ಬ್ರೇಕಿಂಗ್ ನ್ಯೂಸ್
10-10-20 01:56 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 10: ಕರಾವಳಿಯಲ್ಲಿ ಜಾತ್ರೆಗಳಂದ್ರೆ ಜನರಿಗೆ ಗೌಜಿ. ಡಿಸೆಂಬರ್ ನಿಂದ ಮೇ ತಿಂಗಳ ವರೆಗೆ ದೇವಸ್ಥಾನ, ದೈವಸ್ಥಾನಗಳಲ್ಲಿ ಜಾತ್ರೆಗಳದ್ದೇ ಅಬ್ಬರ. ಆದರೆ ಕಳೆದ ಬಾರಿ ಕೊರೊನಾ ಲಾಕ್ಡೌನ್ ಎಲ್ಲ ಉತ್ಸವಗಳಿಗೂ ಬ್ರೇಕ್ ಹಾಕಿತ್ತು. ಹೀಗೆ ಜಾತ್ರೆಗಳಿಗೆ ಬ್ರೇಕ್ ಬಿದ್ದಿರುವುದು ಇಲ್ಲೊಂದು ಉತ್ತರ ಕರ್ನಾಟಕ ಮೂಲದ ಕುಟುಂಬವನ್ನು ಬೀದಿಪಾಲು ಮಾಡಿದೆ.
ವಿಜಯಪುರ ಮೂಲದ 14 ಜನರ ಕುಟುಂಬ ಮಂಗಳೂರು ಹೊರವಲಯದ ಬಜ್ಪೆಯ ಪಡುಪೆರಾರದಲ್ಲಿ ಬೀಡು ಬಿಟ್ಟಿದ್ದು, ಊಟಕ್ಕೂ ಗತಿಯಿಲ್ಲದೆ ಪರದಾಡುವಂತಾಗಿದೆ. ಇಂಡಿ ತಾಲೂಕಿನ ಹಲ್ಲಳ್ಲಿ ನಿವಾಸಿಗಳಾದ ಎರಡು ಕುಟುಂಬಗಳಲ್ಲಿ ಗಂಡಸರು, ಮಹಿಳೆಯರು ಮತ್ತು ನಾಲ್ವರು ಮಕ್ಕಳಿದ್ದು ಒಟ್ಟು 13 ಮಂದಿ ಇದ್ದಾರೆ. ಜಾತ್ರೆ, ಉತ್ಸವಗಳಲ್ಲಿ ರಾಟೆ ತೊಟ್ಟಿಲು, ಡ್ರ್ಯಾಗನ್ ರೈಲು, ಕುದುರೆ ಹೀಗೆ ಮಕ್ಕಳ ಮನೋರಂಜನೆಯ ಆಟಗಳನ್ನು ಆಡಿಸುವುದು, ಅದರಿಂದ ಹಣ ಸಂಗ್ರಹಿಸುವುದು ಇವರ ಕೆಲಸ. ಆಟದ ಸಾಮಾನುಗಳನ್ನು ಇಟ್ಕೊಂಡು ಊರಿಂದೂರಿಗೆ ತಿರುಗಾಡುವ ಇವರಿಗೆ ಇದೇ ಆದಾಯದ ಮೂಲ. ಪ್ರತಿ ಬಾರಿ ಜನವರಿ ತಿಂಗಳಲ್ಲಿ ಕರಾವಳಿಗೆ ಬರುವ ಇವರು ನಾಲ್ಕು ತಿಂಗಳಲ್ಲಿ ಲಕ್ಷಾಂತರ ದುಡಿದು ಮರಳುತ್ತಾರೆ. ಆದರೆ, ಈ ಬಾರಿ ಫೆಬ್ರವರಿ ವೇಳೆಗೆ ಬಜ್ಪೆಯ ಪಡುಪೆರಾರದ ಪೆರಾರ ಜಾತ್ರೆಗೆ ಬಂದವರಿಗೆ ಲಾಕ್ಡೌನ್ ಕಟ್ಟಿಹಾಕಿದೆ. ಅತ್ತ ಊರಿಗೆ ಮರಳುವಂತೆಯೂ ಇಲ್ಲ. ಇಲ್ಲೇ ಉಳಿಯುವಂತೆಯೂ ಇಲ್ಲದ ಸ್ಥಿತಿ.
ರಾಟೆ, ತೊಟ್ಟಿಲು, ಡ್ರ್ಯಾಗನ್ ರೈಲಿನ ಸಾಮಗ್ರಿಗಳು ಮಳೆ, ಬಿಸಿಲಿಗೆ ತುಕ್ಕು ಹಿಡಿದಿದೆ. ಎಲ್ಲವನ್ನೂ ಪಡು ಪೆರಾರ ಗ್ರಾಮ ಪಂಚಾಯತ್ ಮುಂದಿನ ಬಯಲಲ್ಲಿ ರಾಶಿ ಹಾಕಿರುವ ಈ ಕುಟುಂಬಗಳು ಡೇರೆ ಹಾಕ್ಕೊಂಡು ಜೀವನ ಕಳೆಯುತ್ತಿದ್ದಾರೆ. ಕೈಯಲ್ಲಿದ್ದ ಹಣ ಮುಗಿದಿದ್ದು, ಊರವರೇ ಸೇರಿ ಊಟ, ತಿಂಡಿಗೆ ಸಹಾಯ ನೀಡುತ್ತಿದ್ದಾರೆ. ಕಳೆದ ಬಾರಿ ಮೂರು ಲಕ್ಷ ರೂಪಾಯಿ ಸಾಲ ಪಡೆದು ಆಟದ ಸಾಮಗ್ರಿಗಳನ್ನು ಪಡೆದು ಬಂದಿದ್ದೆವು. ಈಗ ಸಾಲ ಕಟ್ಟದೆ ಅದರ ಮೊತ್ತ ಏಳು ಲಕ್ಷ ರೂಪಾಯಿ ಆಗಿದೆ. ಇಲ್ಲಿಂದ ಹೋಗುವುದಕ್ಕೂ ಆಗಲ್ಲ. ಸಾಮಗ್ರಿಗಳನ್ನು ತುಂಬ್ಕೊಂಡು ಹೋಗಲು ಮೂರು ಲಾರಿಯಷ್ಟಿದೆ. ಊರಿಗೆ ಹೋಗುವುದಿದ್ದರೆ ಒಮ್ಮೆಗೆ 30 ಸಾವಿರ ರೂಪಾಯಿ ಬಾಡಿಗೆ ಹೇಳುತ್ತಾರೆ. ಮೂರು ಬಾರಿ ತುಂಬ್ಕೊಂಡು ಹೋಗಲು 90 ಸಾವಿರ ರೂ. ಬೇಕು. ಈಗ ಊಟಕ್ಕೇ ಗತಿಯಿಲ್ಲ. ಏನು ಮಾಡುವುದು ತೋಚುವುದಿಲ್ಲ ಎನ್ನುತ್ತಾರೆ, ಸಂತ್ರಸ್ತ ಕುಟುಂಬದ ಮಹಿಳೆ ಅಕ್ಕುಬಾಯಿ.
ಇಲ್ಲಿ ಆಸುಪಾಸಿನವರು ಸಹಾಯ ಮಾಡುತ್ತಿದ್ದಾರೆ. ಇಲ್ಲಿನ ತರಕಾರಿ ಅಂಗಡಿಯವರು ವಾರಕ್ಕೊಮ್ಮೆ ತರಕಾರಿ ಕೊಡುತ್ತಾರೆ. ಇನ್ನೊಬ್ಬರು ಜೀನಸು ಸಾಮಾನು ಕೊಡುತ್ತಾರೆ. ಗಂಡಸರು ಒಂದಷ್ಟು ಕೂಲಿ ಮಾಡ್ಕೊಂಡಿದ್ದಾರೆ. ಇನ್ನಾದ್ರೂ ಜಾತ್ರೆ ಸುರು ಆಗತ್ತಾ ನೋಡಬೇಕ್ರೀ ಎನ್ನುತ್ತಾರೆ, ಇನ್ನೊಬ್ಬ ಮಹಿಳೆ.
ಕರಾವಳಿಯಲ್ಲಿ ಮತ್ತೆ ಜಾತ್ರೆ ಸುರು ಆಗೋ ಸಮಯ ಬಂತು. ಹೀಗಾಗಿ ಇವ್ರಿಗೆ ಜಾತ್ರೆ ಸುರುವಾದ್ರೆ ಆಟ ಮತ್ತೆ ಶುರು ಮಾಡಬಹುದು ಅನ್ನೋ ಆಸೆ ಇದೆ. ಆದರೆ, ಕೊರೊನಾ ನಿರ್ಬಂಧದಿಂದಾಗಿ ನವರಾತ್ರಿ ಸಂದರ್ಭವೂ ಅಂಗಡಿ ಹಾಕುವಂತಿಲ್ಲ. ಆಟಿಕೆ ಮಾರುವಂತಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಒಟ್ನಲ್ಲಿ ಈ ಕುಟುಂಬದ ಸ್ಥಿತಿ ಮೂರಾಬಟ್ಟೆಯಾಗಿದೆ.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am