣ ಹೊಂದಿರುವ ತುಪ್ಪ ಆಹಾರವಾಗಿ, ಔಷಧಿಯಾಗಿ ಶತಮಾನದ ಹಿಂದಿನಿಂದಲೂ ಬಳಸಲಾಗುತ್ತಿದೆ. ತುಪ್ಪವು ಆಹಾರವನ್ನು ಸ್ವಾದಿಷ್ಟವಾಗಿಸುವುದು ಮಾತ್ರವಲ್ಲ, ರುಚಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

ಪೌಷ್ಟಿಕ ತಜ್ಞರು ಕೂಡ ಪ್ರತಿನಿತ್ಯ ಒಂದು ಚಮಚದಷ್ಟು ತುಪ್ಪ ತಿನ್ನಲು ಶಿಫಾರಸ್ಸು ಮಾಡುತ್ತಾರೆ. ಅಗತ್ಯಕ್ಕಿಂತ ಹೆಚ್ಚಾಗಿ ತುಪ್ಪವನ್ನು ತಿನ್ನುವುದರಿಂದ ದೇಹದ ತೂಕವು ಗಣನೀಯವಾಗಿ ಹೆಚ್ಚಾಗುತ್ತದೆ. ಏಕೆಂದರೆ ತುಪ್ಪವು ಸ್ಯಾಚುರೇಟೆಡ್‌ ಕೊಬ್ಬಿನಿಂದ ತುಂಬಿರುವುದರಿಂದ ದೇಹದ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಹೃದಯಾಘಾತಕ್ಕೂ ಕಾರಣವಾಗಬಹುದು ಎಚ್ಚರ.

ನೀರು

Why is Water so Important for the Body?

ಬಹುತೇಕರು ತೆಳ್ಳಗಿನ ದೇಹವನ್ನು ಪಡೆಯಲು ಸಾಕಷ್ಟು ನೀರನ್ನು ಕುಡಿಯುತ್ತಾರೆ. ಅಗತ್ಯಕ್ಕಿಂತ ಹೆಚ್ಚಾಗಿ ಅಥವಾ ಬಾಯಾರಿಕೆ ಆಗದೇ ಇದ್ದರೂ ಕೂಡ ನೀರು ಕುಡಿಯುತ್ತಾ ಇರುವುದರಿಂದ ಅನೇಕ ಸಮಸ್ಯೆಗಳು ಅಟ್ಯಾಕ್‌ ಮಾಡುತ್ತವೆ ಎಂಬುದು ನಿಮಗೆ ಗೊತ್ತಾ?

ಅವಶ್ಯಕತೆಗಿಂತ ಹೆಚ್ಚಾಗಿ ನೀರು ಸೇವನೆ ಮಾಡಿದಾಗ ಮೂತ್ರಪಿಂಡಗಳಿಗೆ ಅಪಾಯವನ್ನು ತಂದೊಡ್ಡುತ್ತದೆ. ಬಹತೇಕರು ಹೆಚ್ಚು ನೀರು ಕುಡಿದಾಗ ವಾಕರಿಕೆ ಮತ್ತು ತಲೆತಿರುಗುವಿಕೆಯನ್ನು ಅನುಭವಿಸುತ್ತಾರೆ.

ಜರ್ನಲ್‌ ಕ್ಲಿನಿಕಲ್‌ ಅಫ್ ಸ್ಪೋರ್ಟ್ಸ್‌ ಮೆಡಿಸಿನ್‌ ನಡೆಸಿದ ಅಧ್ಯಯನದ ಪ್ರಕಾರ, ಅತಿಯಾಗಿ ನೀರು ಕುಡಿಯುವುದರಿಂದ ಎಲೆಕ್ಟೋಲೈಟ್‌ಗಳನ್ನು ಹೊರಹಾಕುತ್ತದೆ. ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ, ಅತಿಯಾದ ನೀರು ಸಾವಿಗೂ ಕಾರಣವಾಗಬಹುದು.

ಬಾದಾಮಿ

How to Toast Almonds | Recipes, Dinners and Easy Meal Ideas | Food Network

ಪ್ರತಿನಿತ್ಯ ಬಾದಾಮಿ ಸೇವನೆಯಿಂದ ಸ್ಮರಣಾಶಕ್ತಿ ಹೆಚ್ಚಾಗುತ್ತದೆ. ಅಮೇರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಪ್ರಕಾರ, ಬಾದಾಮಿಯು ಮೊನೊಸಾಚುರೇಟೆಡ್‌ ಕೊಬ್ಬನ್ನು ಹೇರಳವಾಗಿ ಹೊಂದಿದೆ. ಇದು ಕೊಲೆಸ್ಟ್ರಾಲ್‌ ಅನ್ನು ಸುಧಾರಿಸಲು ಸಹಾಯ ಮಾಡುವುದಲ್ಲದೆ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಆದಾಗ್ಯೂ, ಆರೋಗ್ಯಕರವಾದ ಕೊಬ್ಬಿನಂಶವಿರುವ ಆಹಾರಗಳನ್ನು ಮಿತವಾಗಿ ಸೇವನೆ ಮಾಡಬೇಕೆ ವಿನಃ ಹೆಚ್ಚಾಗಿ ಸೇವನೆ ಮಾಡುವುದರಿಂದ ತೂಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.

ಚಾಕೋಲೆಟ್‌ಗಳು

Dangerous food combinations: ಆಹಾರ ಸೇವಿಸುವ ವಿಷ್ಯದಲ್ಲಿ ಎಚ್ಚರ! ಇಲ್ಲಾಂದ್ರೆ  ಆರೋಗ್ಯಕ್ಕೆ ಅಪಾಯ! - Vijaya Karnataka

ಚಾಕೋಲೆಟ್‌ಗಳು ಆರೋಗ್ಯಕರವಾದ ಹೃದಯಕ್ಕೆ ಬಹಳ ಒಳ್ಳೆಯದು. ಅಲ್ಲದೆ, ಸಣ್ಣ ಪ್ರಮಾಣದ ಚಾಕೋಲೆಟ್‌ಗಳನ್ನು ಸೇವನೆ ಮಾಡುವುದರಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಹೃದ್ರೋಗದ ಅಪಾಯವನ್ನು ತಡೆಯಬಹುದು.ಆದರೆ ಡಾರ್ಕ್‌ ಚಾಕೋಲೆಟ್‌ಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ವೇಗದ ಹೃದಯದ ಬಡಿತ, ನಿದ್ರಾಹೀನತೆಗೆ ಕಾರಣವಾಗುತ್ತದೆ.

ಕ್ರೂಸಿಫೆರಸ್‌ ತರಕಾರಿ

vitamins and minerals: ಕ್ರೂಸಿಫೆರಸ್ ತರಕಾರಿಗಳ ವಿಧಗಳು ಮತ್ತು ಪ್ರಯೋಜನಗಳು -  Vijaya Karnataka

ಕ್ರೂಸಿಫೆರಸ್‌ ತರಕಾರಿಗಳು ಉತ್ತಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಹೆಚ್ಚಾಗಿ ಕ್ರೂಸಿಫೆರಸ್‌ ತರಕಾರಿಗಳನ್ನು ಸೇವನೆ ಮಾಡುವುದರಿಂದ ಅನೇಕ ಅಪಾಯಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಏಕೆಂದರೆ ಅವುಗಳಲ್ಲಿ ಥಿಯೋಸೈನೇಟ್‌ ಎಂಬ ಸಂಯುಕ್ತದಿಂದ ತುಂಬಿದೆ. ಹಾಗಾಗಿ ಹೆಚ್ಚಾಗಿ ಸೇವನೆ ಮಾಡಿದಾಗ ಹೈಪೋಥೈರಾಯ್ಡಿಸಮ್‌ಗಳಿಗೆ ಕಾರಣವಾಗುತ್ತದೆ. ತೂಕ ಹೆಚ್ಚಳ ಮತ್ತು ಮಲಬದ್ಧತೆಯಂತಹ ಸಮಸ್ಯೆ ಕೂಡ ಹೆಚ್ಚಾಗಬಹುದು.

ಬೆಳ್ಳುಳ್ಳಿ

What Is Garlic?

ಅಡುಗೆ ಮನೆಯಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುವ ಬೆಳ್ಳುಳ್ಳಿಯು ಹೃದಯ ಮತ್ತು ರಕ್ತದ ಕಾಯಿಲೆಗಳಿಗೆ ಅತ್ಯಂತ ಪರಿಣಾಮಕಾರಿ ಮೂಲಿಕೆಯಾಗಿದೆ. ಇದು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌ ಮಟ್ಟಗಳು, ಅಸ್ಥಿಸಂಧಿವಾತದಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಅತ್ಯುತ್ತಮವಾಗಿದೆ. ಇಷ್ಟೆಲ್ಲಾ ಪ್ರಯೋಜನವಿರುವ ಬೆಳ್ಳುಳ್ಳಿಯು ಅತಿಯಾಗಿ ಸೇವನೆ ಮಾಡುವುದರಿಂದ ಅತಿಸಾರ, ಎದೆಯುರಿ, ಯಕೃತ್ತಿನ ವಿಷತ್ವದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇನ್ನು ರಕ್ತಸ್ರಾವ ಕೂಡ ಉಲ್ಬಣವಾಗಬಹುದು.

U Should Avoid This Healthy Food Too Much Intake.