ಬ್ರೇಕಿಂಗ್ ನ್ಯೂಸ್
13-09-22 08:47 pm Mangalore Correspondent ಕರಾವಳಿ
ಮಂಗಳೂರು, ಸೆ.13: ಸುರತ್ಕಲ್ ಎನ್ಐಟಿಕೆ ಬಳಿಯ ಟೋಲ್ ಗೇಟ್ ತೆರವಿಗೆ ದಿನಾಂಕ ಘೋಷಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೂರಾರು ಮಂದಿ ಸಾಮೂಹಿಕ ಧರಣಿ ನಡೆಸಿದ್ದಾರೆ. ಬೆಳಗ್ಗಿನಿಂದ ಸಂಜೆಯ ವರೆಗೂ ಎನ್ಐಟಿಕೆ ಹೆದ್ದಾರಿಯ ಬದಿಯಲ್ಲೇ ಧರಣಿ ನಡೆಸಿದ್ದು, ಟೋಲ್ ಗೇಟ್ ವಿರುದ್ಧ ಘೋಷಣೆ ಕೂಗಿದ್ದಾರೆ. ಅಲ್ಲದೆ, ಟೋಲ್ ಗೇಟ್ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಒಂದು ತಿಂಗಳ ಗಡುವು ನೀಡಿದ್ದು, ತೆರವು ಮಾಡದೇ ಇದ್ದರೆ ಅಕ್ಟೋಬರ್ 18ರಂದು ಜನರೇ ಸೇರಿಕೊಂಡು ತೆರವು ಮಾಡುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಅ.18ರಂದು ಜನರೇ ತೆರವು ಮಾಡಲಿದ್ದಾರೆ
ಇದೇ ವೇಳೆ, ಆಕ್ರೋಶಿತರಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ನಾವು 15 ದಿನದಲ್ಲಿ ತೆರವು ಮಾಡುತ್ತೇವೆಂಬ ಇವರ ಹೇಳಿಕೆಯನ್ನು ನಂಬುವುದಿಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಇಂಥ ಹೇಳಿಕೆಯನ್ನು ನೂರಾರು ಬಾರಿ ಕೇಳಿದ್ದೇವೆ. ಕಳೆದ ಬಾರಿ ಸಚಿವ ಗಡ್ಕರಿಯವರೇ ಸಂಸತ್ತಿನಲ್ಲಿ ಮೂರು ತಿಂಗಳಲ್ಲಿ ಎಲ್ಲ ಅಕ್ರಮ ಟೋಲ್ ಗೇಟ್ ತೆರವು ಮಾಡುತ್ತೇವೆ ಎಂದಿದ್ದರು. ಮಾತಿನ ಪ್ರಕಾರ, ಆಗಸ್ಟ್ ಒಳಗೆ ಕರ್ನಾಟಕದಲ್ಲಿರುವ 60 ಕಿಮೀ ಒಳಗಿನ 18 ಟೋಲ್ ಗೇಟ್ ತೆರವು ಮಾಡಬೇಕಿತ್ತು. ದೇಶದಲ್ಲಿ ಇಂಥ 190 ಟೋಲ್ ಗೇಟ್ ಇದೆಯೆಂದು ಹೆದ್ದಾರಿ ಪ್ರಾಧಿಕಾರದವರೇ ಮಾಹಿತಿ ನೀಡಿದ್ದಾರೆ. ಇಂಥ ಹಗಲು ದರೋಡೆಯನ್ನು ನಾವು ಒಪ್ಪಲ್ಲ. ಜಿಲ್ಲಾಡಳಿತಕ್ಕೆ ಒಂದು ತಿಂಗಳ ಗಡುವು ಕೊಡುತ್ತೇವೆ. ತೆರವು ಮಾಡದೇ ಇದ್ದರೆ, ಅ.18ರಂದು ಸಾವಿರಾರು ಜನ ಟೋಲ್ ಗೇಟ್ ಮುತ್ತಿಗೆ ಹಾಕಿ, ತೆರವು ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ನಲ್ವತ್ತು ಪರ್ಸೆಂಟಿಗಾಗಿ ಟೋಲ್ ಉಳಿಸಿದ್ದಾರೆ
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಇದನ್ನು ನಾನು ಟೋಲ್ ಗೇಟ್ ಎನ್ನುವುದಿಲ್ಲ. ಇದೊಂದು ಶೆಡ್ ಎಂದೇ ಹೇಳುವುದು. ಇದು ಕೂಡ ಬಿಜೆಪಿಯವರ ನಲ್ವತ್ತು ಪರ್ಸೆಂಟ್ ಕಮಿಷನ್ನಿನ ದಂಧೆ. ಸಚಿವ ಗಡ್ಕರಿಯವರು 90 ದಿನದಲ್ಲಿ ಟೋಲ್ ತೆರವು ಮಾಡುತ್ತೇವೆ ಎಂದಿದ್ದರು. ಇವತ್ತು ಜನರೆಲ್ಲ ರಾಜಕೀಯ ಭೇದ ಮರೆತು ಪ್ರತಿಭಟನೆ ನಡೆಸಿದ್ದಾರೆ. ಯಾಕೆ ಇಲ್ಲಿನ ಶಾಸಕರು, ಸಂಸದರು ಪ್ರತಿಭಟನೆಗೆ ಬಂದಿಲ್ಲ. ಇವರು ಟೋಲ್ ಗೇಟ್ ತೆರವು ಮಾಡುತ್ತಿಲ್ಲ ಯಾಕಂದ್ರೆ, ಇವರಿಗೆಲ್ಲ ಈ ಟೋಲ್ ನಲ್ಲಿ ಕಲೆಕ್ಷನ್ ಆಗುವ 40 ಪರ್ಸೆಂಟ್ ಜೇಬಿಗೆ ಹೋಗುತ್ತದೆ. ಜಿಲ್ಲಾಡಳಿತ ಟೋಲ್ ಗೇಟ್ ತೆರವು ಮಾಡದೇ ಇದ್ದರೆ ಈ ಟೋಲ್ ಗೇಟನ್ನು ಅಗೆದು ಅರಬ್ಬೀ ಸಮುದ್ರಕ್ಕೆ ಬಿಸಾಕುತ್ತೇವೆ ಎಂದು ಹೇಳಿದ್ದಾರೆ.
ರಸ್ತೆಯ ಹಣ ವಸೂಲಿ ಮಾಡಿದ್ದಾರೆ
ಸಾಮಾಜಿಕ ಕಾರ್ಯಕರ್ತ ಎಂಜಿ ಹೆಗ್ಡೆ ಮಾತನಾಡಿ, ಇಲ್ಲಿನ ಟೋಲ್ ಗೇಟನ್ನು ತಾತ್ಕಾಲಿಕ ಎನ್ನುವ ನೆಲೆಯಲ್ಲಿಯೇ ಆರು ವರ್ಷಗಳ ಹಿಂದೆ ಆರಂಭಿಸಿದ್ದು. ಈ ರಸ್ತೆಗೆ ಖರ್ಚಾದ ಮೊತ್ತವನ್ನು ಈಗಾಗಲೇ ವಸೂಲಿ ಮಾಡಲಾಗಿದೆ. ಇನ್ನು ಸುಂಕ ಸಂಗ್ರಹ ಮಾಡುವ ಅಗತ್ಯವಿಲ್ಲ. ಇನ್ನೇನಿದ್ದರೂ, ಹೆದ್ದಾರಿ ನಿರ್ವಹಣೆಗಷ್ಟೇ ಹಣ ಪಡೆದರೆ ಸಾಕು. ಅದಕ್ಕಾಗಿ ಟೋಲ್ ಗೇಟ್ ಬೇಕಾಗಿಲ್ಲ. ನಾವು ನೀವು ರಸ್ತೆ ತೆರಿಗೆಯನ್ನು ಕಟ್ಟುತ್ತೇವೆ. ಅದರಿಂದ ರಸ್ತೆ ನಿರ್ವಹಣೆ ಮಾಡಬಹುದು. ಈ ಟೋಲ್ ಗೇಟನ್ನು ಕೂಡಲೇ ಬಂದ್ ಮಾಡಿ, ಇಲ್ಲದಿದ್ದರೆ ಜನರೇ ಸೇರಿಕೊಂಡು ತೆರವು ಮಾಡುವ ದಿನ ದೂರವಿಲ್ಲ ಎಂದು ಹೇಳಿದರು.
ಸಂಜೆ ವೇಳೆಗೆ, ಪ್ರತಿಭಟನಾ ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡರನ್ನೂ ಒಂದು ತಿಂಗಳ ಒಳಗೆ ಟೋಲ್ ಗೇಟ್ ತೆರವುಗೊಳಿಸುವಂತೆ ಒತ್ತಾಯ ಮಾಡಲಾಗಿದೆ. ಪ್ರತಿಕ್ರಿಯಿಸಿದ ಲಿಂಗೇಗೌಡ, ನಾನು ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತೇನೆ. ಜನರ ಆಕ್ಷೇಪವನ್ನು ತಿಳಿಸುತ್ತೇನೆ. ಈಗಾಗಲೇ ಪರ್ಯಾಯ ಟೋಲ್ ಗೇಟ್ ಮಾಡಲು ಪ್ರಕ್ರಿಯೆ ನಡೆಯುತ್ತಿದ್ದು 15 ದಿನಗಳಲ್ಲಿ ತೆರವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಪ್ರತಿಭಾ ಕುಳಾಯಿ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ಡಿವೈಎಫ್ಐ ಮುಖಂಡ ಬಿಕೆ ಇಮ್ತಿಯಾಜ್, ರಾಘವೇಂದ್ರ ರಾವ್, ಪುರುಷೋತ್ತಮ ಚಿತ್ರಾಪುರ, ಕಿಶನ್ ಹೆಗ್ಡೆ ಕೊಳ್ಕೆಬೈಲು ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಪಾಲ್ಗೊಂಡಿದ್ದರು.
Surathkal Toll Gate Virodhi Samiti and likeminded organizations staged a protest at Surathkal toll gate on Tuesday September 13, demanding the government to announce a final date on which the toll gate would be closed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm