ಗಂಡ ಮಾಡಿದ ಸಾಲಕ್ಕೆ ಹೆಂಡತಿಗೆ ಶಿಕ್ಷೆ  ; ಖಿನ್ನತೆಗೊಳಗಾಗಿದ್ದ ಉಪನ್ಯಾಸಕಿ ಆತ್ಮಹತ್ಯೆ ! 

13-09-22 10:38 pm       Udupi Correspondent   ಕರಾವಳಿ

ಸಾಲದ ಹೊರೆಗೆ ಬೇಸತ್ತು ಮಾನಸಿಕ ಖಿನ್ನತೆಗೊಳಗಾಗಿದ್ದ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಉಡುಪಿ, ಸೆ 13: ಸಾಲದ ಹೊರೆಗೆ ಬೇಸತ್ತು ಮಾನಸಿಕ ಖಿನ್ನತೆಗೊಳಗಾಗಿದ್ದ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೊಡವೂರು ಕಾನಂಗಿ ನಿವಾಸಿ, ವಿವಾಹಿತೆ ಬೀನಾರಾಣಿ (34) ಆತ್ಮಹತ್ಯೆ ಮಾಡಿಕೊಂಡವರು. ಅವರು ಕಳೆದ 4 ವರ್ಷಗಳಿಂದ ಶಿರ್ವದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರ ಪತಿ 9 ತಿಂಗಳ ಹಿಂದೆ ಸಾಲಭಾದೆಯಿಂದ ಗುಂಡಿಬೈಲಿನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಪತಿ ಮಾಡಿದ ಸಾಲ ಇವರ ಮೇಲಿದ್ದು ಬರುತ್ತಿರುವ ಸಂಬಳದಲ್ಲಿ ಸಾಲ ತೀರಿಸಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Udupi College professor commits suicide due to huge debt. The deceased has been identified as Binarani.