ಬ್ರೇಕಿಂಗ್ ನ್ಯೂಸ್
08-11-22 03:25 pm Mangalore Correspondent ಕರಾವಳಿ
ಮಂಗಳೂರು, ನ.8: ಬಿಗ್ ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ಶೆಟ್ಟಿ ಶೋ ನಡುವೆ ನಾನು ಕೂಡ ಕನ್ನಡಿಗ, ಗಡಿನಾಡಿನ ಕನ್ನಡಿಗ ಎಂದು ಹೇಳಿಕೊಂಡಿರುವುದಕ್ಕೆ ಕೆಲವು ಕಿಡಿಗೇಡಿಗಳು ಜಾಲತಾಣದಲ್ಲಿ ಅಣಕಿಸಿ ಪೋಸ್ಟ್ ಹಾಕಿದ್ದಾರೆ. ತುಳುವ ಎಂದು ಹೇಳಿಕೊಂಡಿಲ್ಲ. ಈಗ ಕನ್ನಡಕ್ಕೆ ಹೋಗಿ ಕನ್ನಡಿಗ ಎಂದು ಹೇಳಿಕೊಂಡು ಸೊಕ್ಕು ತೋರಿಸಿದ್ದಾರೆ. ಇವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದೆಲ್ಲ ತುಳು ಭಾಷಿಗ ಕಿಡಿಗೇಡಿಗಳು ಪೋಸ್ಟ್ ಹಾಕಿದ್ದಾರೆ.
ಈ ಬಗ್ಗೆ ರೂಪೇಶ್ ಶೆಟ್ಟಿ ಸಂಬಂಧಿಕರು ಮತ್ತು ಅಭಿಮಾನಿಗಳು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಅದರಂತೆ, ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಕೋರ್ಟ್ ಅನುಮತಿ ಪಡೆದು ಎಫ್ಐಆರ್ ದಾಖಲು ಮಾಡುವುದಾಗಿ ಕಮಿಷನರ್ ತಿಳಿಸಿದ್ದಾರೆ.
ರೂಪೇಶ್ ಶೆಟ್ಟಿ ತಾನೊಬ್ಬ ಕಾಸರಗೋಡು ಮೂಲದ ಗಡಿನಾಡಿನ ಕನ್ನಡಿಗ ಎನ್ನುವುದನ್ನು ಬಿಗ್ ಬಾಸ್ ಶೋದಲ್ಲಿ ಹೇಳಿಕೊಂಡಿದ್ದರು. ಅಲ್ಲದೆ, ಕಾಸರಗೋಡಿನಲ್ಲಿಯೂ ಕನ್ನಡ ಕಲಿಸುತ್ತಾರೆ. ನಾನು ಅಲ್ಲಿ ಕನ್ನಡ ಕಲಿತುಕೊಂಡೇ ಇಂಡಸ್ಟ್ರಿ ಬಂದಿದ್ದೇನೆ. ಅಲ್ಲಿನ ಶಿಕ್ಷಕರು ಕನ್ನಡವನ್ನು ಕಲಿಸಿದ್ದರಿಂದ ಭಾಷೆಯಾಗಿ ಕಲಿತಿದ್ದೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದರು. ಸಹಜ ಉತ್ತರವನ್ನೇ ನೀಡಿದ್ದರೂ, ತುಳು ಸಿನಿಮಾದಲ್ಲಿ ನಟಿಸುತ್ತಿದ್ದ ಕಾರಣಕ್ಕೆ ರೂಪೇಶ್ ಶೆಟ್ಟಿ ಬಗ್ಗೆ ಕೆಲವು ತುಳು ಭಾಷಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಕನ್ನಡಿಗ ಎನ್ನುತ್ತಿದ್ದಾರೆ. ಮೊದಲು ತಾನೊಬ್ಬ ತುಳುವ ಅನ್ನಬೇಕಿತ್ತು. ತುಳುನಾಡಿನಲ್ಲಿ ಬೆಳೆದು ಸಿನಿಮಾ ಮಾಡಿ, ಈಗ ಕನ್ನಡಿಗ ಎನ್ನುತ್ತಿರುವುದೇಕೆ. ಇವರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಅವಕಾಶ ಸಿಕ್ಕಿರಲಿಲ್ಲ ಎಂದು ವಿರೋಧಿಸುವ ಪೋಸ್ಟ್ ಗಳನ್ನು ಜಾಲತಾಣದಲ್ಲಿ ಹಾಕಿದ್ದಲ್ಲದೆ, ಇವರ ಸಿನಿಮಾಗಳನ್ನು ಬಹಿಷ್ಕರಿಸುವ ಬಗ್ಗೆಯೂ ಕೆಲವರು ಪೋಸ್ಟ್ ಹಾಕಿದ್ದರು.
ಈ ರೀತಿಯ ಕಿಡಿಗೇಡಿ ವರ್ತನೆಯ ಬಗ್ಗೆ ಜಾಲತಾಣದಲ್ಲಿ ಪರ- ವಿರೋಧ ಅಭಿಪ್ರಾಯಗಳು ಬಂದಿವೆ. ಬಹಳಷ್ಟು ಮಂದಿ ರೂಪೇಶ್ ಶೆಟ್ಟಿ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಹಾಗೆ ಹೇಳಿದ್ದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುವುದಾಗಿ ಹೇಳಿದ್ದಾರೆ.
The family members of Big Boss contestant Roopesh Shetty have filed a complaint with the city police commissioner of threat on social media to Roopesh.
In the complaint, the family members of Roopesh accused that some people have threatened citing the statements of Roopesh on Big Boss show. They have used abusive language against Roopesh.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm