ಕಲ್ಲಾಪಿನಲ್ಲಿ ಮೂರು ಕಾರುಗಳ ಸರಣಿ ಅಪಘಾತ ; ತಪ್ಪಿಸಿಕೊಂಡ ಇನ್ನೋವಾ, ಇನ್ನೊಂದು ಕಾರಲ್ಲಿದ್ದ ಮಗು ಗಂಭೀರ 

12-09-22 10:43 am       Mangalore Correspondent   ಕರಾವಳಿ

ಮೂರು ಕಾರು ಮತ್ತು ಸ್ಕೂಟರ್ ನಡುವೆ ನಡೆದ ಸರಣಿ ಅಪಘಾತಕ್ಕೊಳಗಾಗಿ ಕಾರಿನಲ್ಲಿದ್ದ ಮಗು ಗಂಭೀರ ಗಾಯಗೊಂಡಿದ್ದು, ಹಲವರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ರಾ.ಹೆ 66 ರ ಕಲ್ಲಾಪಿನಲ್ಲಿ ನಡೆದಿದೆ. 

ಉಳ್ಳಾಲ, ಸೆ.12 : ಮೂರು ಕಾರು ಮತ್ತು ಸ್ಕೂಟರ್ ನಡುವೆ ನಡೆದ ಸರಣಿ ಅಪಘಾತಕ್ಕೊಳಗಾಗಿ ಕಾರಿನಲ್ಲಿದ್ದ ಮಗು ಗಂಭೀರ ಗಾಯಗೊಂಡಿದ್ದು, ಹಲವರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ರಾ.ಹೆ 66 ರ ಕಲ್ಲಾಪಿನಲ್ಲಿ ನಡೆದಿದೆ. 

ರಾತ್ರಿ 10.30 ರ ವೇಳೆ ತೊಕ್ಕೊಟ್ಟಿನಿಂದ ಪಂಪ್ವೆಲ್ ತೆರಳುವ ಏಕಮುಖ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದೆ. ಮಂಗಳೂರಿಗೆ ಧಾವಿಸುತ್ತಿದ್ದ ಇನ್ನೋವಾ ಕಾರೊಂದು ಹಠಾತ್ತಾಗಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಅತೀ ವೇಗದಲ್ಲಿದ್ದ ಐ-20 ಕಾರು ಯೂಟರ್ನ್ ಹೊಡೆದು ನಿಂತಿದೆ. ಇದೇ ವೇಳೆ ಅದರ ಹಿಂದಿದ್ದ ಮತ್ತೊಂದು ಐ-10 ಕಾರು ಯೂಟರ್ನ್ ಆಗಿ ನಿಂತಿದ್ದ ಐ-20 ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಸ್ಕೂಟರ್ ಒಂದಕ್ಕೂ ಕಾರು ಡಿಕ್ಕಿ ಹೊಡೆದಿದೆ. 

\

ಅಪಘಾತಕ್ಕೆ ಕಾರಣವಾದ ಇನ್ನೋವಾ ಕಾರು ಕೂಡಲೇ ಪರಾರಿಯಾಗಿದೆ. ಐ-10 ಕಾರಲ್ಲಿ ಕುಟುಂಬವೊಂದು ಪ್ರಯಾಣಿಸುತ್ತಿದ್ದು ಅಪಘಾತದ ರಭಸಕ್ಕೆ ಕಾರಿನೊಳಗಿದ್ದ ಮಗು ಗಂಭೀರ ಗಾಯಗೊಂಡಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Serial accident between two cars and a two wheeler on thokottu pumpwell road in Mangalore. The baby inside the car is said to be seriously injured after the accident.