ಗೋಹತ್ಯೆಗೆ ಅವಕಾಶವೇ ಇಲ್ಲ ; ಬಕ್ರೀದ್ ವೇಳೆ ಗೋಮಾಂಸ ಪತ್ತೆಯಾದಲ್ಲಿ ಬಜರಂಗದಳ ಸುಮ್ಮನಿರಲ್ಲ ; ಪೊಲೀಸರಿಗೆ ಎಚ್ಚರಿಕೆ

01-07-22 11:25 pm       HK News Desk   ಕರಾವಳಿ

ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದು ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.

ಮಂಗಳೂರು, ಜುಲೈ 1: ಗೋಹತ್ಯೆ ನಿಷೇಧ ಕಾಯ್ದೆ 2020 ಪ್ರಕಾರ, ಯಾವುದೇ ರೀತಿಯಲ್ಲೂ ಗೋವನ್ನು ಹತ್ಯೆ ಮಾಡಲು ಅವಕಾಶ ಇಲ್ಲ. ಗೋವುಗಳನ್ನು ಅನುಮತಿ ಪತ್ರ ಇಲ್ಲದೆ ಸಾಗಿಸುವುದಕ್ಕೂ ಅವಕಾಶ ಇಲ್ಲ. ಹೀಗಾಗಿ ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದು ಪೊಲೀಸರು ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ, ಗೋ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ರಂತೆ ಯಾವುದೇ ವಯಸ್ಸಿನ ದನ, ಕರು, ಎತ್ತು, ಹೋರಿಯನ್ನು ಬಲಿ ಕೊಡುವಂತಿಲ್ಲ. ಅಲ್ಲದೆ, ಬಲಿ ಕೊಡುವ ಉದ್ದೇಶದಿಂದ ಗೋವನ್ನು ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಅದರ ಮಾಲಕರು ಬಲಿ ಕೊಡುವ ಉದ್ದೇಶದಿಂದ ಮಾರಾಟ ಮಾಡುವುದಕ್ಕೂ ಅವಕಾಶ ಇರಲ್ಲ. ಇದಕ್ಕಾಗಿ ಯಾರೆಲ್ಲ ಅಕ್ರಮ ಗೋಮಾಂಸ ದಂಧೆಯಲ್ಲಿರುವ ಮಂದಿ ಇದ್ದಾರೋ ಅವರನ್ನು ವಶಕ್ಕೆ ಪಡೆದು ಬಕ್ರೀದ್ ವರೆಗೆ ಠಾಣೆಯಲ್ಲಿರಿಸಬೇಕು. ಈ ಕೆಲಸವನ್ನು ಪೊಲೀಸರು ಮಾಡದೇ ಇದ್ದರೆ ಬಜರಂಗದಳ ಸುಮ್ಮನಿರಲ್ಲ ಎಂದು ಹೇಳಿದರು.

ಅಲ್ಲದೆ, ಗೋವು ಕಳ್ಳತನದ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಅಥವಾ ಸ್ಥಳೀಯ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು. ಗೋ ಸಂರಕ್ಷಣಾ ಕಾಯ್ದೆ ಪ್ರಕಾರ ಬಲಿ ಕೊಟ್ಟಿದ್ದನ್ನು ಸಾರ್ವಜನಿಕರು ನೋಡಿದರೂ ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸಲು ಅವಕಾಶ ಇರುತ್ತದೆ. ಆನಂತರ ಪೊಲೀಸ್ ವಶಕ್ಕೆ ನೀಡುವ ಅವಕಾಶ ಇದೆ ಎಂದು ದಿನೇಶ್ ಪೈ ಹೇಳಿದರು.

ಈ ಹಿಂದೆಯೂ ನೀವು ಇದೇ ರೀತಿ ಬೆದರಿಕೆ ಹಾಕಿದ್ದೀರಿ, ಅದು ಫಲ ಕೊಟ್ಟಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ನಾವು ಈವರೆಗೂ ಪೊಲೀಸರಿಗೆ ಮನವಿ, ಆಗ್ರಹ ಮಾಡುತ್ತಾ ಬಂದಿದ್ದೇವೆ. ಈಗ ಗೋವಿನ ಸಂರಕ್ಷಣೆಗಾಗಿ ಕಾನೂನು ಬಂದಿದ್ದು ಅದನ್ನು ಪೊಲೀಸರು ಪಾಲನೆ ಮಾಡಬೇಕು. ಇಲ್ಲದೇ ಹೋದಲ್ಲಿ ಬಜರಂಗದಳವೇ ಸ್ವತಃ ಕಾನೂನು ಮಾಡಿಕೊಳ್ಳಬೇಕಾಗುತ್ತದೆ. ಪೊಲೀಸರ ಕಾನೂನು ಬದಲು ಬಜರಂಗದಳ ಕಾನೂನು ಬರುತ್ತದೆ ಎಂದು ಹೇಳಿದರು.

Mangalore the Bajrang dal leaders have warned Mulsim community of cow slaughter during Bakrid 2022. If we find anyone slaughtering cows against the Anti Cow slaughter bill we will deal with them in VHP style.