ಬ್ರೇಕಿಂಗ್ ನ್ಯೂಸ್
06-11-22 01:07 pm Mangalore Correspondent ಕರಾವಳಿ
ಮಂಗಳೂರು, ನ.6 : ಸ್ಕೂಟರಿಗೆ ಲಾರಿ ಡಿಕ್ಕಿಯಾಗಿ ಮಧ್ಯ ವಯಸ್ಕ ಮಹಿಳೆ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಲ್ಲಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕೊಣಾಜೆ ಬಳಿಯ ಪಜೀರು ನಿವಾಸಿ ನೇತ್ರಾವತಿ(48) ಮತ್ತು ಜಪ್ಪಿನಮೊಗರು ನಿವಾಸಿ ಗಂಗಾಧರ (45) ಮೃತರು. ಸ್ಕೂಟರಿನಲ್ಲಿ ಇವರ ಜೊತೆಗಿದ್ದ ಇಬ್ಬರು ಮಕ್ಕಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರು ಸ್ಕೂಟರ್ ನಲ್ಲಿ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ ಕಲ್ಲಾಪಿನ ಗ್ಲೋಬಲ್ ಮಾರ್ಕೆಟ್ ಎದುರುಗಡೆ ಅಡ್ಡ ರಸ್ತೆಯಿಂದ ಹೆದ್ದಾರಿಗೆ ನುಗ್ಗುತ್ತಿದ್ದ ಸರಕು ತುಂಬಿದ್ದ ಲಾರಿ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಗಂಗಾಧರ್ ಮತ್ತು ನೇತ್ರಾವತಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಲಾರಿ ಚಾಲಕ ಹನೀಫ್ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೇತ್ರಾವತಿ ಅಂಗವಿಕಲೆಯಾಗಿದ್ದು ಪಜೀರು ನಿವಾಸಿ ರಮೇಶ್ ಆಚಾರ್ಯ ಎಂಬವರ ಪುತ್ರಿ. ಮಂಗಳೂರು ನಗರದಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು. ಆಕೆ ತನ್ನ ಅಕ್ಕನ ಮಗ ಜ್ಞಾನೇಶ್ (6) ಮತ್ತು ಇನ್ನೊಬ್ಬ ತನ್ನ ಮಗು ಮೋಕ್ಷಾ(4) ಅವರನ್ನು ಜೊತೆಗೆ ಕುಳ್ಳಿರಿಸಿಕೊಂಡು ಪರಿಚಯದ ಗಂಗಾಧರ್ ಅವರ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ನೇತ್ರಾವತಿ ಅವರ ಪತಿ ನಾಲ್ಕು ತಿಂಗಳ ಹಿಂದೆ ತೀರಿಕೊಂಡಿದ್ದರು. ಪರಿಚಯದಲ್ಲಿ ಗಂಗಾಧರ್ ಅವರ ಸ್ಕೂಟರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಗಂಗಾಧರ್ ಜಪ್ಪಿನಮೊಗರು ನಿವಾಸಿಯಾಗಿದ್ದು ಪತ್ನಿ ಮತ್ತು ಮಗನನ್ನು ಹೊಂದಿದ್ದರು.
Mangalore Accident at Kallapu in Konaje two killed on spot including woman after truck rams scooter.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm