ಬ್ರೇಕಿಂಗ್ ನ್ಯೂಸ್
22-07-22 03:42 pm Mangalore Correspondent ಕರಾವಳಿ
ಮಂಗಳೂರು, ಜುಲೈ 22: ಕಂಬಳ ಅಕಾಡೆಮಿ ಮತ್ತು ಉಸೇನ್ ಬೋಲ್ಟ್ ಖ್ಯಾತಿಯ ಕಂಬಳದ ಓಟಗಾರ ಶ್ರೀನಿವಾಸ ಗೌಡರ ಬಗ್ಗೆ ಲೋಕೇಶ್ ಶೆಟ್ಟಿ ಎಂಬವರು ನೀಡಿರುವ ದೂರಿನಲ್ಲಿ ಸತ್ಯಾಂಶ ಇಲ್ಲ. ನಮ್ಮ ಹೆಸರು ಕೆಡಿಸುವ ಮತ್ತು ತೇಜೋವಧೆ ಮಾಡುವ ಉದ್ದೇಶದಿಂದ ಮೂಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ದೂರು ನೀಡಿದ್ದಷ್ಟೇ. ಅದನ್ನು ಪೊಲೀಸರು ದಾಖಲು ಮಾಡಿಕೊಂಡಿಲ್ಲ. ಕೆಲವು ಮಾಧ್ಯಮಗಳು ದೂರನ್ನು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಮಾಡಿವೆ ಎಂದು ಕಂಬಳ ಅಕಾಡೆಮಿ ಸಂಚಾಲಕ, ಹಿರಿಯ ಕಂಬಳ ವಿಶ್ಲೇಷಕ ಗುಣಪಾಲ ಕಡಂಬ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗುಣಪಾಲ ಕಡಂಬ ಮತ್ತು ಶ್ರೀನಿವಾಸ ಗೌಡ, ತಮ್ಮ ಮೇಲೆ ಹಾಕಿರುವ ಆರೋಪಗಳನ್ನು ಅಲ್ಲಗಳೆದು ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿಯ ದೂರು ನೀಡಿದ್ದಾರೆ ಎಂದು ಹೇಳಿದರು. ಮೊದಲ ಬಾರಿಗೆ 1989ರಲ್ಲಿ ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಂಬಳ ಸಮಿತಿ ರಚನೆಯಾಗಿತ್ತು. 2013ರ ವರೆಗೂ ಸಮಿತಿಯಲ್ಲಿ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿದ್ದೆ. ಈ ನಡುವೆ, ಕಂಬಳದ ಸಂರಕ್ಷಣೆ ಮತ್ತು ಯುವಕರಿಗೆ ತರಬೇತಿ ನೀಡುವುದಕ್ಕಾಗಿ ಅಕಾಡೆಮಿ ಸ್ಥಾಪಿಸಲಾಗಿತ್ತು. ಇದು ಸಮಾನ ಮನಸ್ಕರ ಸಮಿತಿಯಾಗಿದ್ದು ಸಂಚಾಲಕ ಜವಾಬ್ದಾರಿ ಹೊಂದಿದ್ದೇನೆ. ಅಕಾಡೆಮಿಯಲ್ಲಿ ಶ್ರೀನಿವಾಸ ಗೌಡ ಸೇರಿದಂತೆ 60 ಜನ ಕಂಬಳ ಓಟಗಾರರು ತರಬೇತಿ ಪಡೆದಿದ್ದಾರೆ. ಅಕಾಡೆಮಿ ಚಟುವಟಿಕೆ ಗಮನಿಸಿ, ಸರಕಾರ 5 ಲಕ್ಷ ನಗದು ಬಹುಮಾನ ನೀಡಿದೆ ಎಂದು ಗುಣಪಾಲ ಕಡಂಬ ಹೇಳಿದರು.
ಇನ್ನು ಕ್ರೀಡಾರತ್ನ ಪ್ರಶಸ್ತಿ ಶ್ರೀನಿವಾಸ ಗೌಡ ಪಡೆಯುವುದಕ್ಕೂ ಮೊದಲೇ ಕಂಬಳದಲ್ಲಿ ಸಾಧನೆ ಮಾಡಿದ ನಾಲ್ವರಿಗೆ ಸಿಕ್ಕಿದೆ. ಆಬಳಿಕ ಶ್ರೀನಿವಾಸ ಗೌಡ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ದಾಖಲೆಗಳನ್ನು ಮಾಡಿದ್ದಾರೆ. 2019-20ರಲ್ಲಿ ಐಕಳ ಕಂಬಳದಲ್ಲಿ 9.55 ಸೆಕಂಡ್ ನಲ್ಲಿ ಗುರಿ ಮುಟ್ಟಿ ದಾಖಲೆ ಮಾಡಿದ್ದರು. ಆದರೆ ಎಲ್ಲಿಯೂ ನಾವು ಶ್ರೀನಿವಾಸ ಗೌಡರನ್ನು ಉಸೇನ್ ಬೋಲ್ಟ್ ಗೆ ಹೋಲಿಸಿಲ್ಲ. ಉಸೇನ್ ಬೋಲ್ಟ್ ಓಡಿದ್ದಕ್ಕಿಂತ ಹೆಚ್ಚು ವೇಗದಲ್ಲಿ ಗುರಿಯನ್ನು ಕ್ರಮಿಸಿದ್ದು ಮಾಧ್ಯಮದಲ್ಲಿ ಪ್ರಚಾರ ಆಗಿರಬಹುದು. ಹಾಗಂತ, ಕಂಬಳ ಸಮಿತಿಯಾಗಲೀ, ಇತರ ಯಾವುದೇ ಅಧಿಕೃತ ಸಂಸ್ಥೆಯಾಗಲೀ ಪ್ರಮಾಣ ಪತ್ರ ಕೊಟ್ಟಿಲ್ಲ. ಕಂಬಳದಲ್ಲಿ ಓಡುವುದಕ್ಕೂ, ಓಟದ ರೇಸ್ ನಲ್ಲಿ ಓಡುವುದಕ್ಕೂ ವ್ಯತ್ಯಾಸ ಇದೆ. ಶ್ರೀನಿವಾಸ ಗೌಡರ ಓಟದ ಸಾಧನೆಯನ್ನು ಕಂಬಳ ವಿಶ್ಲೇಷಕ ವಿಜಯ್ ಕುಮಾರ್ ಕಂಗಿನಮನೆ ಆ ರೀತಿ ಪ್ರಚಾರ ಮಾಡಿಕೊಂಡು ಬಂದಿದ್ದಾರೆ ಅಷ್ಟೇ ಎಂದರು.

ಕಂಬಳದಲ್ಲಿ ಗುರಿ ಮುಟ್ಟುವ ವಿಚಾರದಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಬಹಳಷ್ಟು ಪ್ರಯತ್ನ ಪಟ್ಟಿದ್ದೇವೆ. ಕಾರ್ಕಳದ ಸ್ಕೈ ವ್ಯೂ ಸಂಸ್ಥೆಯ ರತ್ನಾಕರ ಅವುರ ಲೇಸರ್ ಬೀಮ್ ಮತ್ತು ಇಲೆಕ್ಟ್ರಾನಿಕ್ ಟೈಮಿಂಗ್ ವ್ಯವಸ್ಥೆಯನ್ನು ಮಾಡಿದ್ದಾರೆ. ಒಂಬತ್ತು ವರ್ಷಗಳಿಂದ ಈ ತಂತ್ರಜ್ಞಾನ ಅಳವಡಿಸಿದ್ದು, ಕಂಬಳದಲ್ಲಿ ಪಾರದರ್ಶಕತೆ ಬರಲು ಕಾರಣವಾಗಿದೆ. ಈ ಬಗ್ಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮುಖ್ಯಸ್ಥ ಕರ್ನಲ್ ಸಂಜಯ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ಬಗ್ಗೆ ಯಾವುದೇ ಕಂಬಳ ಓಟಗಾರರಾಗಲೀ, ಕೋಣದ ಮಾಲೀಕರಾಗಲೀ ಪ್ರಶ್ನೆ ಮಾಡಿಲ್ಲ. ಎಲ್ಲರ ಒಪ್ಪಿಗೆಯಂತೆ, ಲಕ್ಷಾಂತರ ರೂಪಾಯಿ ವ್ಯಯಿಸಿ ಲೇಸರ್ ಬೀಮ್ ಅಳವಡಿಕೆ ಮಾಡಲಾಗಿತ್ತು.

ಆದರೆ ಲೋಕೇಶ್ ಶೆಟ್ಟಿ ಮುಚ್ಚೂರು ಅವರಿಗೆ ನಮ್ಮ ಅಕಾಡೆಮಿ ಮತ್ತು ಶ್ರೀನಿವಾಸ ಗೌಡನ ಸಾಧನೆ ಬಗ್ಗೆ ಅಸೂಯೆ ಇದೆ. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಬಿರ್ದ್ ದ ಕಂಬುಳ ಎಂಬ ಹೆಸರಲ್ಲಿ ತುಳು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶ್ರೀನಿವಾಸ ಗೌಡರಿಗೆ ವಿಶೇಷ ಪಾತ್ರವಿದ್ದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದರ ನಡುವೆ, ಶ್ರೀನಿವಾಸ ಗೌಡ ಮತ್ತು ಕಂಬಳದ ವರ್ಚಸ್ಸು ಕುಗ್ಗಿಸಲು ಲೇಸರ್ ಬೀಮ್ ತಂತ್ರಜ್ಞಾನದ ಬಗ್ಗೆ ದೂರುತ್ತಿದ್ದಾರೆ. ಶ್ರೀನಿವಾಸ ಗೌಡರ ಬಗ್ಗೆಯೂ ತೇಜೋವಧೆ ಮಾಡುತ್ತಿದ್ದಾರೆ. ಇದೇ ಲೋಕೇಶ್ ಶೆಟ್ಟಿ ಕಂಬಳದ ಬಗ್ಗೆ ಸಿನಿಮಾ ಮಾಡುವುದಾಗಿ ಟೈಟಲ್ ರಿಜಿಸ್ಟರ್ ಮಾಡಿದ್ದರು. ಸಿನಿಮಾದಲ್ಲಿ ಶ್ರೀನಿವಾಸ ಗೌಡರನ್ನು ತೋರಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಶ್ರೀನಿವಾಸ ಗೌಡರನ್ನು ಮತ್ತು ಕಂಬಳದ ವ್ಯವಸ್ಥೆಯ ಬಗ್ಗೆಯೇ ದೂರುತ್ತಿದ್ದಾರೆ. ಇದರ ಹಿಂದೆ ಕೇವಲ ಅಸೂಯೆ ಮಾತ್ರ ಕಾಣುತ್ತಿದೆ. ಇವರು ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾವು ಯಾವುದೇ ವಂಚನೆಯನ್ನೂ ಮಾಡಿಲ್ಲ ಎಂದು ವಿವರಿಸಿದರು ಗುಣಪಾಲ ಕಡಂಬ.
ಸುದ್ದಿಗೋಷ್ಠಿಯಲ್ಲಿ ಕಂಬಳ ಓಟಗಾರ ಶ್ರೀನಿವಾಸ ಗೌಡ, ಅಕಾಡೆಮಿ ಸದಸ್ಯ ಸುರೇಶ್ ಕೆ., ಲೇಸರ್ ಬೀಮ್ ವ್ಯವಸ್ಥೆ ಅಳವಡಿಸಿದ್ದ ರತ್ನಾಕರ್ ಉಪಸ್ಥಿತರಿದ್ದರು.
Kambala jockey Srinivas Gowda alleged of creating fake records Gunpal Kadamba holds press meet says its to spoil name.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm