ಬ್ರೇಕಿಂಗ್ ನ್ಯೂಸ್
18-11-22 05:47 pm Mangalore Correspondent ಕರಾವಳಿ
ಉಳ್ಳಾಲ, ನ.18 : ವಿಪರೀತ ಕುಡಿತದ ಚಟ ಮತ್ತು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಯುವ ಭಾಗವತನೊಬ್ಬ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಇರಾ ಗ್ರಾಮದ ಮೂಳೂರು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಯುವ ಭಾಗವತ ಕೀರ್ತನ್ ಶೆಟ್ಟಿ ವಗೆನಾಡು (39) ಆತ್ಮಹತ್ಯೆಗೈದ ದುರ್ದೈವಿ. ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಶಿಷ್ಯರಾಗಿದ್ದ ಕೀರ್ತನ್ ಶೆಟ್ಟಿ ಭಾಗವತರಾಗಿ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಇತ್ತೀಚಿನ ದಿನಗಳಲ್ಲಿ ಕುಡಿತದ ಚಟವನ್ನ ಮೈಗಂಟಿಸಿಕೊಂಡಿದ್ದರು. ವಿವಾಹಿತರಾಗಿದ್ದ ಕೀರ್ತನ್ ಶೆಟ್ಟಿಯವರಿಗೆ ಪತ್ನಿ, ಅವಳಿ ಗಂಡು ಮಕ್ಕಳಿದ್ದು ಕಳೆದ ಕೆಲವು ವರ್ಷಗಳಿಂದ ಮಾನಸಿಕವಾಗಿ ಖಿನ್ನತೆ ಹೊಂದಿದ್ದರು ಎನ್ನಲಾಗಿದೆ. ಬಪ್ಪನಾಡು ಸೇರಿದಂತೆ ಕೆಲವೊಂದು ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕೀರ್ತನ್ ಶೆಟ್ಟಿ ಮೂಲತಃ ವಗೆನಾಡಿನವರಾಗಿದ್ದು ನಾಲ್ಕು ವರ್ಷಗಳ ಹಿಂದೆ ಇರಾ ಕುಂಡಾವು ಬಳಿ ಸ್ಥಳ ಖರೀದಿಸಿ ಮನೆ ಕಟ್ಟಿ ಪತ್ನಿ ಮಕ್ಕಳ ಜತೆ ಅಲ್ಲಿಯೇ ವಾಸಿಸುತ್ತಿದ್ದರು.
ಆದರೆ ಕೌಟುಂಬಿಕ ಸಮಸ್ಯೆಯಿಂದ ಕೀರ್ತನ್ ಶೆಟ್ಟಿ ಮೂಳೂರಿನ ಬಾಡಿಗೆ ಮನೆಯೊಂದರಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ಕುಡಿತದ ಚಟದಿಂದಾಗಿ ಇತ್ತೀಚೆಗೆ ಪ್ರಸಿದ್ಧ ಮೇಳಗಳಲ್ಲಿ ಅವಕಾಶ ಸಿಗದೇ ಇದ್ದುದರಿಂದ ಮಕ್ಕಳ ಮೇಳಗಳಲ್ಲಿ ಸೇವೆ ನೀಡುತ್ತಿದ್ದರು. ಈ ಬಾರಿಯ ತಿರುಗಾಟಕ್ಕೆ ಮೇಳಗಳು ಸಿದ್ಧತೆ ನಡೆಸಿದ್ದು ಪ್ರಸಿದ್ಧ ಮೇಳಗಳಲ್ಲಿ ಅವಕಾಶ ಸಿಗದೇ ಇದ್ದರಿಂದ ನೊಂದಿದ್ದರು ಎನ್ನಲಾಗಿದೆ. ಕಳೆದ ವರ್ಷ ನೂತನ ಮೇಳವೊಂದಕ್ಕೆ ಆಯ್ಕೆಯಾಗಿದ್ದರೂ ಕೇವಲ ಎರಡು ಬಾರಿ ಮಾತ್ರ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಮೇಳದಲ್ಲಿ ಭಾಗವತಿಕೆ ನಡೆಸುತ್ತಿದ್ದಾಗಲೂ ಕಂಬ್ಳಪದವು ಸಮೀಪ ರಬ್ಬರ್ ಟ್ಯಾಪಿಂಗ್ ಗಾಗಿ ತಡರಾತ್ರಿ ಮೂರು ಗಂಟೆಯಿಂದ ಆರು ಗಂಟೆ ತನಕ ದುಡಿಯುತ್ತಿದ್ದರು.
ಮೇಳಗಳಲ್ಲಿ ಮೊದಲ ಭಾಗವತಿಕೆಗೆ ಅವಕಾಶ ಕೇಳುತ್ತಿದ್ದು ಅವಕಾಶ ಸಿಕ್ಕರೂ ಕುಡಿತದ ಚಟದಿಂದಾಗಿ ಮೇಳದ ಸಂಚಾಲಕರು ಮತ್ತೆ ತಮ್ಮ ಮೇಳಕ್ಕೆ ಸೇರಿಸುತ್ತಿರಲಿಲ್ಲ ಎಂಬ ಆರೋಪ ಇದೆ. ಹಾಗಿದ್ದರೂ ಬಪ್ಪನಾಡು ಮೇಳದ ಎವರ್ ಗ್ರೀನ್ ಪ್ರಸಂಗ "ಬನತ ಬಂಗಾರ್" ಪ್ರದರ್ಶನ ನೀಡುತ್ತಿದ್ದ ಸಂದರ್ಭ ಗಿರೀಶ್ ರೈ ಕಕ್ಕೆಪದವಿಗೆ ಅಪಘಾತವಾದಾಗ ಆ ದಿನಗಳಲ್ಲಿ ಆ ಸ್ಥಾನವನ್ನು ಕೀರ್ತನ್ ಶೆಟ್ಟಿ ತುಂಬಿದ್ದರು. ಸುಮಧುರ ಕಂಠ ಸಿರಿಯಿಂದ ಯಕ್ಷಗಾನ ಕಲಾಪ್ರೇಕ್ಷಕರ ಮನಸ್ಸನ್ನೂ ಗೆದ್ದಿದ್ದರು. ಯುವ ಭಾಗವತನ ದುರಂತ ಸಾವು ಯಕ್ಷಗಾನ ಕಲಾಪ್ರೇಕ್ಷಕರಿಗೆ ನಷ್ಟ ಉಂಟುಮಾಡಿದೆ. ಕೊಣಾಜೆ ಠಾಣೆಯಲ್ಲಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಾಗಿದೆ.
Ullal Financial crises 41 year old Yuva Bagawata Keerthan Shetty commits suicide in Mangalore. He was mentally disturbed due to family issues.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm