ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅರ್ಚಕ ನೇಣಿಗೆ ಶರಣು 

08-10-20 11:57 pm       Mangaluru Correspondent   ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸರ್ಪ ಸಂಸ್ಕಾರ ಪೂಜೆ ಸೇವೆ ನಿರ್ವಹಿಸುತ್ತಿದ್ದ ಕೃಷ್ಣ ಮಯ್ಯ (55) ಗುರುವಾರ ಸಂಜೆ ನೇಣಿಗೆ ಶರಣಾಗಿದ್ದಾರೆ.

ಸುಬ್ರಹ್ಮಣ್ಯ, ಅಕ್ಟೋಬರ್ 8: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಸರ್ಪ ಸಂಸ್ಕಾರ ಪೂಜೆ ಸೇವೆ ನಿರ್ವಹಿಸುತ್ತಿದ್ದ ಕೃಷ್ಣ ಮಯ್ಯ (55) ಗುರುವಾರ ಸಂಜೆ ನೇಣಿಗೆ ಶರಣಾಗಿದ್ದಾರೆ.

ಉಪ್ಪಿನಂಗಡಿ ನಾಳ ನಿವಾಸಿಯಾದ ಕೃಷ್ಣ ಮಯ್ಯ ಕಳೆದ ಐದು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆ ನಿರ್ವಹಿಸುತ್ತಿದ್ದರು. ಸುಬ್ರಹ್ಮಣ್ಯಕ್ಕೆ ಸಮೀಪದ ಕುಲ್ಕುಂದ ಎಂಬಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಗುರುವಾರ ಸಂಜೆ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

kukke subramanya temple priest commits suicide. The priest has been identified as Krishan Maya (55). Subramanya police have registered the case.