ವೈದ್ಯರು ಬಿಳಿರಕ್ತಕಣಗಳು ಕಮ್ಮಿ ಇದೆ ಎಂದು ಹೇಳಿದ್ರಾ? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ

21-05-22 07:55 pm       Source: Vijayakarnataka   ಡಾಕ್ಟರ್ಸ್ ನೋಟ್

ದೇಹದಲ್ಲಿ ಕೆಂಪು ರಕ್ತ ಕಣಗಳ ಹಾಗೆ ಬಿಳಿ ರಕ್ತ ಕಣಗಳು ಕೂಡ, ದೇಹದ ಆರೋಗ್ಯಕ್ಕೆ ಬೇಕೇ ಬೇಕು. ಇವು ದೇಹದ ಸೊಂಕುಗಳು ವಿರುದ್ಧ ಹೋರಾ ಡುವುದು ಮಾತ್ರವಲ್ಲದೆ, ಡೆಂಗ್ಯೂ ನಂತಹ...

ನಮಗೆಲ್ಲಾ ಗೊತ್ತೇ ಇರುವ ಹಾಗೆ ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಪ್ರಮುಖ ವಾಗಿದೆ. ಇದು ಒಂದು ರೀತಿಯ ಯಂತ್ರಗಳು ಇದ್ದ ಹಾಗೆ, ಇವು ತಮ್ಮ ಪಾಡಿಗೆ ಕೆಲಸಕಾರ್ಯ ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಹೋಗುತ್ತವೆ. ಒಂದು ವೇಳೆ ಇಲ್ಲಿ ಏನಾದರೂ ಏರು ಪೇರು ಉಂಟಾದರೆ ಅಂದರೆ, ದೇಹದ ಆಂತರಿಕ ಅಂಗಗಳಲ್ಲಿ ಕೊಂಚ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ. ಹೀಗಾಗಿ ಯಾವುದನ್ನು ಸಹ ಕಡೆಗಣಿಸುವ ಹಾಗಿಲ್ಲ.

ಇನ್ನು ಮುಖ್ಯವಾಗಿ ದೇಹದ ಪ್ರತಿಯೊಂದು ಅಂಗಾಗಗಳು ಅಚ್ಚುಕಟ್ಟಾಗಿ ಕೆಲಸ ಮಾಡ ಬೇಕೆಂದರೆ, ದೇಹದಲ್ಲಿ ಹರಿಯುವ ರಕ್ತ ಸಂಚಾರ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ಕೆಂಪು ರಕ್ತ ಕಣಗಳು ಮನುಷ್ಯನ ಜೀವನಾಡಿ ಆಗಿ ಕೆಲಸ ಮಾಡಿದರೆ, ಬಿಳಿ ರಕ್ತ ಕಣಗಳು, ಮನುಷ್ಯನ ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡುವ ಸೊಂಕುಗಳ ವಿರುದ್ಧ ಹೋರಾಡುವಲ್ಲಿ, ಒಂದುವೇಳೆ ಗಾಯಗಳಾಗಿದ್ದರೆ, ಅದನ್ನು ಕಡಿಮೆ ಮಾಡುವಲ್ಲಿ ಹಾಗೂ ಪರೋಕ್ಷವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಕೂಡ ನೆರವು ನೀಡುತ್ತದೆ.

ಒಂದು ವೇಳೆ ಮಾರಕ ಡೆಂಗ್ಯೂ ಜ್ವರ ಕಾಡಿದರೆ, ಬಿಳಿ ರಕ್ತಕಣಗಳು, ಮನುಷ್ಯನ ಪ್ರಾಣ ಉಳಿಸು ವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ವೈದ್ಯರೂ ಕೂಡ ಡೆಂಗ್ಯೂ ಜ್ವರ ಇರುವ ರೋಗಿಗಳಿಗೆ ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ಆಹಾರ ಪದಾರ್ಥ ಗಳನ್ನು ಹೆಚ್ಚಾಗಿ ಸೇವಿಸಬೇಕೆಂದು ಹೇಳುವುದು. ಯಾಕೆಂದರೆ ಒಂದು ವೇಳೆ ಬಿಳಿ ರಕ್ತಕಣಗಳು ರೋಗಿ ಯಲ್ಲಿ ಕಡಿಮೆ ಆಗುತ್ತಾ ಹೋದರೆ, ಡೆಂಗ್ಯೂ ಜ್ವರದ ಸೋಂಕು ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆಯಂತೆ...

ಬಿಳಿ ರಕ್ತಕಣಗಳ ಮಹತ್ವದ ಬಗ್ಗೆ ನಿಮಗೆ ಗೊತ್ತಿರಲಿ...

White Blood Cell Count: What You Need to Know

ನಿಮಗೆ ಗೊತ್ತಿರಲಿ, ದೇಹದ ಸೋಂಕುಗಳ ವಿರುದ್ಧ ಹೋರಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಬಿಳಿ ರಕ್ತಕಣಗಳು ಒಳಗೊಂಡಿರುತ್ತದೆ. ಒಂದು ವೇಳೆ ರೋಗನಿರೋಧಕ ಶಕ್ತಿ ಕಡಿಮೆಯಾಗಿ ವ್ಯಕ್ತಿ ಸೊಂಕಿಗೆ ಒಳಗಾದರೆ, ಆತನನ್ನು ಮೊದಲಿನಂತೆ ಹುಷಾರು ಮಾಡುವಲ್ಲಿ ಬಿಳಿ ರಕ್ತಕಣಗಳು ಮುಂಚೂಣಿಯಲ್ಲಿ ನಿಲ್ಲುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ, ಆರೋಗ್ಯದಲ್ಲಿ ಬಿಳಿ ರಕ್ತಕಣಗಳ ಸಂತತಿ ಕಡಿಮೆ ಆಗದಂತೆ ನೋಡಿಕೊಳ್ಳಬೇಕು.

ಪಪ್ಪಾಯಿ ಗಿಡದ ಎಲೆಗಳು

Amazing health benefits of eating raw papaya - OrissaPOST

ಪಪ್ಪಾಯಿ ಎಲೆಗಳನ್ನು ಅರೆದು, ಇದರಿಂದ ಸಂಗ್ರಹಿಸಿದ ರಸವನ್ನು ಕುಡಿಯುವ ಮೂಲಕ ರಕ್ತದಲ್ಲಿರುವ ಪ್ಲೇಟ್ಲೆಟ್ ಸಂಖ್ಯೆ ವೃದ್ದಿಸುತ್ತದೆ, ಇದರಿಂದ ಡಂಗ್ಯೂ ಜ್ವರವನ್ನು ನಿಯಂತ್ರಿಸ ಬಹುದು, ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಅಂತೆಯೇ, ಬಿಳಿ ರಕ್ತಕಣಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡುವಲ್ಲಿ ನೆರವಾಗುತ್ತದೆ.

ಹೀಗೆ ಮಾಡಿ:
ಮೊದಲಿಗೆ ಸ್ವಲ್ಪ ಪಪ್ಪಾಯ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು.
ನಂತರ ಇದರ ಎಲೆಗಳಿಗೆ, ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು, ಇನ್ನೊಂದು ಪಾತ್ರೆಗೆ ಸೋಸಿ ಕೊಳ್ಳಿ.
ಆಮೇಲೆ ಈ ಸೋಸಿಕೊಂಡ ಮಿಶ್ರಣಕ್ಕೆ, ಒಂದು ಟೇಬಲ್ ಚಮಚ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ, ಚೆನ್ನಾಗಿ ಕದಡಿಕೊಳ್ಳಿ.
ಪಪ್ಪಾಯ ಎಲೆಗಳ, ಈ ರಸ ತುಂಬಾನೇ ಕಹಿ ಇರುವ ಕಾರಣ, ಇದಕ್ಕೆ ಒಂದು ಟೇಬಲ್ ಚಮಚ ಆಗು ವಷ್ಟು ಜೇನು ತುಪ್ಪವನ್ನು ಸೇರಿಸಿ ಕುಡಿಯಬಹುದು.
ಇನ್ನು ಇದರ ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಸಿ. ಇ, ಕೆ ಮತ್ತು ಬಿ ಕಂಡು ಬರುವು ದರಿಂದ, ಇವು ಸೊಂಕುಗಳ ವಿರುದ್ಧ ಹೋರಾಡುವಲ್ಲಿ ಹಾಗೂ ದೇಹದ ರೋಗ ನಿರೋಧಕ ವ್ಯವಸ್ಥೆ ಯನ್ನು ಬಲ ಪಡಿಸುವುದರಲ್ಲಿ, ಪ್ರಮುಖ ಪಾತ್ರವಹಿಸುತ್ತದೆ.

ಒಂದೆರಡು ಲವಂಗಗಳನ್ನ ಜಗಿಯಿರಿ!

Decoding the Benefits and Side-Effects of Clove

  • ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಕೂಡ ಲವಂಗ ಇದ್ದೇ ಇರುತ್ತದೆ. ಇದು ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ,ತನ್ನಲ್ಲಿರುವ ಅಧಿಕ ಪ್ರಮಾಣದ ಪೌಷ್ಟಿಕ ಸತ್ವ ಗಳಿಂದ, ಜಗತ್ತಿನಾದ್ಯಂತ ಜನಪ್ರಿಯತೆ ಪಡೆದು ಕೊಂಡಿದೆ.
  • ಇನ್ನು ಮುಖ್ಯವಾಗಿ ಇದರಲ್ಲಿ ವಿಟಮಿನ್-ಸಿ ಅಂಶ ಹೇರಳವಾಗಿ ಕಂಡು ಬರುವುದರ ಜೊತೆಗೆ, ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಯಥೇಚ್ಛವಾಗಿ ಇದರಲ್ಲಿ ಕಂಡುಬರುವುದರಿಂದ, ದೇಹದ ಬಿಳಿ ರಕ್ತಕಣಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಅಲ್ಲದೆ, ದೇಹದ ಅಂಗಾಂಗಗಳ ಮೇಲೆ ಹಾನಿ ಮಾಡುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾ ಡುತ್ತದೆ. ಹೀಗಾಗಿ ಪ್ರತಿದಿನಒಂದೆರಡು ಲವಂಗಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಹೀರುತ್ತಾ ಬರುವ ಅಭ್ಯಾಸ ಮಾಡಿಕೊಂಡರೆ, ಬಹಳ ಒಳ್ಳೆಯದು.

ನೆಲ್ಲಿಕಾಯಿ

benefits of amla its is very beneficial for mens health amla will boost  sexual power | ಪುರುಷರೆ ನಿಮ್ಮ ಆರೋಗ್ಯಕ್ಕೆ ಸೇವಿಸಿ 1 ನೆಲ್ಲಿಕಾಯಿ : ಇದರಿಂದ  ದೂರವಾಗುತ್ತೆ ನಿಮ್ಮ ನಿರಾಶೆ! Health News in Kannada

  • ನೋಡಲು ಸಣ್ಣದಾಗಿ ಕಂಡುಬಂದರೂ ಕೂಡ, ಇದರಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಮಾತ್ರ ಒಂದಕ್ಕಿಂತ ಒಂದು ಮಿಗಿಲು! ಆಯುರ್ವೇದದಲ್ಲಿಯೂ ಕೂಡ ಅಷ್ಟೇ, ಈ ಪುಟ್ಟ ಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ, ಸಾವಿರಾರು ವರ್ಷ ಹಿಂದೆಯೇ ಕಂಡುಕೊಂಡಿದ್ದು ತನ್ನ ನೂರಾರು ಔಷಧಿಯಲ್ಲಿ ಪ್ರಮುಖವಾದ ಸಾಮಾಗ್ರಿಯಾಗಿ ಇದನ್ನು ಬಳಸುತ್ತಾ ಬಂದಿದೆ.
  • ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ವಿಟಮಿನ್ ಸಿ ಅಂಶ, ಹೇರಳವಾಗಿ ಕಂಡು ಬರುವುದರಿಂದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಅದರಲ್ಲೂ ಮುಖ್ಯವಾಗಿ, ನೆಲ್ಲಿಕಾಯಿ, ಜಗಿದು ಅದರ ರಸವನ್ನು ಹೀರಿಕೊಂಡ ಬಳಿಕ, ದೇಹದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ವೃದ್ದಿಯಾಗುವ ಮೂಲಕ ರೋಗ ನಿರೋಧಕ ಶಕ್ತಿ ಇನ್ನಷ್ಟು ಬಲಗೊಂಡಿ ರುವುದನ್ನು ತಜ್ಞರೂ ಕೂಡ ಈಗಾಗಲೇ ಒಪ್ಪಿಕೊಂಡಿದ್ದಾರೆ.

ಸಿಟ್ರಸ್ ಹಣ್ಣುಗಳು

Orange Fruit - Benefits, Nutritional facts, Healthy Recipes - HealthifyMe

  • ಹುಳಿ-ಸಿಹಿ ಮಿಶ್ರಿತ ಹಾಗೂ ಸಿಟ್ರಸ್ ಅಂಶ ಹೊಂದಿರುವ ಸಿಟ್ರಸ್ ಹಣ್ಣುಗಳ ಮಹತ್ವ ನಮ ಗೆಲ್ಲಾ ಗೊತ್ತೇ ಇದೆ! ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಹೊಂದಿರುವ ಈ ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಕೂಡ ಹೆಚ್ಚು ಮಾಡುತ್ತದೆ.
  • ಉದಾಹರಣೆಗೆ ನೋಡುವುದಾದರೆ, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ಸ್ಟ್ರಾಬೆರಿ, ನಿಂಬೆ ಹಣ್ಣು ಇತ್ಯಾದಿ ಗಳ ವಿಟಮಿನ್ ಸಿ ಅಂಶ ಹೊಂದಿರುವ ಹಣ್ಣುಗಳನ್ನು ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ, ಬಿಳಿ ರಕ್ತಕಣಗಳ ಸಂಖ್ಯೆಯನ್ನು ವೃದ್ಧಿಸ ಬಹುದಾಗಿದೆ.

 

Ways To Improve White Blood Cell Count.