ಬ್ರೇಕಿಂಗ್ ನ್ಯೂಸ್
16-11-22 06:16 pm Mangalore Correspondent ಕರಾವಳಿ
ಮಂಗಳೂರು, ನ.16: ನಗರದ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಆಟೋ ಎಕ್ಸ್ ಪೋ ಹೆಸರಲ್ಲಿ ಐಷಾರಾಮಿ ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಮಂಗಳೂರಿನ ಪ್ರಸಾದ್ ಅಸೋಸಿಯೇಟ್ಸ್ ಗೆ ಸೇರಿದ ಐಷಾರಾಮಿ ಕಾರುಗಳು ಭಾರೀ ಜನಾಕರ್ಷಣೆ ಗಿಟ್ಟಿಸಿದವು.
ಹೈ ಎಂಡ್ ಮತ್ತು ಸ್ಪೋರ್ಟ್ಸ್ ಮಾಡೆಲ್ ಕಾರುಗಳು ಪ್ರದರ್ಶನದಲ್ಲಿ ಸೇರಿದ್ದವರ ಆಕರ್ಷಣೆಗೆ ಪಾತ್ರವಾಯಿತು. ಲ್ಯಾಂಬೋರ್ಗಿನಿ ಮತ್ತು ಆಡಿ ಆರ್-8 ಮಾದರಿಯ ಸ್ಪೋರ್ಟ್ಸ್ ಕಾರುಗಳನ್ನು ಪ್ರಸಾದ್ ಅಸೋಸಿಯೇಟ್ಸ್ ವತಿಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ ಸಂಘಟಕರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದು, ಭಾರೀ ಸಂಖ್ಯೆಯಲ್ಲಿ ಸೇರಿದ ಜನರು ಐಷಾರಾಮಿ ಕಾರುಗಳನ್ನು ನೋಡಲು ಮುಗಿಬಿದ್ದರು. ಇಂಜಿನಿಯರಿಂಗ್ ಕಾಲೇಜಿನ ಯುವಕ- ಯುವತಿಯರು ಸೇರಿದಂತೆ ಇತರೇ ಸಾರ್ವಜನಿಕರೆಲ್ಲ ಮೊಬೈಲ್ ಹಿಡಿದು ಕಾರಿನ ಫೋಟೋ ಕ್ಲಿಕ್ಕಿಸಿದರು.
ಆಡಿ ಆರ್- 8 ಕಾರು ಸ್ಪೋರ್ಟ್ಸ್ ಮಾಡೆಲ್ ನದ್ದಾಗಿದ್ದು, ಭಾರತದಲ್ಲಿ ಟಾಪ್ ಕಾರುಗಳಲ್ಲಿ ಒಂದಾಗಿದೆ. ವಿಶೇಷ ರೀತಿಯ ಸೌಂಡ್ ನಿಂದಾಗಿ ಸ್ಪೋರ್ಟ್ಸ್ ಮಾಡೆಲ್ ಕಾರು ಸಹ್ಯಾದ್ರಿ ಆವರಣದಲ್ಲಿ ಸಂಚರಿಸುತ್ತಿದ್ದಾಗಲೇ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದರು. ಲ್ಯಾಂಬೋರ್ಗಿನಿ ಕೂಡ ಐಷಾರಾಮಿ ಸ್ಪೋರ್ಟ್ಸ್ ಮಾಡೆಲ್ ಕಾರು ಆಗಿದ್ದು, ಹೈಫೈ ಜನರು ಇದನ್ನು ಖರೀದಿಸುತ್ತಾರೆ. ಇಡೀ ದೇಶದಲ್ಲಿಯೇ ಮಂಗಳೂರು ನಗರದಲ್ಲಿ ಟಾಪ್ ಎಂಡ್ ಕಾರುಗಳ ಕ್ರೇಜ್ ಹೆಚ್ಚಿದೆ. ಪ್ರಸಾದ್ ಅಸೋಸಿಯೇಟ್ಸ್ ದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ ಹೀಗೆ ಮೆಟ್ರೋ ಪಾಲಿಟನ್ ನಗರಗಳಲ್ಲಿಯೂ ಹೈ ಎಂಡ್ ಕಾರುಗಳನ್ನು ಮಾರಾಟ ಮಾಡುತ್ತದೆ. ಇದೇ ಕಾರಣಕ್ಕೆ ಪ್ರಸಾದ್ ಅಸೋಸಿಯೇಟ್ಸ್ ಇತರೇ ಕಂಪನಿಗಳ ಜೊತೆ ಕಾರಿನ ಶೋನಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿತ್ತು.
ಕಾರು ಶೋದಲ್ಲಿ ಮಂಗಳೂರು, ಉಡುಪಿ ಜಿಲ್ಲೆಯ ವಿವಿಧ ಕಡೆಯ ಜನರು ಭಾಗವಹಿಸಿದ್ದರು. ಹೆಚ್ಚಾಗಿ ಯುವ ಜನರೇ ಪಾಲ್ಗೊಂಡಿದ್ದರು. ಆದರೆ ನೋಡಲು ಆಕರ್ಷಣೆ ಗಿಟ್ಟಿಸುವ ಐಷಾರಾಮಿ ಕಾರುಗಳೇ ಎಲ್ಲರ ಆಕರ್ಷಣೆಯಾಗಿದ್ದವು. ಜನರ ಕ್ರೇಜ್ ನೋಡಿದ ಪ್ರಸಾದ್ ಅಸೋಸಿಯೇಟ್ಸ್ ಮಾಲೀಕ ಪ್ರಸಾದ್ ಶೆಟ್ಟಿ ಭಾರೀ ಸಂತಸಗೊಂಡಿದ್ದಾರೆ. ಯಾವುದೇ ರೀತಿಯ ಹೈಫೈ ಕಾರುಗಳ ಖರೀದಿಗೆ ಪ್ರಸಾದ್ ಅಸೋಸಿಯೇಟ್ಸ್(8792133333) ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ.
Mangalore Prasad Associates organises Auto Expo in partnership with Shyadri college, thousands flock to see luxury cars owned by Mr Prasad Shetty. For premium Luxury car booking call Prasad Associates or follow their social media.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm