ಬ್ರೇಕಿಂಗ್ ನ್ಯೂಸ್
24-05-22 06:53 pm Mangalore Correspondent ಕರಾವಳಿ
ಮಂಗಳೂರು, ಮೇ 24: ಗಂಜಿಮಠದ ಮಳಲಿಯ ಜುಮ್ಮಾ ಮಸೀದಿಯ ನವೀಕರಣದ ವೇಳೆ ಒಳಭಾಗದಲ್ಲಿ ದೇವಸ್ಥಾನ ಮಾದರಿಯ ಚಿತ್ರಣ ಕಂಡುಬಂದ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಅಲ್ಲಿನ ಇತಿಹಾಸ ತಿಳಿಯಲು ಜ್ಯೋತಿಷ್ಯದ ಮೊರೆ ಹೋಗಿದ್ದರೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ, ಸಾಮರಸ್ಯ ಹದಗೆಡದಂತೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿಕೆ ಬಿಡುಗಡೆ ಮಾಡಿದ್ದು, ಮಳಲಿ ಪ್ರದೇಶದಲ್ಲಿ ಶಾಂತಿ ಪಾಲನೆ ಮಾಡುವುದಕ್ಕಾಗಿ ಹಿಂದು ಮತ್ತು ಮುಸ್ಲಿಮ್ ಮುಖಂಡರನ್ನು ಕರೆಸಿ ಸಭೆ ನಡೆಸಿದ್ದಾಗಿ ತಿಳಿಸಿದ್ದಾರೆ. ದೇವಸ್ಥಾನ ಹೋಲುವ ಚಿತ್ರಣ ಕಂಡುಬಂದ ಘಟನೆಗೆ ಸಂಬಂಧಿಸಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಮಂಗಳೂರಿನ ಜೆಎಂಎಫ್ ಕೋರ್ಟ್ ಸೂಚನೆ ನೀಡಿದೆ. ಅದರಂತೆ, ಸ್ಥಳದಲ್ಲಿ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕಾಗಿ ಕ್ರಮ ಕೈಗೊಂಡಿದ್ದಾರೆ. ಇದರ ನಡುವೆ ಹಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ವಿವಿಧ ರೀತಿಯ ಮನವಿಯನ್ನು ಸಲ್ಲಿಸಿವೆ.
ವಿಷಯ ಕೋರ್ಟಿನಲ್ಲಿರುವಾಗ ಯಾವುದೇ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಕೋರ್ಟಿಗೆ ಬೇಕಾದ ದಾಖಲೆಗಳನ್ನು ಜಿಲ್ಲಾಡಳಿತದಿಂದ ಸಲ್ಲಿಸಲಾಗುತ್ತಿದೆ. ಇವತ್ತು ಮಸೀದಿ ಕಮಿಟಿ ಮುಖ್ಯಸ್ಥರು, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು, ವಕ್ಫ್ ಮತ್ತು ಎಂಡೋಮೆಂಟ್ ಅಧಿಕಾರಿಗಳು, ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿದೆ. ಮಸೀದಿ ಕಮಿಟಿ ಮುಖ್ಯಸ್ಥರು ಕೋರ್ಟಿನಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮಸೀದಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಕಾನೂನು ರೀತ್ಯಾ ದಾಖಲೆಗಳೇ ಮುಖ್ಯವಾಗುತ್ತವೆ. ಕೋರ್ಟ್ ಕಾನೂನಿನಡಿ ಸಲ್ಲಿಸುವ ದಾಖಲೆಗಳನ್ನಷ್ಟೇ ಪರಿಗಣಿಸುತ್ತವೆ. ಕೆಲವು ಸಂಘಟನೆಗಳು ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದರೂ, ಅವುಗಳನ್ನು ಕಾನೂನು ವ್ಯಾಪ್ತಿಯಡಿ ನೋಡಲು ಬರುವುದಿಲ್ಲ. ಎಲ್ಲವನ್ನೂ ಕೋರ್ಟ್ ನಿರ್ಣಯಿಸುತ್ತದೆ. ಸೂಕ್ತ ತೀರ್ಮಾನವನ್ನು ಕೋರ್ಟ್ ನೀಡಲಿದೆ ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಜಿಲ್ಲೆಯ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವುದರಿಂದ ಹಿಂದು- ಮುಸ್ಲಿಂ ಗುಂಪುಗಳನ್ನು ಕರೆದು ಶಾಂತಿಸಭೆ ನಡೆಸಿದ್ದಾರೆ. ಪ್ರಕರಣ ಕೋರ್ಟಿನಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಶಾಂತಿ ಸಾಮರಸ್ಯ ಕದಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮಸೀದಿ ಕಮಿಟಿ ಮುಖ್ಯಸ್ಥರು ಮತ್ತು ಹಿಂದು ಸಂಘಟನೆಗಳಿಗೆ ಸೂಚನೆ ನೀಡಿದ್ದಾರೆ.
ಹಿಂದು ಸಂಘಟನೆಗಳಿಂದ ತಾಂಬೂಲ ಪ್ರಶ್ನೆ
ಇದೇ ವೇಳೆ, ಹಿಂದು ಸಂಘಟನೆಗಳು ಮಸೀದಿ ಇರುವ ಜಾಗದಲ್ಲಿ ಈ ಹಿಂದೆ ದೇವಸ್ಥಾನ ಇತ್ತೇ ಎನ್ನುವ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯದ ಮೊರೆ ಹೋಗಿವೆ. ಮೇ 25ರಂದು ಮಣೇಲ್ ಪರಿಸರದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನಾಚಿಂತನೆ ನಡೆಯಲಿದೆ. ಸ್ಥಳೀಯರ ಪರವಾಗಿ ಪೊಳಲಿ ಗಿರೀಶ್ ತಂತ್ರಿಗಳು ಹಾಗೂ ಪ್ರಶ್ನಾಚಿಂತನೆ ಆಯೋಜಿಸಿರುವ ವಿಶ್ವ ಹಿಂದು ಪರಿಷತ್ ನಾಯಕರ ಪರವಾಗಿ ಕಾಸರಗೋಡಿನ ಪ್ರಮುಖ ಜ್ಯೋತಿಷ್ಯರನ್ನು ಕರೆಯಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದ ವರೆಗೆ ಪ್ರಶ್ನಾಚಿಂತನೆ ನಡೆಯಲಿದ್ದು, ಒಂದೇ ದಿನದಲ್ಲಿ ಮುಗಿಯುತ್ತಾ, ಎರಡು –ಮೂರು ದಿನ ಇರುತ್ತಾ ಅನ್ನುವುದು ಗೊತ್ತಾಗಿಲ್ಲ.
ಏನಿದು ತಾಂಬೂಲ ಪ್ರಶ್ನಾಚಿಂತನೆ ?
ತಾಂಬೂಲ ಪ್ರಶ್ನೆ ಅನ್ನುವುದು ಜ್ಯೋತಿಷಿಗಳು ಭೂತಕಾಲ ಮತ್ತು ಭವಿಷ್ಯವನ್ನು ತಿಳಿಯಲು ಬಳಸುವ ಒಂದು ವಿಧಾನ. ಕವಡೆ ಕಾಯಿ, ವೀಳ್ಯದೆಲೆ, ಅಷ್ಟಮಂಗಳ ಇತ್ಯಾದಿ ರೂಪದಲ್ಲಿ ಜ್ಯೋತಿಷ್ಯ ಹೇಳಲಾಗುತ್ತದೆ. ವೀಳ್ಯದೆಲೆ ಬಳಸಿ ಭೂತಕಾಲವನ್ನು ತಿಳಿಯುವುದು ತಾಂಬೂಲ ಪ್ರಶ್ನೆಯ ಪದ್ಧತಿ. ಪ್ರಶ್ನೆ ಕೇಳಲು ಬರುವ ವ್ಯಕ್ತಿಯಲ್ಲಿ ವೀಳ್ಯದೆಲೆ ತೆಗೆದುಕೊಂಡು ಬರಲು ತಿಳಿಸಲಾಗುತ್ತದೆ. ಇಂತಿಷ್ಟು ಎಂದು ಹೇಳಿರುವುದಿಲ್ಲ. ಸಾಮಾನ್ಯವಾಗಿ 42, 54 ಹೀಗೆ ಎಷ್ಟು ಬೇಕಾದರೂ ವೀಳ್ಯದೆಲೆಯನ್ನು ಇರಿಸಬಹುದು. ಅದರಲ್ಲಿ ಎಷ್ಟಿದೆ ಎಂಬುದನ್ನು ಎಣಿಸಿ, ಅದರ ಗಣಿತ ಆಧರಿಸಿ ಜ್ಯೋತಿಷಿಗಳು ಕವಡೆ ಹಾರಿಸಿ ಜ್ಯೋತಿಷ್ಯ ಹೇಳುತ್ತಾರೆ. ತಾಂಬೂಲ ಪ್ರಶ್ನೆಯಲ್ಲಿ ಮಸೀದಿಯ ಹಿನ್ನೆಲೆ ಬಗ್ಗೆ ತಿಳಿಯಬಹುದೇ ಅಥವಾ ಮುಂದೆ ಅಷ್ಟಮಂಗಲ ಪ್ರಶ್ನೆ ಇಡಬೇಕೇ ಎನ್ನುವ ಬಗ್ಗೆಯೂ ತಿಳಿಸಲಾಗುತ್ತದೆ. ಕರಾವಳಿಯಲ್ಲಿ ತಾಂಬೂಲ ಪ್ರಶ್ನೆ, ಅಷ್ಟಮಂಗಲ ಪ್ರಶ್ನೆ ಸಾಮಾನ್ಯವಾಗಿ ಜ್ಯೋತಿಷಿಗಳು ಅನುಸರಿಸುವ ಪದ್ಧತಿ.
ಮಸೀದಿಗೂ ತಾಂಬೂಲ ಪ್ರಶ್ನೆಗೂ ಸಂಬಂಧ ಇಲ್ಲ
ಕಳೆದ ಎಪ್ರಿಲ್ 20ರಂದು ಮಸೀದಿಯಲ್ಲಿ ದೇವಸ್ಥಾನದ ಚಿತ್ರಣ ಕಂಡುಬಂದ ಬಳಿಕ ಅಲ್ಲಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹೊರಗಿನ ಯಾವುದೇ ವ್ಯಕ್ತಿಗಳು ಅಲ್ಲಿಗೆ ತೆರಳುವಂತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಆ ಜಾಗಕ್ಕೆ ಬೀಗ ಹಾಕಿ ಸೀಲ್ ಮಾಡಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಮೇ 25ರಂದು ಹಿಂದು ಸಂಘಟನೆಗಳು ಮಳಲಿ ಪರಿಸರದ ಭಜನಾ ಮಂದಿರ ಒಂದರಲ್ಲಿ ಪ್ರಶ್ನಾಚಿಂತನೆ ನಡೆಸುತ್ತಿದ್ದಾರೆ. ಅದಕ್ಕೂ ಮಸೀದಿಗೂ ಯಾವುದೇ ಸಂಬಂಧ ಇರುವುದಿಲ್ಲ. ಮಸೀದಿ ಅಥವಾ ಅದರ ಪರಿಸರದಲ್ಲಿ ಯಾವುದೇ ಪೂಜಾ ಕಾರ್ಯವೂ ಇರುವುದಿಲ್ಲ. ಕೆಲವು ರಾಷ್ಟ್ರೀಯ ವಾಹಿನಿಗಳು ಮಸೀದಿಯಲ್ಲೇ ಪೂಜೆ ನಡೆಸಲಾಗುತ್ತದೆ ಎನ್ನುವ ರೀತಿ ಸುದ್ದಿ ಹಬ್ಬಿಸುತ್ತಿವೆ ಎಂದು ಹಿಂದು ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
Deputy commissioner (DC) Dr Rajendra KV held a comprehensive meeting with officials regarding the msque-temple issue at Malali. In a video released by the deputy commissioner (DC) Dr Rajendra KV said, "A temple-like structure was found in Malali which led to some issues. The police and the local revenue officials handled the situation. The additional JMFC court issued an injunction order to all the parties, especially to the president of the mosque committee. Several organisations have made their request to the district administration.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm