ಬ್ರೇಕಿಂಗ್ ನ್ಯೂಸ್
13-02-26 11:00 pm HK News Staffer ದೇಶ - ವಿದೇಶ
ನವದೆಹಲಿ, ಫೆ.13: ಭಾರತದ ಆಡಳಿತ ಕೇಂದ್ರವಾಗಿರುವ ರೈಸಿನಾ ಹಿಲ್ಸ್ ನಲ್ಲಿ ಐತಿಹಾಸಿಕ ಬದಲಾವಣೆ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಸಾಹತು ಯುಗದ ಸೌತ್ ಬ್ಲಾಕ್ ಕಟ್ಟಡವನ್ನು ತೊರೆದು, ಹೊಸ ಆಡಳಿತ ಸಂಕೀರ್ಣವಾದ ಸೇವಾ ತೀರ್ಥದಿಂದ ಕಾರ್ಯಾರಂಭ ಮಾಡಿದ್ದಾರೆ.
ಭಾರತ ಸ್ವಾತಂತ್ರ್ಯ ಪಡೆದು ಸುಮಾರು 80 ವರ್ಷಗಳ ಬಳಿಕ ಪ್ರಧಾನ ಮಂತ್ರಿಗಳ ಕಚೇರಿಗೆ ಹೊಸ ವಿಳಾಸ ಸಿಕ್ಕಿದೆ. ‘ಸೇವಾ ತೀರ್ಥ’ ಹಾಗೂ ‘ಕರ್ತವ್ಯ ಭವನ 1 ಮತ್ತು 2’ಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ವಿಕಸಿತ ಭಾರತದ ಸಂಕಲ್ಪದೊಂದಿಗೆ ನಾವು ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದ್ದೇವೆ” ಎಂದರು.
ಸೇವಾ ತೀರ್ಥ ಸಂಕೀರ್ಣದಲ್ಲಿ ಪ್ರಧಾನ ಮಂತ್ರಿಗಳ ಕಚೇರಿ (PMO), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಹಾಗೂ ಕ್ಯಾಬಿನೆಟ್ ಸಚಿವಾಲಯವನ್ನು ಒಟ್ಟುಗೂಡಿಸಲಾಗಿದೆ. ಕರ್ತವ್ಯ ಭವನ 1 ಮತ್ತು 2ರಲ್ಲಿ ಹಣಕಾಸು, ರಕ್ಷಣಾ, ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳು ನೆಲೆಗೊಂಡಿವೆ.



ಪ್ರಧಾನಿ ಮೋದಿ ಅವರು, “ಪ್ರತಿ ವರ್ಷ ಸಚಿವಾಲಯ ಕಟ್ಟಡಗಳ ನಿರ್ವಹಣೆಗೆ ₹1,500 ಕೋಟಿ ವೆಚ್ಚವಾಗುತ್ತಿತ್ತು. ದಿನವೂ 8ರಿಂದ 10 ಸಾವಿರ ಸಿಬ್ಬಂದಿ ಕಟ್ಟಡಗಳ ನಡುವೆ ಸಂಚರಿಸಬೇಕಾಗುತ್ತಿತ್ತು. ಹೊಸ ಸಂಕೀರ್ಣದಿಂದ ಆಡಳಿತ ದಕ್ಷತೆ ಹೆಚ್ಚುತ್ತದೆ” ಎಂದು ತಿಳಿಸಿದ್ದಾರೆ.
“ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ನಂತಹ ಕಟ್ಟಡಗಳನ್ನು ಬ್ರಿಟಿಷ್ ಸರ್ಕಾರದ ದೃಷ್ಟಿಕೋನದಲ್ಲಿ ನಿರ್ಮಿಸಲಾಗಿತ್ತು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದಂತಹ ಹೊಸ ಸಂಕೀರ್ಣಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪೂರೈಸಲು ನಿರ್ಮಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಆಧರಿಸಿರುತ್ತವೆಯೇ ಹೊರತು ಮಹಾರಾಜರ ದೃಷ್ಟಿಕೋನವನ್ನು ಆಧರಿಸಿರುವುದಿಲ್ಲ” ಎಂದು ಪ್ರಧಾನ ಮಂತ್ರಿ ಸೇವಾ ತೀರ್ಥದ ಲೋಕಾರ್ಪಣೆ ಬಳಿಕ ಹೇಳಿದರು.
“100 ವರ್ಷಗಳಷ್ಟು ಹಳೆಯ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸುವುದು ಅತ್ಯಗತ್ಯ” ಎಂದು ಪ್ರಧಾನಿ ತಿಳಿಸಿದರು. ಸ್ವತಂತ್ರ ಭಾರತದ ಪ್ರಮುಖ ರಸ್ತೆಗಳು ದಶಕಗಳಿಂದಲೂ ವಸಾಹತುಶಾಹಿ ಯುಗದ ಹೆಸರುಗಳನ್ನು ಹೊಂದಿರುವುದು ದುರದೃಷ್ಟಕರ. ಪ್ರಧಾನಿ ನಿವಾಸದ ಉದ್ದಕ್ಕೂ ಇರುವ ರಸ್ತೆಯನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಅದೆಲ್ಲವನ್ನೂ ಈಗ ಬದಲಾಯಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
A historic shift has taken place at Raisina Hills, the administrative heart of India, as Prime Minister Narendra Modi formally began operations from the newly built governance complex ‘Seva Teerth,’ moving out of the colonial-era South Block building.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am