ಬ್ರೇಕಿಂಗ್ ನ್ಯೂಸ್
02-11-22 07:59 pm Mangalore Correspondent ಕರಾವಳಿ
ಬೆಳ್ತಂಗಡಿ, ನ.2 : ಇಡೀ ದೇಶವೇ ತನ್ನ ಚಿತ್ರದತ್ತ ಗಮನ ಸೆಳೆಯುವಂತೆ ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಪತ್ನೀಕರಾಗಿ ಬುಧವಾರ ಧರ್ಮಸ್ಥಳಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವಿ. ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ವೀರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಕುಟುಂಬ ಸಮೇತರಾಗಿ ಮಂಗಳೂರಿನಲ್ಲಿ “ಕಾಂತಾರ” ಚಲನಚಿತ್ರ ನೋಡಿದ್ದು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೆಗ್ಗಡೆಯವರು ರಿಷಬ್ ಶೆಟ್ಟಿ ಬಳಿಯೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದಂಪತಿಯನ್ನು ಗೌರವಿಸಿದರು. ನಟ ಪ್ರಮೋದ್ ಶೆಟ್ಟಿ ಜೊತೆಗಿದ್ದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ಸಿನಿಮಾ ತಯಾರಿಗೂ ಮೊದಲೇ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದೆ. ಕಾಂತಾರದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ. ಹೆಗ್ಗಡೆಯವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ದೇವರೇ ಸಿನಿಮಾ ನೋಡಿ ಆಶೀರ್ವದಿಸಿದಂತಾಗಿದೆ ಎಂದು ಹೇಳಿದರು. ಎಲ್ಲಾ ಕಡೆಗಳಲ್ಲಿ ಎರಡು ತಿಂಗಳಿಗೂ ಮಿಕ್ಕಿ ಜನರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ. ತುಳು ಹಾಗೂ ಇತರ ಭಾಷೆಗಳಲ್ಲಿಯೂ ಸದ್ಯದಲ್ಲೇ ಕಾಂತಾರ ಪ್ರದರ್ಶನವಾಗಲಿದೆ ಎಂದವರು ಹೇಳಿದರು.
Kantara Actor and Director Rishab Shetty meets D. Veerendra Heggade takes blessings at Dharmasthala.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 01:14 pm
HK News Desk
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm