ಪಡೀಲ್ ; ಮನೆಯಲ್ಲಿ ಬೆಂಕಿ ಅನಾಹುತ, ಬೈಕ್ ಭಸ್ಮ ! 

07-10-20 08:33 pm       Mangaluru Correspondent   ಕರಾವಳಿ

ಮನೆಯೊಂದಕ್ಕೆ ಬೆಂಕಿ ತಗುಲಿ, ಬೈಕ್ ಮತ್ತು ಮನೆಯೊಳಗಿನ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾದ ಘಟನೆ ಪಡೀಲ್ ಬಳಿಯ ಕರ್ಮಾರಿನಲ್ಲಿ ನಡೆದಿದೆ. 

ಮಂಗಳೂರು, ಅಕ್ಟೋಬರ್ 7: ಮನೆಯೊಂದಕ್ಕೆ ಬೆಂಕಿ ತಗುಲಿ, ಬೈಕ್ ಮತ್ತು ಮನೆಯೊಳಗಿನ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾದ ಘಟನೆ ಪಡೀಲ್ ಬಳಿಯ ಕರ್ಮಾರಿನಲ್ಲಿ ನಡೆದಿದೆ. 

ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಮನೆಯ ಒಳಗಿನ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿವೆ. 

ಮರಿಯಮ್ಮ ಎಂಬವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದ್ದು ಅಪಾಯ ತಪ್ಪಿದಂತಾಗಿದೆ. ಮನೆ ಮಂದಿ ಅನಾಹುತದಿಂದ ಪಾರಾಗಿದ್ದಾರೆ. ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿವೆ. ಆದರೆ ಬೆಂಕಿ ಹೇಗೆ ಸಂಭವಿಸಿದೆ ಎನ್ನುವುದು ಖಚಿತವಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗಲಿದ್ದೇ ಅಥವಾ ಕೃತ್ಯದ ಹಿಂದೆ ಯಾರಾದ್ರೂ ಇದ್ದಾರೆಯೇ ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.