ಈ ಮೂರು ಬಗೆಯ ಡ್ರೈ ಫ್ರೂಟ್ಸ್‌‌ಗಳನ್ನು ಬೆಳ್ಳಂಬೆಳಗ್ಗೆ ತಿನ್ನಬೇಕಂತೆ! ಯಾಕೆ ಗೊತ್ತಾ?

15-04-22 10:15 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಬೆಳಗ್ಗೆ ಎದ್ದ ಕೂಡಲೇ, ಕೆಲವೊಂದು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ...

ಬೆಳಗ್ಗೆ ಎದ್ದ ತಕ್ಷಣವೇ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಇದೆಯಾ? ಹಾಗಾದ್ರೆ ಇಂದೇ ಈ ಕೆಟ್ಟ ಅಭ್ಯಾಸವನ್ನು ನಿಲ್ಲಿಸಿಬಿಡಿ! ಆರೋಗ್ಯದ ದೃಷ್ಟಿಯಂದ ನೋಡುವುದಾದರೆ ಈ ಕಟ್ಟ ಅಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.. ಹಾಗಂತ ಈ ವಿಷ್ಯವನ್ನು ನಾವು ಹೇಳುತ್ತಿಲ್ಲ, ಹಲವಾರು ವೈದ್ಯಕೀಯ ಮೂಲಗಳು, ಹಾಗೂ ಸಂಶೋಧಕರು ಈ ಬಗ್ಗೆ ತಮ್ಮ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ.ನಿಮಗೆ ಗೊತ್ತಿರಲಿ, ಬೆಳಿಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ನಾವು ಯಾವೆಲ್ಲಾ ಆಹಾರಪದಾರ್ಥ ಗಳನ್ನು ಸೇವನೆ ಮಾಡುತ್ತೇವೆಯೋ, ಅದರ ಆಧಾರದ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ. ಹೀಗಾಗಿ ಈ ಸಮಯದಲ್ಲಿ ನಾವು ಸೇವನೆ ಮಾಡುವ ಆಹಾರಪದಾರ್ಥಗಳು ಮತ್ತು ಮುಂಜಾನೆಯ ಕೆಲವೊಂದು ಆರೋಗ್ಯಕಾರಿ ಅಭ್ಯಾಸಗಳು, ಇವೆರಡೂ ಕೂಡ ಆರೋಗ್ಯಕರವಾಗಿ ಕೂಡಿರಬೇಕು.

ಬೆಳಗಿನ ಸಮಯದ ಅಭ್ಯಾಸಗಳು

Warmth like no other, Come Taste the Local Chai of India! - Local Samosa

ಕೆಲವರು ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಗೆ ಕಾಫಿ ಕುಡಿದರೆ, ಇನ್ನು ಕೆಲವರು ಗಿಡಮೂಲಿಕೆ ಚಹಾ, ಅಥವಾ ಸಾದಾ ಚಹಾ ಕುಡಿಯಲು ಇಷ್ಟಪಡುತ್ತಾರೆ, ಇವೆಲ್ಲಾವೂ ಕೂಡ ಅವರನ್ನು ಪರೋಕ್ಷವಾಗಿ ಉಲ್ಲಾಸಿತ ರಾಗಿರುವಂತೆ ಮಾಡುವುದು ಅಲ್ಲದೇ, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕೂಡ ಸುಧಾರಿಸಿ, ಅವರ ಇಡೀ ದಿನ ಅತ್ಯುತ್ತಮ ಕಾರ್ಯ ಚಟುವಟಿಕೆ ಯೊಂದಿಗೆ ಕೂಡಿರುವಂತೆ ನೋಡಿಕೊಳ್ಳುತ್ತದೆ.ಇನ್ನು ಆರೋಗ್ಯದ ಬಗ್ಗೆ ಕಾಳಜಿ ಇರುವವರು, ದಿನಾ ಬೆಳಗ್ಗೆ ಎದ್ದ ಕೂಡ ರಾತ್ರಿ ಪೂರ್ತಿ ನೆನೆಸಿಟ್ಟ, ಬಾದಾಮಿಬೀಜಗಳನ್ನು ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇದೇ ರೀತಿಯಾಗಿ ಇನ್ನೂ ಕೆಲವೊಂದು, ಮಂಜಾನೆಯ ಆರೋಗ್ಯಕಾರಿ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

ಹಾಲಿನಲ್ಲಿ ನೆನೆಸಿಟ್ಟ ಖರ್ಜೂರ

benefits of eating dates: ಖರ್ಜೂರ ಮಿಶ್ರಿತ ಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ  ದುಪ್ಪಟ್ಟು ಲಾಭಗಳು! - Vijaya Karnataka

ಈಗಂತೂ ರಂಜಾನ್ ತಿಂಗಳು ನಡೆಯುತ್ತಿರುವುದರಿಂದ, ಎಲ್ಲಿ ನೋಡಿದರೂ ಕೂಡ ಖರ್ಜೂರಗಳು ಹೇರಳ ವಾಗಿ ಸಿಗುತ್ತಿದೆ. ಎಲ್ಲಾ ಒಣ ಫಲಗಳಂತೆಯೇ, ಇವು ಕೂಡ ಅಷ್ಟೇ ಬೆಲೆಯಲ್ಲಿ ಸ್ವಲ್ಪ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯದ ವಿಷ್ಯದಲ್ಲಿ ಮೋಸವಿಲ್ಲ!ಮುಖ್ಯವಾಗಿ ಖರ್ಜೂರಗಳಲ್ಲಿ ಅಪಾರ ಪ್ರಮಾಣದಲ್ಲಿ ಕ್ಯಾಲೋರಿಗಳು ಹಾಗೂ ನೈಸರ್ಗಿಕದತ್ತವಾಗಿ ಸಿಗುವ ಸಕ್ಕರೆ ಅಂಶವು, ದೇಹದ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶದ ಜೊತೆಗೆ ನಾರಿನ ಅಂಶದ ಪ್ರಮಾಣ ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.ಅದರಲ್ಲೂ ಮುಖ್ಯವಾಗಿ ಖರ್ಜೂರಗಳನ್ನು ಹಾಗೆ ತಿನ್ನುವ ಬದಲು, ರಾತ್ರಿ ಪೂರ್ತಿ ಹಾಲಿನಲ್ಲಿ ನೆನೆಸಿದ ಖರ್ಜೂರಗಳನ್ನು ಬೆಳಗ್ಗೆ ಎದ್ದ ಕೂಡಲೇ ಸೇವನೆ ಮಾಡಿದರೆ, ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆಯಂತೆ.. ಉದಾಹರಣೆಗೆ ನೋಡುವುದಾದರೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು, ಗರ್ಭಿಣಿ ಮಹಿಳೆಯರು, ನಿಮಿರುವಿಕೆ ಸಮಸ್ಯೆ ಇರುವ ಪುರುಷರು ಅಭ್ಯಾಸವನ್ನು ಅನುಸರಿಸಿದರೆ, ಒಳ್ಳೆಯ ಫಲಿತಂಶವನ್ನು ಕಾಣಬಹುದಾಗಿದೆ.

ನೆನೆಸಿಟ್ಟ ಬಾದಾಮಿ ಬೀಜಗಳು

ನೆನೆಸಿಟ್ಟ ಬಾದಾಮಿ ಬೀಜ-ಇದನ್ನು ಎಷ್ಟು ಹೊಗಳಿದರೂ ಸಾಲದು! | reasons to eat soaked  almonds in the morning every day - Kannada BoldSky

ಬೆಳಗಿನ ಸಮಯದಲ್ಲಿ ದಿನಾ ಒಂದೆರಡು ನೆನೆಸಿದ ಬಾದಾಮಿ ಬೀಜಗಳನ್ನು ಸೇವನೆ ಮಾಡು ವುದರಿಂದ, ದೀರ್ಘಕಾಲದವರೆಗೆ ಕಾಡುವ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡದ ಸಮಸ್ಯೆ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಹೃದಯಕ್ಕೆ ಸಂಬಂಧ ಪಟ್ಟಂತಹ ಕಾಯಿಲೆಗಳು ಕೂಡ ಕಂಟ್ರೋಲ್‌ಗೆ ಬರುತ್ತದೆ, ಒಟ್ಟಾರೆಯಾಗಿ ಹೇಳುವುದಾದರೆ, ಈ ಒಣಫಲಗಳು ಸ್ವಲ್ಪ ದುಬಾರಿಯಾದರೂ ಕೆಲವೊಂದು ಮಾರಕ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ನೆನೆಹಾಕಿದ ಒಣದ್ರಾಕ್ಷಿ

raisins soaked in water: ನೀರಿನಲ್ಲಿ ಒಣದ್ರಾಕ್ಷಿ ನೆನೆಸಿಟ್ಟು ದಿನಾ ಒಂದೆರಡು  ತಿಂದ್ರೆ, ಆರೋಗ್ಯಕ್ಕೆ ಒಳ್ಳೆಯದು - Vijaya Karnataka

ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವಂತಹ ಒಣದ್ರಾಕ್ಷಿಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಟ್ಟು, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು... ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಈ ಒಣಫಲದಲ್ಲಿ ಸಿಗುವ ಉನ್ನತ ಮಟ್ಟದ ಪೊಟಾಶಿಯಂ ಕಬ್ಬಿನಾಂಶ, ಮತ್ತು ಕ್ಯಾಲ್ಸಿಯಂ ಪ್ರಮಾಣವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಆರೋಗ್ಯವಾಗಿ ಇಡುತ್ತದೆ.
ಇನ್ನು ಮೊದಲೇ ಹೇಳಿದ ಹಾಗೆ ಇದರಲ್ಲಿ ನೈಸರ್ಗಿಕದತ್ತವಾಗಿ ಸಿಗುವ ಸಕ್ಕರೆ ಅಂಶ ಹಾಗೂ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳ ಅಂಶ ಇರುವುದರಿಂದ, ಇವುಗಳನ್ನು ಮಿತವಾಗಿ ಸೇವನೆ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಇನ್ನು ಪ್ರಮುಖವಾಗಿ ಒಣ ದ್ರಾಕ್ಷಿಯಲ್ಲಿ ಉನ್ನತ ಮಟ್ಟದ ನಾರಿನಾಂಶ ಇರುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯು ಸರಿಯಾಗಿ ನಿರ್ವಹಣೆ ಆಗುವುದು ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ನಿಯಂತ್ರಣಕ್ಕೆ ಬರುವುದು.

ಕೆಲವೊಂದು ಆರೋಗ್ಯಕಾರಿ ಟಿಪ್ಸ್ ಇಲ್ಲಿದೆ ನೋಡಿ...

Wonder Water: Here Are The Key Benefits Of Drinking Water | Femina.in

  • ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಿದ ಬಳಿಕ, ಸುಮಾರು ಹತ್ತರಿಂದ ಹದಿನೈದು ನಿಮಿಷಗಳು ಬಿಟ್ಟು ಕಾಫಿ ಅಥವಾ ಚಹಾ ಕುಡಿಯಬಹುದು. ಆದರೆ ಖಾಲಿ ಹೊಟ್ಟೆಗೆ ಇವುಗಳನ್ನು ಸೇವಿಸಲು ಹೋಗಬೇಡಿ...
  • ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಗೆ ಒಂದೆರಡು ಲೋಟ ನೀರು ಕುಡಿದು, ಆ ಬಳಿಕ ಆಹಾರ ತಿನ್ನಲು ಮುಂದಾಗಿ...
  • ಉತ್ತಮ ಫಲಿತಾಂಶಕ್ಕಾಗಿ ಬೆಳಗಿನ ಸಮಯದಲ್ಲಿ ಎದ್ದ ಬಳಿಕ, ಸುಮಾರು ಅರ್ಧ ಗಂಟೆಯ ಒಳಗಾಗಿ ಈ ಮೇಲೆ ಹೇಳಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ..
  • Join our WhatsApp group
  • Follow us on Facebook 
  • Follow us on Twitter

These Are The First Thing You Should Eat In The Empty Stomach To Stay Happy And Healthy Way.