ಬ್ರೇಕಿಂಗ್ ನ್ಯೂಸ್
15-11-22 09:51 pm Mangalore Correspondent ಕರಾವಳಿ
ಮಂಗಳೂರು, ನ.15 : ಸುರತ್ಕಲ್ ಟೋಲ್ ಗೇಟ್ ರದ್ದುಗೊಂಡ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದರೂ ಸುರತ್ಕಲ್ ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಹೋರಾಟಗಾರರು ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದಿದ್ದು ಧರಣಿ ಮುಂದುವರಿಸಿದ್ದಾರೆ. ಮಂಗಳವಾರ 19ನೇ ದಿನವೂ ಧರಣಿ ನಡೆದಿದ್ದು ಹಗಲು ರಾತ್ರಿ ಧರಣಿಗೆ ಮತ್ತಷ್ಟು ಜನರು ಬೆಂಬಲ ನೀಡಿದ್ದಾರೆ.
ಸಭೆಯಲ್ಲಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ "ಏಳು ವರ್ಷಗಳ ಕಾಲ ನಿಯಮ ಬಾಹಿರ ಟೋಲ್ ಕೇಂದ್ರದಲ್ಲಿ ನೂರಾರು ಕೋಟಿ ರೂಪಾಯಿ ಸಂಗ್ರಹಕ್ಕೆ ಅವಕಾಶ ಒದಗಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಈಗ ತರಾತುರಿಯಲ್ಲಿ ಪ್ರಧಾನಿ, ಹೆದ್ದಾರಿ ಸಚಿವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಟೋಲ್ ಗೇಟ್ ಮುಚ್ಚಿದರ ಹಿರಿಮೆ ತನ್ನದಾಗಿಸಿಕೊಳ್ಳುವ ಆಸಕ್ತಿ ಅಕ್ರಮ ಟೋಲ್ ಗೇಟ್ ಮುಚ್ಚುವುದರಲ್ಲಿ ಬಿಜೆಪಿ ಸಂಸದ, ಶಾಸಕರುಗಳಿಗೆ ಇಲ್ಲ. ಅಧಿಸೂಚನೆ ಹೊರಟು ಮೂರು ದಿನ ಕಳೆದರೂ ಟೋಲ್ ಸಂಗ್ರಹ ಅಬಾಧಿತವಾಗಿ ನಡೆದಿದೆ. ಇದು ಬಿಜೆಪಿ ಮುಖಂಡತ್ವದ ನೈಜ ಮುಖ ಎಂದು ಎಂದು ಆರೋಪಿಸಿದರು. ಟೋಲ್ ಕೇಂದ್ರ ಮುಚ್ಚದೆ ಹಗಲು ರಾತ್ರಿ ಧರಣಿ ಕೊನೆಗೊಳಿಸುವ ಪ್ರಶ್ನೆಯೇ ಇಲ್ಲ. ಅಧಿಸೂಚನೆ ಆಧಾರದಲ್ಲಿ ಜಿಲ್ಲಾಡಳಿತ ತಕ್ಷಣ ಟೋಲ್ ಸಂಗ್ರಹ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ವಿಲೀನದ ಹೆಸರಿನಲ್ಲಿ ಹೆಜಮಾಡಿಯ ನವಯುಗ್ ಟೋಲ್ ಪ್ಲಾಜಾದಲ್ಲಿ ಟೋಲ್ ದರವನ್ನು ವಿಪರೀತ ಹೆಚ್ಚಿಸಿ ಸುಲಿಗೆಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಅವಿಭಜಿತ ಜಿಲ್ಲೆಯಲ್ಲಿ ಜನ ಹೋರಾಟ ಭುಗಿಲೇಳಲಿದೆ. ಅದಕ್ಕೆ ಬಿಜೆಪಿ ಶಾಸಕರು ಅವಕಾಶ ಮಾಡಿಕೊಡುವುದು ಬೇಡ ಎಂದು ಎಚ್ಚರಿಸಿದರು. ಧರಣಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಫಾದರ್ ವಿಲಿಯಂ ಮಾರ್ಟಿಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಾಹುಲ್ ಹಮೀದ್, ರಾಲ್ಪಿ ಡಿಸೋಜ, ಮನಪಾ ಸದಸ್ಯ ಅಬ್ದುಲ್ ರವೂಫ್, ನ್ಯಾಯವಾದಿ ಯಶವಂತ ಮರೋಳಿ, ಕನಕದಾಸ ಕೂಳೂರು, ಹಮೀದ್ ಹರೇಕಳ, ರಫೀಕ್ ಹರೇಕಳ, ದಲಿತ ನಾಯಕರಾದ ರಘು ಎಕ್ಕಾರು, ಶೇಖರ ಹೆಜಮಾಡಿ, ಸಹಬಾಳ್ವೆ ಉಡುಪಿಯ ಜ್ಯೋತಿ ಮೆನನ್, ತಸ್ರೀನ್ ಅರ಼ಾ, ಶೇಖಬ್ಬ ಕೋಟೆ, ಪ್ರತಿಭಾ ಕುಳಾಯಿ, ಹೋರಾಟ ಸಮಿತಿಯ ಪ್ರಮುಖರಾದ ಬಿ ಕೆ ಇಮ್ತಿಯಾಜ್, ರಾಘವೇಂದ್ರ ರಾವ್, ರಮೇಶ್ ಟಿ ಎನ್, ಶ್ರೀನಾಥ್ ಕುಲಾಲ್, ಮುಹಮ್ಮದ್ ಕುಂಜತ್ತಬೈಲ್, ಮಂಜುಳಾ ನಾಯಕ್, ಸಂತೋಷ್ ಬಜಾಲ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
Mangalore Protest against Hejamady toll to continue if toll of surathkal toll merged warns protesters.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
14-05-26 12:36 pm
HK News Staffer
ಜ್ಯೋತಿಷಿಗೆ ಕೂಡದ ಜಾತಕ ; ಟೀಕೆಗಳ ಸುಳಿಯಲ್ಲಿ ವಿಜಯ್...
13-05-26 06:42 pm
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
14-05-26 01:41 pm
HK News Staffer
ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ...
14-05-26 10:49 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm