ಸರ್ಕಾರಿ ಆಸ್ಪತ್ರೆ ಎದುರು ರೋಗಿಯೊಂದಿಗೆ ಪ್ರತಿಭಟನೆ !

03-08-20 07:20 pm       Mangalore Reporter   ಕರಾವಳಿ

ಮುಲ್ಕಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ರೋಗಿಯನ್ನು ಕರೆತಂದ ಸಮಾಜ ಸೇವಕರೇ ಆಸ್ಪತ್ರೆಯ ಮುಂದೆ ರೋಗಿಯನ್ನು ಮಲಗಿಸಿ ಪ್ರತಿಭಟನೆ ನಡೆಸಿದ ನಂತರ ಚಿಕಿತ್ಸೆ ನೀಡಲು ಮುಂದಾದ ಘಟನೆ ನಡೆದಿದೆ.

ಮಂಗಳೂರು: ಮುಲ್ಕಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ರೋಗಿಯನ್ನು ಕರೆತಂದ ಸಮಾಜ ಸೇವಕರೇ ಆಸ್ಪತ್ರೆಯ ಮುಂದೆ ರೋಗಿಯನ್ನು ಮಲಗಿಸಿ ಪ್ರತಿಭಟನೆ ನಡೆಸಿದ ನಂತರ ಚಿಕಿತ್ಸೆ ನೀಡಲು ಮುಂದಾದ ಘಟನೆ ನಡೆದಿದೆ.

ಪಕ್ಷಿಕೆರೆ ಹೊಸಕಾಡು ನಿವಾಸಿ ಧರ್ಮ ಶೆಟ್ಟಿಗಾರ್(52) ಎಂಬವರು ಅಸ್ವಸ್ಥರಾದ ಕಾರಣ ಅವರನ್ನು ಸ್ಥಳೀಯ ಸಮಾಜ ಸೇವಕರಾದ ಮಯ್ಯದ್ದಿ ಮತ್ತು ಜಾಕ್ಸನ್ ಎಂಬುವರು ಕೆಮ್ರಾಲ್ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. 

ಅಲ್ಲಿಂದ ನೇರವಾಗಿ ಹೆಚ್ಚಿನ ಚಿಕತ್ಸೆಗೆ ಮೂಲ್ಕಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರಿಂದ ರೋಗಿಯನ್ನು ಕರೆದುಕೊಂಡು ಬಂದಾಗ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರೋಗಿಯನ್ನು ಕೋವಿಡ್ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿ ಅದರ ವರದಿ ನೆಗೆಟಿವ್ ಬಂದರೂ ವೈದ್ಯರು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿ ಮಂಗಳೂರಿನ ವೆನ್‍ಲಾಕ್‍ಗೆ ದಾಖಲಿಸಿ ಎಂದು ಹೇಳಿದ್ದರಿಂದ ಆಸ್ಪತ್ರೆಯ ಆವರಣದಲ್ಲಿಯೇ ರೋಗಿಯನ್ನು ಮಲಗಿಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನೆಗೆ ಮಣಿದು ಕೊನೆಗೆ ಚಿಕತ್ಸೆಗೆ ದಾಖಲಿಸಿ ಕೊಂಡಿದ್ದಾರೆ.