ಬ್ರೇಕಿಂಗ್ ನ್ಯೂಸ್
14-08-22 09:31 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 14: ಎಲ್ಲೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಂಪು ಹರಡಿರುವಾಗಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಬೆಳಗ್ಗೆ 11 ಗಂಟೆಗೆ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ಹಠಾತ್ತಾಗಿ ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಅಲ್ಲದೆ, ಸಂಜೆಯ ವರೆಗೂ ವಿಮಾನವನ್ನು ಹಳೆ ಏರ್ಪೋರ್ಟ್ ನಲ್ಲಿರಿಸಿ ತಪಾಸಣೆ ಕೈಗೊಳ್ಳಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಯುವಕ- ಯುವತಿಯ ಚಾಟಿಂಗ್ ಅನ್ನೋ ವಿಚಾರ ಬೆಳಕಿಗೆ ಬಂದಿದೆ.
ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಮುಂಬೈಗೆ ಇಂಡಿಗೋ ವಿಮಾನ ಇನ್ನೇನು ಹೊರಡುವ ಅವಸರದಲ್ಲಿತ್ತು. ಪ್ರಯಾಣಿಕರ ತಪಾಸಣೆ ಮುಗಿದು ಎಲ್ಲರೂ ಫ್ಲೈಟಿನಲ್ಲಿ ಬೆಲ್ಟ್ ಹಾಕಿ ಕುಳಿತಿದ್ದರು. ಏರ್ಲೈನ್ಸ್ ಸಿಬಂದಿಯೂ ರೆಡಿಯಾಗಿದ್ದು, ವಿಮಾನ ಮೆಲ್ಲಗೆ ಮೂವ್ ಆಗುತ್ತಾ ರನ್ ವೇಗೆ ಬಂದಿತ್ತು. ಇನ್ನೇನು ಟೇಕಾಫ್ ಆಗುತ್ತೆ ಎನ್ನುವಾಗಲೇ ಹಠಾತ್ತಾಗಿ ವಿಮಾನವನ್ನು ನಿಲ್ಲಿಸಲಾಗಿತ್ತು. ಕೂಡಲೇ ಏರ್ಪೋರ್ಟ್ ಭದ್ರತಾ ಸಿಬಂದಿ ಒಳಗೆ ಬಂದು ಪ್ರಯಾಣಿಕರನ್ನು ಇಳಿಯುವಂತೆ ಸೂಚನೆ ನೀಡಿದ್ದರು. ಪ್ರಯಾಣಿಕರು ಏನಾಗುತ್ತಿದೆ ಅನ್ನುವಷ್ಟರಲ್ಲಿ ಎಲ್ಲರನ್ನೂ ತಪಾಸಣೆ ನಡೆಸುತ್ತಲೇ ಸಿಐಎಸ್ಎಫ್ ಭದ್ರತಾ ಸಿಬಂದಿ ಹೊರಕ್ಕೆ ಇಳಿಸಿದ್ರು. ವಿಮಾನದಲ್ಲೂ ಶೋಧ ಕಾರ್ಯ ಕೈಗೊಂಡರು. ಬಾಂಬ್ ತಪಾಸಣಾ ದಳವೂ ಬಂದು ತಪಾಸಣೆ ನಡೆಸಿತ್ತು.
ಕೊನೆಗೆ, ಇಂಡಿಗೋ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿ, ಪ್ರಯಾಣಿಕರನ್ನು ಬೋರ್ಡಿಂಗ್ ರೂಮ್ ನಲ್ಲಿ ಇರುವಂತೆ ಸೂಚಿಸಲಾಯ್ತು. ವಿಮಾನವನ್ನು ಕೂಲಂಕುಷ ತಪಾಸಣೆ ನಡೆಸುವುದಕ್ಕಾಗಿ ಹಳೆ ವಿಮಾನ ನಿಲ್ದಾಣದ ರನ್ ವೇಗೆ ಒಯ್ಯಲಾಯ್ತು. ಸಂಜೆಯ ವರೆಗೂ ಭದ್ರತಾ ಸಿಬಂದಿ ವಿಮಾನವನ್ನು ತಪಾಸಣೆ ನಡೆಸಿದ್ರು. ಯಾವುದೇ ಆತಂಕ ಇಲ್ಲವೆಂದು ಸೂಚನೆ ಲಭಿಸುತ್ತಿದ್ದಂತೆ ಸಂಜೆ 5 ಗಂಟೆಗೆ ಎಲ್ಲ 186 ಪ್ರಯಾಣಿಕರನ್ನು ಕೂರಿಸ್ಕೊಂಡು ಮತ್ತೆ ವಿಮಾನ ಮುಂಬೈಗೆ ತೆರಳಿತ್ತು. ಇಡೀ ದಿನ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬಂದಿ ಭಾರೀ ಆತಂಕಕ್ಕೀಡಾಗುವಂತಾಗಿದ್ದ ಕ್ಷಣಗಳು ಮರೆಯಾಗಿ ತಿಳಿಮೋಡ ಕಾಣಿಸಿತ್ತು. ಇಷ್ಟಕ್ಕೂ ಆತಂತಕಕ್ಕೆ ಕಾರಣವಾಗಿದ್ದು ಏನಪ್ಪಾಂದ್ರೆ, ಯುವಕ-ಯುವತಿಯ ಚಾಟಿಂಗ್ ಅನ್ನೋ ಸ್ವಾರಸ್ಯಕರ ವಿಚಾರವೂ ಬೆಳಕಿಗೆ ಬಂದಿದೆ.
‘’ಯು ಆರ್ ಎ ಬಾಂಬರ್…’’
ಹೌದು.. ಯು ಆರ್ ಎ ಬಾಂಬರ್ ಅನ್ನುವ ಮೆಸೇಜ್ ಆ ಕಡೆಯಿಂದ ಆತನ ಮೊಬೈಲಿಗೆ ಬಂದಿತ್ತು. ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ಬೆಲ್ಟ್ ಹಾಕ್ಕೊಂಡು ಕುಳಿತಿದ್ದ ಯುವಕ ಏನೋ ಬಿಝಿಯಾಗಿರುವಂತೆ ಚಾಟಿಂಗಲ್ಲಿ ತೊಡಗಿದ್ದ. ಬಾಂಬರ್ ಅನ್ನುವ ಇಂಗ್ಲಿಷ್ ಮೆಸೇಜ್ ಆತನ ಮೊಬೈಲಿನಲ್ಲಿ ಎದ್ದು ಕಂಡಿತ್ತು. ಇದನ್ನು ಸಹ ಪ್ರಯಾಣಿಕ ಮಹಿಳೆಯೊಬ್ಬರು ಗಮನಿಸಿದ್ದು, ಕೂಡಲೇ ವಿಮಾನದ ಸಿಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ವಾತಂತ್ರ್ಯದ ಸಂದರ್ಭ ಆಗಿರುವುದರಿಂದ ಎಂದಿಗಿಂತಲೂ ತುಸು ಹೆಚ್ಚೇ ತಪಾಸಣೆ ಕೈಗೊಳ್ತಿದ್ದರು. ಇಂಥ ಮೆಸೇಜ್ ಬಂದಿದ್ದನ್ನು ಹಗುರವಾಗಿ ತಗೊಳ್ಳುವಂತೆಯೇ ಇರಲಿಲ್ಲ. ಕೂಡಲೇ ಸಿಬಂದಿ ಏರ್ಪೋರ್ಟ್ ಭದ್ರತಾ ಸಿಬಂದಿಗೆ ವಿಷಯ ಮುಟ್ಟಿಸಿದ್ದರು. ಆ ಕಡೆಯಿಂದ ಪೈಲಟ್ ಗೆ ವಿಮಾನ ಸ್ಥಗಿತಗೊಳಿಸುವಂತೆ ಸೂಚನೆ ಬಂದಿತ್ತು.
ದಡಬಡಾಯಿಸುತ್ತಲೇ ವಿಮಾನಕ್ಕೆ ನುಗ್ಗಿದ ಭದ್ರತಾ ಸಿಬಂದಿ ನೇರವಾಗಿ ಬಂದು ಯುವಕನನ್ನು ವಶಕ್ಕೆ ಪಡೆದರು. ಆನಂತರ, ಎಲ್ಲ ಪ್ರಯಾಣಿಕರನ್ನೂ ಇಳಿಯುವಂತೆ ಸೂಚಿಸಿದ್ದಲ್ಲದೆ, ಎಲ್ಲರನ್ನೂ ತಪಾಸಣೆಗೆ ಒಳಪಡಿಸಿದರು. ಮೊಬೈಲ್ ಬ್ಯಾಟರಿಯಿಂದ ತೊಡಗಿ ಚಾರ್ಜರ್ ಎಲ್ಲವನ್ನೂ ವಶಕ್ಕೆ ಪಡೆದು ತಪಾಸಣೆ ಕೈಗೊಂಡರು. ಪ್ರಯಾಣಿಕರೆಲ್ಲ ಏನೋ ಅವಘಡ ಆಗಿದೆಯೆಂದು ಎದ್ದು ಬಿದ್ದು ವಿಮಾನದಿಂದ ಹೊರಕ್ಕಿಳಿದರು.
ನಿಜಕ್ಕೂ ಏರ್ಪೋರ್ಟಿನಲ್ಲಿ ಆಗಿದ್ದೇನು ?
ಯುವಕ ಮುಂಬೈಗೆ ಹೊರಟಿದ್ದರೆ, ಆತನ ಗೆಳತಿ ಬೆಂಗಳೂರು ಹೊರಟಿದ್ದರು. ಇಬ್ಬರೂ ವಾಟ್ಸಪ್ ಚಾಟಿಂಗ್ ನಡೆಸುತ್ತಿದ್ದರು. ಯು ಆರ್ ಎ ಬಾಂಬರ್ ಎಂದು ಆ ಕಡೆಯಿಂದ ಯುವತಿ ಮೆಸೇಜ್ ಮಾಡಿದ್ದಳು. ಯುವಕನ ಮೊಬೈಲಿನಲ್ಲಿ ದಪ್ಪಕ್ಷರಗಳಲ್ಲಿ ಬಾಂಬರ್ ಅಂತ ಮೆಸೇಜ್ ಬಂದಿದ್ದನ್ನು ನೋಡಿದ ಸಹ ಪ್ರಯಾಣಿಕೆ ಗಾಬರಿಗೊಂಡಿದ್ದರು. ಭದ್ರತೆಗೆ ಆತಂಕವೊಡ್ಡುವ ರೀತಿ ಮೆಸೇಜ್ ಮಾಡಿದ್ದರಿಂದ ಸಿಐಎಸ್ಎಫ್ ಭದ್ರತಾ ಸಿಬಂದಿಯೂ ಗಲಿಬಿಲಿಗೊಂಡು ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು. ಅಲ್ಲದೆ, ಇಬ್ಬರ ಮೊಬೈಲನ್ನೂ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ತಮಾಷೆಗೆ ಮೆಸೇಜ್ ಮಾಡಿದ್ದು ಎಂದು ಯುವತಿ ಹೇಳುತ್ತಿದ್ದರೆ, ಅದನ್ನು ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಉಗ್ರರ ಆತಂಕ ಇರುವಾಗ ಬಾಂಬರ್ ಅನ್ನುವ ಮೆಸೇಜನ್ನು ಗಂಭೀರವಾಗಿ ಪರಿಗಣಿಸಿದ ಸಿಬಂದಿ, ಅವರಿಬ್ಬರನ್ನೂ ಏರ್ಪೋರ್ಟ್ ನಲ್ಲಿಯೇ ಕುಳ್ಳಿರಿಸಿ ತೀವ್ರ ತಪಾಸಣೆ ನಡೆಸಿದರು. ಅತ್ತ ಮುಂಬೈಗೆ ವಿಮಾನ ಹೊರಟರೂ ಯುವಕನನ್ನು ಬಿಟ್ಟಿರಲಿಲ್ಲ. ಇತ್ತ ಯುವತಿಯನ್ನೂ ಬಿಡಲಿಲ್ಲ. ಯುವಕ- ಯುವತಿ ಗೆಳೆಯರೇ, ಯಾಕೆ ಆ ರೀತಿ ಮೆಸೇಜ್ ಮಾಡಿದ್ರು ಅನ್ನೋದು ಮಾತ್ರ ಗೊತ್ತಾಗಿಲ್ಲ. ಈ ಬಗ್ಗೆ ಏರ್ಪೋರ್ಟ್ ಸಿಬಂದಿ ಪೊಲೀಸರಿಗೆ ದೂರು ನೀಡಿಲ್ಲ. ಯುವಕ- ಯುವತಿಯ ಅವಾಂತರ ಇಡೀ ದಿನ ಏರ್ಪೋರ್ಟ್ ಸಿಬಂದಿಯನ್ನು ಮಾತ್ರ ಆತಂಕಕ್ಕೆ ನೂಕಿತ್ತು.
A flight journey was cut short and all the passengers were alighted from the aircraft and the flight was intensely checked for any sabotage on Sunday, August 14, in the afternoon at the international airport here. One of the passengers noticed a young boy and a girl chatting on the mobile. He got suspicious and brought this to the notice of the cabin crew. Immediately, all the passengers on board were deboarded and the whole flight was checked for any sabotage.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm