ಬ್ರೇಕಿಂಗ್ ನ್ಯೂಸ್
05-11-22 04:39 pm HK News Desk ಕರಾವಳಿ
ಮಂಗಳೂರು, ನ.5:ಎನ್ಐಎ ಅಧಿಕಾರಿಗಳು ಮೈಸೂರು, ದಕ್ಷಿಣ ಕನ್ನಡ ಮತ್ತು ಹುಬ್ಬಳ್ಳಿ ಜಿಲ್ಲೆಯ ಐದು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ಬಗ್ಗೆ ಅಧಿಕೃತ ಪತ್ರಿಕಾ ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿಯಾಗಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ದೆಹಲಿ ಎನ್ಐಎ ಕಚೇರಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್ ಇಕ್ಬಾಲ್, ಇಸ್ಮಾಯಿಲ್ ಶಾಫಿ, ಸುಳ್ಯ ಬಳಿಯ ನಾವೂರು ನಿವಾಸಿ ಇಬ್ರಾಹಿಂ ಪಾಷಾ ಬಂಧಿತರು. ಪ್ರವೀಣ್ ನೆಟ್ಟಾರು ಕೊಲೆಗೆ ಮೂವರು ಆರೋಪಿಗಳು ಸಂಚು ನಡೆಸಿರುವುದರಲ್ಲಿ ಭಾಗಿಯಾಗಿದ್ದಾರೆ. ದಾಳಿ ಕಾರ್ಯಾಚರಣೆ ಸಂದರ್ಭದಲ್ಲಿ ಡಿಜಿಟಲ್ ಸಾಕ್ಷ್ಯಗಳು, ದಾಖಲೆ ಪತ್ರಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.

ಈಗಾಗಲೇ ಪ್ರಕರಣದಲ್ಲಿ ಹತ್ತು ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ನಾಲ್ವರ ಬಂಧನಕ್ಕಾಗಿ ಸುಳಿವು ಕೊಟ್ಟವರಿಗೆ ಎನ್ಐಎ 14 ಲಕ್ಷ ರೂಪಾಯಿ ಬಹುಮಾನವನ್ನೂ ಪ್ರಕಟಿಸಿದ್ದಾರೆ. ಪಿಎಫ್ಐ ಸಂಘಟನೆಯ ಸದಸ್ಯರು ಸಮಾಜದಲ್ಲಿ ಭಯ ಮೂಡಿಸುವ ದೃಷ್ಟಿಯಿಂದ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ್ದರು ಎನ್ನುವುದು ಎನ್ಐಎ ತನಿಖೆಯಲ್ಲಿ ಪತ್ತೆಯಾಗಿತ್ತು. ಇಸ್ಮಾಯಿಲ್ ಶಾಫಿ ಮತ್ತು ಮಹಮ್ಮದ್ ಇಕ್ಬಾಲ್ ಸೋದರರಾಗಿದ್ದು, ಈ ಹಿಂದೆ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆನಂತರ, ಎಸ್ಡಿಪಿಐ ಪಕ್ಷದಲ್ಲಿ ಗುರುತಿಸ್ಕೊಂಡು ಶಾಫಿ ಬೆಳ್ಳಾರೆ ರಾಜ್ಯ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ. ಮಹಮ್ಮದ್ ಇಕ್ಬಾಲ್ ಬೆಳ್ಳಾರೆ ಗ್ರಾಪಂನಲ್ಲಿ ಸದಸ್ಯನಾಗಿದ್ದು, ಎಸ್ಡಿಪಿಐ ಪಕ್ಷದಲ್ಲಿ ಜಿಲ್ಲಾ ಮುಖಂಡನಾಗಿ ಗುರುತಿಸಲ್ಪಟ್ಟಿದ್ದ. ಇದೀಗ ಇಬ್ಬರನ್ನೂ ಎನ್ಐಎ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Mangalore NIA releases statement on arrest of PFI leaders Shafi Bellare, Iqbal Bellare and Ibrahim Shah. Iqbal Bellare is the gram panchayat member of Bellare village, while Shafi Bellare is the State Secretary for the Socialist Democratic Party of India (SDPI). The NIA officials said raids are being carried out in Sullia, Uppinangady, Mysuru and Hubballi.
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
11-02-26 06:47 pm
HK News Desk
ಹಗಲಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ರಾತ್ರಿ ವೇಳೆ...
11-02-26 04:22 pm
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
11-02-26 06:00 pm
Mangalore Correspondent
ಎಡಪದವು ಬಳಿ ಹೊಸ ಹೆದ್ದಾರಿಗೆ ಅಗೆತ - ಹಳೆ ರಸ್ತೆ ಕು...
11-02-26 03:45 pm
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
11-02-26 10:54 pm
Udupi Correspondent
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am