ಬ್ರೇಕಿಂಗ್ ನ್ಯೂಸ್
09-11-22 08:54 pm Mangalore Correspondent ಕರಾವಳಿ
ಮಂಗಳೂರು, ನ.9: ಮಂಗಳೂರು ನಗರದಲ್ಲಿ ಕೆಲವು ಪ್ರದೇಶಗಳು ಕತ್ತಲಾಗುತ್ತಿದ್ದಂತೆ ರೆಡ್ ಲೈಟ್ ಏರಿಯಾವೋ ಅನ್ನುವಂತೆ ಬದಲಾಗುತ್ತದೆ. ಅರೆಬರೆ ಬಟ್ಟೆ ತೊಟ್ಟು ತಮ್ಮ ಮೈಮಾಟ ತೋರಿಸುವ ಮಂಗಳಮುಖಿಯರು ಲಲ್ಲೆಗರೆದು ಗಿರಾಕಿಗಳನ್ನು ತಮ್ಮ ಬುಟ್ಟಿಗೆ ಹಾಕ್ಕೊಳ್ತಿದ್ದಾರೆ. ಜಪ್ಪಿನಮೊಗರಿನ ಸಂಚಾರಿ ಠಾಣೆಯ ಎದುರಲ್ಲೇ ಮಂಗಳಮುಖಿಯರ ಕಾಟ ಹೆಚ್ಚಾಗಿದ್ದು ಸಾರ್ವಜನಿಕರು ರಸ್ತೆ ಬದಿ ಅಡ್ಡಹಾಕುವ ಇವರಿಂದ ಸುಲಿಗೆಗೆ ಒಳಗಾಗುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಕದ್ರಿ ಪಾರ್ಕ್, ಎಜೆ ಆಸ್ಪತ್ರೆಯ ಬಳಿಯಲ್ಲೂ ಇದೇ ರೀತಿ ಮಂಗಳಮುಖಿಯರು ಕಾಟ ಕೊಡುತ್ತಾರೆ. ಇತ್ತೀಚಿನ ಕೆಲವು ದಿನಗಳಿಂದ ಜಪ್ಪಿನಮೊಗರಿನಲ್ಲಿ ಹೆದ್ದಾರಿ ಬದಿಯಲ್ಲೇ ಕೆಲವರು ಅರೆಬರೆ ಬಟ್ಟೆ ತೊಟ್ಟು ಗಿರಾಕಿಗಳತ್ತ ಬಲೆ ಬೀಸುತ್ತಿದ್ದಾರೆ. ಇವರ ವೇಶ್ಯಾವಾಟಿಕೆ ದಂಧೆಗೆ ಲಾರಿ, ಟ್ರಕ್ ಚಾಲಕರು, ಕ್ಲೀನರ್ ಗಳೇ ಟಾರ್ಗೆಟ್. ಕದ್ರಿ, ಕೆಪಿಟಿ ಆಸುಪಾಸು ರಾತ್ರಿ ನಿಲ್ಲಿಸುವ ಟ್ರಕ್ ಚಾಲಕರನ್ನು ಮಂಗಳಮುಖಿಯರು ತಮ್ಮ ಬಲೆಗೆ ಬೀಳಿಸಿ ಸುಲಿಯುತ್ತಿದ್ದಾರೆ. ಜಪ್ಪಿನಮೊಗರಿನಲ್ಲಿ ಈಗ ಸ್ಥಳೀಯ ಕೆಲವರು ಕೂಡ ಖಾಯಂ ಗಿರಾಕಿಗಳಾಗಿದ್ದು, ಇದಕ್ಕಾಗಿ ಕತ್ತಲಾಗುತ್ತಿದ್ದಂತೆ ಅರ್ಧ ಲಂಗ ತೊಟ್ಟು ವಯ್ಯಾರದಲ್ಲಿ ನಿಲ್ಲುವ ಲಲನೆಯರಂತೆ ಇವರು ಗಾಳ ಹಾಕುತ್ತಿದ್ದಾರೆ.


ಹೆದ್ದಾರಿ ಬದಿಯಲ್ಲಿ ಸಣ್ಣ ಮಿಡಿ, ಸ್ಕರ್ಟ್ ಹಾಕಿ ನಿಲ್ಲುವ ಇವರು ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸರತಿ ನಿಲ್ಲುವ ವೇಶ್ಯೆಯರಂತೆ ತೋರುತ್ತಾರೆ. ಹೆದ್ದಾರಿ ಬದಿಯಲ್ಲಿ ಓಪನ್ನಾಗಿ ಇವರು ದಂಧೆಗಿಳಿಯುತ್ತಿದ್ದರೂ, ಎದುರಲ್ಲೇ ಇರುವ ಸಂಚಾರಿ ಠಾಣೆ ಪೊಲೀಸರ ಕಣ್ಣಿಗೆ ಬಿದ್ದಿಲ್ಲವೋ, ಬೀಳದಂತೆ ನಟಿಸುತ್ತಾರೋ ಗೊತ್ತಿಲ್ಲ. ಸ್ಥಳೀಯ ಕೆಲವರು ಇವರ ವೇಷ ತಿಳಿಯದೆ, ಹತ್ತಿರ ಹೋಗಿ ತಮ್ಮ ಸೊತ್ತುಗಳನ್ನೆಲ್ಲ ಕಳಕೊಂಡಿದ್ದಾರೆ ಎನ್ನುವ ವಿಚಾರಗಳೂ ಹೊರಬೀಳುತ್ತಿವೆ. ಹಗಲಿನಲ್ಲಿ ಟ್ರಾಫಿಕ್ ಸಿಗ್ನಲ್, ಟೋಲ್ ಗೇಟ್ ಆಸುಪಾಸು ಕಾಣಿಸಿಕೊಳ್ಳುವ ಮಂಗಳಮುಖಿಯರು ವಾಹನ ಸವಾರರಿಂದ ಹಣ ಕೀಳುತ್ತಾರೆ. ಹಣ ಕೊಡದೇ ಇದ್ದರೆ, ಶಾಪ ಹಾಕುವ ಮಂದಿಯೂ ಇದ್ದಾರೆ.


ರಾತ್ರಿಯಾಗುತ್ತಿದ್ದಂತೆ ಇವರ ವೇಷ ಬದಲಾಗುತ್ತಿದ್ದು, ವೇಶ್ಯಾವಾಟಿಕೆ ದಂಧೆಗಿಳಿಯುವುದು ಜನಸಾಮಾನ್ಯರು ಭಯಪಟ್ಟು ಸಂಚರಿಸುವ ಸ್ಥಿತಿಯಾಗಿದೆ. ಈ ರೀತಿಯ ಸುಲಿಗೆಕೋರರಿಗೆ ಕಡಿವಾಣ ಹಾಕಲು ಹೆದ್ದಾರಿ ಕಾಯುವ ಪೊಲೀಸರಿಗೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.
Transgenders found doing prostitution openly near Jeppinamogaru in Mangalore without fear right opposite to Traffic police station.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm