ಗೇರುಹಣ್ಣಿನಲ್ಲಿದೆ ಆರೋಗ್ಯ ಹೆಚ್ಚಿಸುವ ಪವರ್‌

19-04-22 06:01 pm       Source: Vijayakarnataka   ಡಾಕ್ಟರ್ಸ್ ನೋಟ್

ಗೇರುಹಣ್ಣುಗಳಲ್ಲಿ ಆರೋಗ್ಯ ವೃದ್ಧಿಸುವ ಸೂಪರ್‌ ಪವರ್‌ ಇದೆ. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮಲೆನಾಡ ಮಡಿಲಲ್ಲಿಈಗ ಗೇರು ಬೆಳೆಯ ಸಂಭ್ರಮ ಆರಂಭವಾಗುತ್ತಿದೆ. ಗೇರು ಬೀಜ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟು ಉತ್ಕೃಷ್ಟವಾಗಿ ಕೆಲಸ ಮಾಡುತ್ತದೆಯೋ ಅಷ್ಟೇ ಪ್ರಮಾಣದ ಕೆಲಸವನ್ನು ಗೇರು ಹಣ್ಣು ಕೂಡ ಮಾಡುತ್ತದೆ. ಹೌದು, ರಸಭರಿತವಾಗಿರುವ, ಸಿಹಿಯಾಗಿರುವ ಗೇರು ಹಣ್ಣು ದೇಹಕ್ಕೆ ಒಂದು ರೀತಿಯ ಶಕ್ತಿ ನೀಡುವ ಆಗರ ಎಂದರೆ ತಪ್ಪಾಗದು. ಯಥೇಚ್ಛವಾದ ಪ್ರೋಟೀನ್‌, ವಿಟಮಿನ್‌, ಮಿನರಲ್ಸ್‌, ಕ್ಯಾಲ್ಸಿಯಂ, ಕಬ್ಬಿಣಾಂಶ, ಜಿಂಕ್‌, ಮ್ಯಾಂಗನೀಸ್‌ ಹೀಗೆ ಹಲವು ಬಗೆಯ ಉನ್ನತ ಗುಣಗಳನ್ನು ಅಡಕವಾಗಿರಿಸಿಕೊಂಡಿದೆ.

ಬೇಸಿಗೆಯಲ್ಲಿ ದಾರಿ ಹೋಕರ ಬಾಯಾರಿಕೆ ತಣಿಸುವ ಹಣ್ಣಾಗಿ ಗೇರು ಹಣ್ಣು ಹೆಚ್ಚು ಪರಿಚಿತ. ಗೇರುಹಣ್ಣಿನಲ್ಲಿ ಹಳದಿ, ಕೆಂಪು, ಕೇಸರಿ ಮಿಶ್ರಿತ ಕೆಂಪು ಹೀಗೆ ಬಗೆಬಗೆಯ ಬಣ್ಣಗಳಿವೆ. ಕಿಡ್ನಿ ಆಕಾರದಲ್ಲಿರುವ ಈ ಹಣ್ಣುಗಳ ತುದಿಯಲ್ಲಿ ಗೇರುಬೀಜ ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯ ಪದಾರ್ಥವಾಗಿರುವ ಗೇರು ಬೀಜವನ್ನು ಕೊಯ್ದು ಹಣ್ಣನ್ನು ಬಿಸಾಕುವವರಿದ್ದಾರೆ. ಆದರೆ ನೆನಪಿಡಿ, ಗೇರು ಹಣ್ಣನ್ನು ಎಸೆಯುವ ಬದಲು ಸೇವಿಸಿ ನೋಡಿ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು.

​ಕ್ಯಾನ್ಸರ್‌ ನಿಯಂತ್ರಣಕ್ಕೆ ಸಹಕಾರಿ

ಮಧುಮೇಹ, ಮರೆವು, ಕ್ಯಾನ್ಸರ್ ಮತ್ತಿತರ ಕಾಯಿಲೆ ತಡೆಗಟ್ಟುವ MIND ಡಯಟ್‌ | MIND Diet To  Prevent Diabetes, CVD, Dementia and More - Kannada BoldSky

ಗೇರುಬೀಜ ಮಾತ್ರವಲ್ಲ. ಗೇರುಹಣ್ಣುಗಳು ದೇಹವನ್ನು ಸುರಕ್ಷಿತವಾಗಿಡಲು ನೆರವಾಗುತ್ತವೆ. ಗೋಡಂಬಿ ಹಣ್ಣುಗಳು ಪ್ರೊಆಂಥೋಸಯಾನಿನ್‌ಗಳೆಂದು ಕರೆಯಲ್ಪಡುವ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಕ್ಯಾನ್ಸರ್ ಕೋಶಗಳ ಪುನರಾವರ್ತನೆಯನ್ನು ನಿಗ್ರಹಿಸುವ ಫ್ಲೇವೊನಾಲ್‌ಗಳ ವರ್ಗವಾಗಿದೆ. ಒಂದು ಬಾರಿ ಕ್ಯಾನ್ಸರ್‌ ಕಾರಕ ಜೀವಕೋಶಗಳ ಬೆಳವಣಿಗೆ ಆರಂಭವಾದರೆ ಅದನ್ನು ತಡೆಯುವುದು ತುಸು ಕಷ್ದ ಕೆಲಸ. ಆದರೆ ಗೇರುಹಣ್ಣುಗಳಲ್ಲಿರುವ ಕಾಪರ್‌, ಕ್ಯಾಲ್ಸಿಯಂ ಅಂಶಗಳು ಕ್ಯಾನ್ಸರ್‌ ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಆದ್ದರಿಂದ ಗೇರುಹಣ್ಣುಗಳು ಸಿಕ್ಕಾಗ ತಿಂದುಬಿಡಿ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಹೃದಯ ಸ್ವಾಸ್ಥ್ಯ, ಕ್ಯಾನ್ಸರ್‌ ತಡೆಗಟ್ಟುವ ಶಕ್ತಿ ಏಲಕ್ಕಿಗಿದೆ! | Health Benefits Of  Cardamom In Kannada - Kannada BoldSky

ಗೇರುಹಣ್ಣುಗಳು ರಕ್ತ ಹೆಪ್ಪುಗಟ್ಟುವಿಕೆಗೆ ಮುಖ್ಯವಾದ ಕೊಬ್ಬಿನಾಮ್ಲಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಾಗಿದೆ. ಅಲ್ಲದೆ ಗೇರು ಹಣ್ಣಿನಲ್ಲಿರುವ ವಿಟಾಮಿನ್‌ಗಳು ಹೃದಯದ ಬಡಿತವನ್ನು ಸಮತೋಲದಲ್ಲಿರಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಒಮ್ಮೆ ಗೇರು ಹಣ್ಣುಗಳ ರಸವನ್ನು ಹೀರಿದರೆ ಒತ್ತಡ ನಿವಾರಣೆಯಾಗುತ್ತದೆ. ಆದ್ದರಿಂದ ಸೀಸನ್‌ನಲ್ಲಿ ಗೇರು ರಸವನ್ನು ಹೀರಿಕೊಳ್ಳಿ. ಆರೋಗ್ಯಯುತವಾಗಿರಿ.

ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುತ್ತದೆ

cashew fruit: ಗೇರುಹಣ್ಣಿನಲ್ಲಿದೆ ಆರೋಗ್ಯ ಹೆಚ್ಚಿಸುವ ಪವರ್‌ - Vijaya Karnataka

ಗೇರುಹಣ್ಣುಗಳಲ್ಲಿರುವ ಜಿಂಕ್‌ ಮತ್ತು ಹಲವು ವಿಟಾಮನ್‌ಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ನೆನಪಿಡಿ ಗೇರುಹಣ್ಣಗಳನ್ನು ತಿನ್ನುವಾಗ ಹಣ್ಣಿನ ಬುಡದ ಭಾಗವನ್ನು ಸೇವಿಸಬೇಡಿ. ಇದು ಗಂಟಲು ತುರಿಕೆಗೆ ಕಾರಣವಾಗುತ್ತದೆ. ಅಲ್ಲದೆ ಗೇರು ಹಣ್ಣಿನಲ್ಲಿರುವ ಸಮೃದ್ಧ ನೀರಿನ ಅಂಶ ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ. ದೇಹವನ್ನು ರೋಗದ ವಿರುದ್ಧ ಹೋರಾಡಲು ಬಲಪಡಿಸುತ್ತದೆ.

ದೇಹದ ತೂಕ ಇಳಿಕೆಗೆ ನೆರವಾಗುತ್ತದೆ

ವ್ಯಾಯಾಮ ಮಾಡದೆಯೂ ದೇಹದ ತೂಕ ಇಳಿಸಿಕೊಳ್ಳಿ: ಇಲ್ಲಿದೆ ಸರಳ ಉಪಾಯ | Weight loss tips  without excercise for maintaing good health | TV9 Kannada

ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ದೇಹದ ತೂಕ ಹೆಚ್ಚಳ ಎಲ್ಲ ವಯಸ್ಸಿನವರಲ್ಲೂ ಕಾಡುತ್ತಿದೆ. ಇದಕ್ಕೆ ಹಲವರು ಹಲವು ರೀತಿಯ ಮನೆಮದ್ದು, ವೈದ್ಯರ ಔಷಧಿಯನ್ನು ಕಂಡುಕೊಂಡಿದ್ದಾರೆ. ಆದರೆ ನಿಮಗೆ ಗೊತ್ತಾ?, ಗೇರುಹಣ್ಣಿನ ಸೇವನೆಯಿಂದ ದೇಹದ ತೂಕವನ್ನು ಕಳೆದುಕೊಳ್ಳಬಹುದಾಗಿದೆ. ಕಡಿಮೆ ಕೊಲೆಸ್ಟ್ರಾಲ್‌ ಮಟ್ಟವನ್ನು ಹೊಂದಿರುವ ಗೇರುಹಣ್ಣು ದೇಹದ ಬೊಜ್ಜಿನ ನಷ್ಟಕ್ಕೆ ನೆರವಾಗುತ್ತದೆ. ಜತೆಗೆ ದೇಹದ ತೂಕವನ್ನು ಸಮಪ್ರಮಾಣದಲ್ಲಿ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

​ಅನಿಮಿಯಾ ನಿಯಂತ್ರಣ

This herb is helpful in controlling diabetes as its four leaves reduce  blood sugar | ಮಧುಮೇಹ ನಿಯಂತ್ರಿಸಲು ಈ ಗಿಡಮೂಲಿಕೆ ಸಹಕಾರಿ ಇದರ ನಾಲ್ಕು ಎಲೆಗಳು ಬ್ಲಡ್  ಶುಗರ್ ಕಡಿಮೆ ಮಾಡುತ್ತವೆ– News18 Kannada

ಗೇರು ಹಣ್ಣಿನಲ್ಲಿ ಸಮೃದ್ಧವಾಗಿರುವ ಕಬ್ಬಿಣಾಂಶವು ದೇಹದಲ್ಲಿನ ಅನಿಮೀಯಾ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಅನಿಮಿಯಾ ಅಥವಾ ರಕ್ತದ ಕೊರತೆ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಗರ್ಭಧರಿಸದೇ ಇರುವುದು, ಅನಿಯಮಿತ ಮುಟ್ಟು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಗೇರು ಹಣ್ಣು ಉತ್ತಮ ಆಹಾರವಾಗಿದೆ. ಗೇರುಹಣ್ಣಿನ ಜ್ಯೂಸ್‌ ಕೂಡ ಮಾಡಿ ನೀವು ಸೇವಿಸಬಹುದಾಗಿದೆ. ಬೇಸಿಗೆಯ ಬಿಸಿಲಿಗೆ ತಣ್ಣನೆಯ ಪಾನೀಯದೊಂದಿಗೆ ದೇಹಕ್ಕೆ ಒಳ್ಳೆಯ ಆಹಾರ ಸಿಕ್ಕಂತಾಗುತ್ತದೆ.

 

Amazing Benefits Of Cashew Fruit.