ಬ್ರೇಕಿಂಗ್ ನ್ಯೂಸ್
16-06-22 09:33 pm Mangalore Correspondent ಕರಾವಳಿ
ಮಂಗಳೂರು, ಜೂನ್ 16: ಉಗ್ರರ ಸ್ಲೀಪರ್ ಸೆಲ್ ಎಂದೇ ಕುಖ್ಯಾತಿ ಪಡೆದಿರುವ ಮಂಗಳೂರಿಗೆ ಉಗ್ರರನ್ನು ನಿಗ್ರಹಿಸುವ ದಳ ಅಗತ್ಯವಾಗಿತ್ತು. 2008ರ ಮುಂಬೈ ಸರಣಿ ಸ್ಫೋಟದ ಬಳಿಕ ದೇಶದ ಎಲ್ಲ ಜಿಲ್ಲೆಗಳಲ್ಲೂ ಕೌಂಟರ್ ಟೆರರಿಸ್ಟ್ ಸ್ಕ್ವಾಡ್ ಅನುಷ್ಠಾನಕ್ಕೆ ತರಬೇಕು ಎನ್ನುವ ಬಗ್ಗೆ ಹೆಜ್ಜೆ ಇಡಲಾಗಿತ್ತು. ಆದರೆ, 15 ವರ್ಷಗಳ ಬಳಿಕ ಮಂಗಳೂರಿನಲ್ಲಿ ಉಗ್ರ ನಿಗ್ರಹದ ಬಗ್ಗೆ ತರಬೇತಿ ಪಡೆದ ದಳ ಒಂದನ್ನು ರೆಡಿ ಮಾಡಲಾಗಿದ್ದು ಹೊಸ ತಂಡದ ಕಾರ್ಯಕ್ಷಮತೆ ಹೇಗಿರುತ್ತೆ ಅನ್ನುವ ಬಗ್ಗೆ ಮಂಗಳೂರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.
ಕಟ್ಟಡದಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯುವುದು ಹೇಗೆ, ಕಟ್ಟಡದ ಒಳಹೊಕ್ಕು ಹೊರಗೆ ಬರುವ ರೀತಿಯ ಚಿತ್ರಣವನ್ನೂ ಕಟ್ಟಿಕೊಟ್ಟರು. ಅಲ್ಲದೆ, ವಿದೇಶಿ ನಿರ್ಮಿತ ಪಿಸ್ತೂಲ್, ರೈಫಲ್ ಗಳನ್ನು ಅದರ ಬಳಕೆಯ ಪ್ರಾತ್ಯಕ್ಷಿಕೆ ತೋರಿಸಿದರು. ಸದ್ಯಕ್ಕೆ ಅಮೆರಿಕ ನಿರ್ಮಿತ ಕೋಲ್ಟ್ ರೈಫಲ್, ಎಕೆ 47 ರೈಫಲ್, ಇನ್ಸಾಸ್ ಎಕ್ಸ್ ಕ್ಯಾಲಿಬರ್, ಎಸ್ಎಲ್ ಆರ್, ಅಸಾಲ್ಟ್ ರೈಫಲ್, 9 ಎಂಎಂ ಪಿಸ್ತೂಲನ್ನು ತಂಡ ಹೊಂದಿದ್ದು ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಸಿಟಿ ಕೌಂಟರ್ ಟೆರರಿಸಂ ಸ್ಕ್ವಾಡ್ ತಂಡದ ಪ್ರಮುಖ ಸುಬ್ರಹ್ಮಣ್ಯ ಮಾಹಿತಿ ನೀಡಿದರು.
ಬಸ್ಸನ್ನು ಅಪಹರಿಸಿ, ಅದರಲ್ಲಿ ತಪ್ಪಿಸಿಕೊಂಡು ಹೋಗುವ ಉಗ್ರರನ್ನು ಪೊಲೀಸ್ ಜೀಪಿನಲ್ಲಿ ಅಡ್ಡಹಾಕಿ ನಿಗ್ರಹಿಸುವ ಕಾರ್ಯಾಚರಣೆ ಸೂಪರ್ ಆಗಿತ್ತು. ಬಸ್ಸಿನ ಒಂದು ಬದಿಯಿಂದ ಒಳಭಾಗಕ್ಕೆ ಶೂಟ್ ಮಾಡಿದರೆ, ಇನ್ನೊಂದು ಬದಿಯಿಂದ ಕಮಾಂಡೋ ಯೋಧರು ಒಳಹೊಕ್ಕ ರೀತಿಯಲ್ಲಿ ಬಸ್ಸಿನೊಳಗೆ ತೆರಳಿ ಒಬ್ಬೊಬ್ಬರನ್ನೇ ಹೊರಕ್ಕೆ ತಂದು ನೆಲಕ್ಕುರಳಿಸುವ ಸನ್ನಿವೇಶ ತೋರಿಸಿಕೊಟ್ಟರು.
ಇದೇ ವೇಳೆ, ನಗರ ಸಶಸ್ತ್ರ ದಳಕ್ಕೆ ಹೊಸತಾಗಿ ಸೇರ್ಪಡೆಯಾದ ವರುಣ್ ಹೆಸರಿನ ವಾಟರ್ ಜೆಟ್ (ಜಲಫಿರಂಗಿ) ಕಾರ್ಯಾಚರಣೆಯನ್ನೂ ತೋರಿಸಿ ಕೊಡಲಾಯಿತು. ಪ್ರತಿಭಟನೆ ಹಿಂಸೆಗೆ ತಿರುಗಿದ ಸಂದರ್ಭದಲ್ಲಿ ಇಂತಹ ಜಲಫಿರಂಗಿಗಳ ಕಾರ್ಯ ಹೆಚ್ಚು ಉಪಯೋಗಕ್ಕೆ ಬರುತ್ತದೆ. ದೆಹಲಿ, ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳನ್ನು ಇದೇ ಜಲಫಿರಂಗಿಯ ಮೂಲಕ ಹತ್ತಿಕ್ಕುವ ಕಾರ್ಯ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಮಂಗಳೂರಿಗೆ ಜಲಫಿರಂಗಿ ಯಂತ್ರವನ್ನು ತರಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ಯುವಕರ ಗುಂಪಿನ ಮೇಲೆ ನೀರನ್ನು ಪ್ರಬಲ ವೇಗದಲ್ಲಿ ಹಾಯಿಸಿ, ಹಿಂದಕ್ಕಟ್ಟುವ ಜಲಫಿರಂಗಿ ಪ್ರಾತ್ಯಕ್ಷಿಕೆಯೂ ಸೂಪರ್ ಇತ್ತು.
ಸಿಎಆರ್ ಯೂನಿಟ್ ನಲ್ಲಿರುವ 35 ಸಿಬಂದಿಯನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತಿಗೆ ಒಳಪಡಿಸಿ ಉಗ್ರರನ್ನು ನಿಗ್ರಹಿಸುವ ಕಾರ್ಯಕ್ಕೆ ರೆಡಿ ಮಾಡಲಾಗಿದೆ. ಯಾವುದೇ ತುರ್ತು ಸ್ಥಿತಿಯನ್ನು ಎದುರಿಸುವ ರೀತಿ 35 ಮಂದಿಯನ್ನು ಸಜ್ಜುಗೊಳಿಸಲಾಗಿದ್ದು, ಮಂಗಳೂರಿನಲ್ಲಿ ಈ ತಂಡ ಕಾರ್ಯಾಚರಣೆಗೆ ರೆಡಿಯಾಗಿರುತ್ತದೆ. ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್, ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಸಮ್ಮುಖದಲ್ಲಿ ಸಿಎಆರ್ ಮೈದಾನದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು.
Centre for Counter terrorism (CCT) conducted a demonstration at CAR ground on Thursday June 16.The team of 30 members underwent training for 2 months.Police commissioner N Shashi Kumar said, “The CCT team of 30 members underwent two months of physical and mental training and skill sharpening. The training included room intervention, hostage rescue, and handling weapons under specialized circumstances tackling anti-social elements.”
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm