ಸೆ.26ರಿಂದ ಅ.10 ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ ಬದಲಿಸಲು ಶಿಕ್ಷಣ ಸಚಿವರ ಸೂಚನೆ  

12-09-22 10:25 pm       Mangalore Correspondent   ಕರಾವಳಿ

ಈ ಬಾರಿ ದಸರಾ ರಜೆಯನ್ನು ನವರಾತ್ರಿ ಕಳೆದ ಬಳಿಕ ಅ.3ರಿಂದ 16ರ ವರೆಗೆ ನೀಡಲಾಗಿತ್ತು. ಈ ಬಗ್ಗೆ ಸಾರ್ವಜನಿಕ ನೆಲೆಯಲ್ಲಿ ಆಕ್ಷೇಪ ಕೇಳಿಬರುತ್ತಿದ್ದಂತೆ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಶಿಕ್ಷಣ ಸಚಿವ ಬಿಸಿ ನಾಗೇಶ್ ಗಮನಕ್ಕೆ ತಂದಿದ್ದು, ದಸರಾ ರಜೆಯ ಅವಧಿಯನ್ನು ಮರು ನಿಗದಿಗೊಳಿಸುವಂಜೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ಮಂಗಳೂರು, ಸೆ.12: ಈ ಬಾರಿ ದಸರಾ ರಜೆಯನ್ನು ನವರಾತ್ರಿ ಕಳೆದ ಬಳಿಕ ಅ.3ರಿಂದ 16ರ ವರೆಗೆ ನೀಡಲಾಗಿತ್ತು. ಈ ಬಗ್ಗೆ ಸಾರ್ವಜನಿಕ ನೆಲೆಯಲ್ಲಿ ಆಕ್ಷೇಪ ಕೇಳಿಬರುತ್ತಿದ್ದಂತೆ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಶಿಕ್ಷಣ ಸಚಿವ ಬಿಸಿ ನಾಗೇಶ್ ಗಮನಕ್ಕೆ ತಂದಿದ್ದು, ದಸರಾ ರಜೆಯ ಅವಧಿಯನ್ನು ಮರು ನಿಗದಿಗೊಳಿಸುವಂಜೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ಶೈಕ್ಷಣಿಕ ಮಾರ್ಗಸೂಚಿ ಪ್ರಕಾರ ದಸರಾ ರಜೆಯನ್ನು ನೀಡಲಾಗಿದ್ದರೂ, ಆಯಾ ಸ್ಥಳೀಯ ಸನ್ನಿವೇಶಗಳಿಗೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ಬದಲಾವಣೆ ಮಾಡಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಅನುಮತಿ ಈಗಾಗಲೇ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ಸೆ.26ರಿಂದ 10ರ ವರೆಗೆ ನೀಡುವಂತೆ ಕೋರಿಕೆ ಬಂದಿದ್ದು, ಅದರಂತೆ ಪರಿಶೀಲಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಸರಿದೂಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ, ಅ.2ರ ಗಾಂಧಿ ಜಯಂತಿ ಆಚರಣೆಯನ್ನು ನಡೆಸುವ ಷರತ್ತಿನೊಂದಿಗೆ ರಜೆ ಆದೇಶ ನೀಡುವಂತೆ ಜಿಲ್ಲಾಧಿಕಾರಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚನೆ ನೀಡಿದ್ದಾರೆ.

ನವರಾತ್ರಿ ಕಳೆದ ಬಳಿಕ ದಸರಾ ರಜೆಯನ್ನು ನೀಡಿದರೆ ಹಬ್ಬದ ಮಜಾ ಅನುಭವಿಸಲು ಸಾಧ್ಯವಾಗುವುದಿಲ್ಲ ಎಂದು ಜನರು ಆಕ್ಷೇಪ ತೆಗೆದಿದ್ದರು. ಮಂಗಳೂರು ದಸರಾ ಎಂದೇ ಹೆಸರಾಗಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವ ಸೆ.25ರಿಂದ .5ರ ವರೆಗೆ ನಡೆಯುವುದರಿಂದ ಇದೇ ಅವಧಿಯಲ್ಲಿ ರಜೆ ನೀಡುವಂತೆ ಕೆಲವರು ಕೇಳಿಕೊಂಡಿದ್ದರು. ಇದರಂತೆ, ಶಾಸಕ ವೇದವ್ಯಾಸ ಕಾಮತ್, ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದರು.

Dasara holidays from September 26th to October 10th in Mangalore.