ಬ್ರೇಕಿಂಗ್ ನ್ಯೂಸ್
12-07-22 07:46 pm Mangalore Correspondent ಕರಾವಳಿ
ಮಂಗಳೂರು, ಜುಲೈ 12 : ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧ್ವಾನ ಆಗಿದ್ದರೂ, ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಮೈಮರೆತಿದ್ದಾರೆ. ಜಿಲ್ಲೆಯವರೇ ಬಂದರು ಸಚಿವರಿದ್ದರೂ, ಒಂದೂ ಸಭೆಯನ್ನು ನಡೆಸಿಲ್ಲ. ಕಡಲ್ಕೊರೆತದಿಂದ ಹಾನಿಯಾಗುತ್ತಿದ್ದರೂ, ಭೇಟಿ ನೀಡಿಲ್ಲ. ಜಿಲ್ಲಾಡಳಿತದ ವೈಫಲ್ಯ, ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಬಹಳಷ್ಟು ಹಾನಿ ಆಗಿದೆ. ಜಿಲ್ಲೆಯಲ್ಲಿ ಆಗಿರುವ ಹಾನಿಗೆ ಪರಿಹಾರ ರೂಪದಲ್ಲಿ ರಾಜ್ಯ ಸರಕಾರ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಗ್ರಹ ಮಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಯುಟಿ ಖಾದರ್, ರಾಜ್ಯ ಸರಕಾರ ಮತ್ತು ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 185 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ. 12 ಹೆಕ್ಟೇರ್ ಅಡಿಕೆ ತೋಟ ಹಾನಿಯಾಗಿದೆ. ರಸ್ತೆಗಳು ಹಾಳಾಗಿ ಹೋಗಿವೆ. ಇವತ್ತು ಸಿಎಂ ಬೊಮ್ಮಾಯಿ ಬರುತ್ತಿದ್ದಾರೆ. ಮಂಗಳೂರಿನ ಸ್ಥಿತಿ ಹೇಗಿದೆ ಎಂದು ತೋರಿಸಲು ಅವರನ್ನು ಸ್ಮಾರ್ಟ್ ಸಿಟಿಯ ಸುತ್ತು ಹಾಕಿದರೆ ಒಳ್ಳೆಯದು. ಇಷ್ಟೆಲ್ಲ ಹಾನಿಯಾಗಿದ್ದರೂ, ಜಿಲ್ಲೆಯ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ತಾಳಿದ್ದಾರೆ. ಕಂದಾಯ ಸಚಿವರ ಜೊತೆ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ, 24 ಗಂಟೆಯಲ್ಲಿ ಹತ್ತು ಸಾವಿರ ನೀಡುತ್ತೇನೆ ಎಂದಿದ್ದರು. ಆದರೆ ಯಾರಿಗೂ ಹಣ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ಆಗತಾನೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದ ಯಡಿಯೂರಪ್ಪ ಏಕಾಂಗಿಯಾಗಿಯೇ ಮಳೆಹಾನಿ ಪ್ರವಾಸ ನಡೆಸಿದ್ದರು. ಕೇಂದ್ರ ಸರಕಾರದ ಅಸಹಕಾರದ ನಡುವೆಯೂ ಒಬ್ಬಂಟಿ ಹೋರಾಟ ನಡೆಸಿದ್ದರು. ಆನಂತರದ ವರ್ಷದಲ್ಲಿ ಮಳೆಹಾನಿ ಸಂದರ್ಭದಲ್ಲಿ ಸಂಪುಟ ಸರ್ಕಸ್ ಆಗಿತ್ತು. 2021ರಲ್ಲಿ ಮತ್ತೆ ಸಿಎಂ ಬದಲಾವಣೆಯ ಕಸರತ್ತು ನಡೆಸಿದ್ದರು. ಮಳೆಹಾನಿಯಿಂದಾದ ಪ್ರದೇಶಕ್ಕೆ ಭೇಟಿಯನ್ನೂ ಕೊಡಲಿಲ್ಲ. ಪರಿಹಾರವನ್ನೂ ಕೊಡಲಿಲ್ಲ. 2019ರಲ್ಲಿ ಆಗಿರುವ ಅನಾಹುತಕ್ಕೇ ಹೆಚ್ಚಿನ ಮಂದಿಗೆ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಕರಾವಳಿಯಲ್ಲಿ ಹತ್ತು ದಿನಗಳ ಕಾಲ ಮಳೆಯಾಗಿ ಬಹಳಷ್ಟು ನಾಶ-ನಷ್ಟ ಆಗಿದೆ. ಉಸ್ತುವಾರಿ ಸಚಿವರು, ಆಯಾ ಇಲಾಖೆಗಳ ಸಚಿವರು ಮಳೆಹಾನಿ ಪ್ರದೇಶಕ್ಕೆ ತೆರಳಿಲ್ಲ ಎಂದು ಈಗ ಸ್ವತಃ ಮುಖ್ಯಮಂತ್ರಿಯೇ ತೆರಳುತ್ತಿದ್ದಾರೆ.
ಮೂರು ವರ್ಷಗಳಲ್ಲಿ ಏಳೆಂಟು ಸಾವಿರ ಕೋಟಿ ನಷ್ಟ ಆಗಿದ್ದರೆ, ಕೇಂದ್ರ ಸರಕಾರದಿಂದ ಕೇವಲ 3965 ಕೋಟಿ ಮಾತ್ರ ಪರಿಹಾರ ಬಿಡುಗಡೆಯಾಗಿದೆ. ಅದರಲ್ಲಿ ನಲ್ವತ್ತು ಪರ್ಸೆಂಟ್ ಸರಕಾರದಲ್ಲಿ ನೈಜ ಫಲಾನುಭವಿಗಳಿಗೆ ಎಷ್ಟು ಮುಟ್ಟಿದೆಯೋ ಗೊತ್ತಿಲ್ಲ. ಜಿಲ್ಲೆಯಲ್ಲಿ ಆಗಿರುವ ಅನಾಹುತಗಳಿಗೆ ನೂರು ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಮಳೆಯಿಂದ ಮೃತಪಟ್ಟ ಐವರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದರು.
ಈ ಬಾರಿ ಪ್ರವಾಹ ಬರುತ್ತದೆ ಎನ್ನುವ ಬಗ್ಗೆ ಮೊದಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಬಂದರು ಸಚಿವರಾಗಲೀ ಪೂರ್ವ ಸಿದ್ಧತೆಯನ್ನೇ ಮಾಡಿಲ್ಲ. ಯಾವ ರೀತಿ ಮುಂಜಾಗ್ರತೆ ಕೈಗೊಳ್ಳಬೇಕೆಂದು ಸಿದ್ಧತಾ ಸಭೆಯನ್ನೂ ನಡೆಸಿಲ್ಲ. ಕಂದಾಯ ಸಚಿವರ ಜೊತೆಗೆ ಭೇಟಿ ನೀಡಿದ್ದು ಬಿಟ್ಟರೆ ಉಸ್ತುವಾರಿ ಸಚಿವರು ಮಳೆಹಾನಿ ಪ್ರದೇಶಕ್ಕೂ ಭೇಟಿ ಕೊಟ್ಟಿಲ್ಲ. ಕಂದಾಯ ಸಚಿವರು ಬಂದು ಹೋಗಿ ನಾಲ್ಕು ದಿನ ಕಳೆದರೂ, ಒಂದಿಂಚು ಕಾಮಗಾರಿ ಶುರು ಮಾಡಿಲ್ಲ. ಉಳ್ಳಾಲದ ಬಟ್ಟಂಪಾಡಿಯಲ್ಲಿ ತಕ್ಷಣ ಕಲ್ಲುಗಳನ್ನು ಹಾಕಬೇಕೆಂದಿದ್ದರೂ, ಯಾಕೆ ಕಾಮಗಾರಿ ಶುರು ಮಾಡಿಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಆಗಿರುವುದಕ್ಕೆ ಇವರ ನಿರ್ಲಕ್ಷ್ಯ ನೀತಿಯೇ ಕಾರಣ ಎಂದರು ಖಾದರ್.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಇಬ್ರಾಹಿಂ ಕೋಡಿಜಾಲ್, ರವೀಂದ್ರ ಕಂಬಳಿ, ಟಿಕಿ ಸುಧೀರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
District in charge minister reason for Soil erosion in Dakshina Kannada slams congress leaders and president Harish Kumar during a press meet held at Mangalore.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm