ಬ್ರೇಕಿಂಗ್ ನ್ಯೂಸ್
            
                        21-11-22 09:39 pm Mangalore Correspondent ಕರಾವಳಿ
            ಮಂಗಳೂರು, ನ.21 : 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಗೆ ಒಳಗಾಗಿರುವ ಭಾರತೀಯ ಜನತಾ ಪಕ್ಷದ ಹತಾಶೆಯ ನಡೆಯೇ ಈ ಬಾಂಬ್ ಬ್ಲಾಸ್ಟ್ ಪ್ರಕರಣ. ಬಿಜೆಪಿ ಸರಕಾರದ ಹಿಂದು ವಿರೋಧಿ ನಡೆ ಮತ್ತು ಎಸ್ಡಿಪಿಐ ಜೊತೆಗಿನ ಅಕ್ರಮ ಸಂಬಂಧ ಇದರ ಫಲವೇ ಬಾಂಬ್ ಸ್ಫೋಟ. ಒಟ್ಟು ರಾಜ್ಯಾಂಗ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದಿಂದ ಇಂಥ ಘಟನೆ ಆಗಿದೆ ಎಂದು ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಟೀಕಿಸಿದ್ದಾರೆ.
ಬಾಂಬ್ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆತಂಕವಾದ ಅಳಿಸಿ, ದೇಶ ಉಳಿಸಿ ಎಂಬ ಹಿಂದೂ ಮಹಾಸಭಾ ಘೋಷ ವಾಕ್ಯವನ್ನು ಷಡ್ಯಂತ್ರದಿಂದ ತನ್ನದಾಗಿಸಿಕೊಂಡಂತಹ ಭಾರತೀಯ ಜನತಾ ಪಕ್ಷವು ಕನಿಷ್ಠ ಪಕ್ಷ, ಆ ವಾಕ್ಯದ ಮೌಲ್ಯವನ್ನು ತಿಳಿದುಕೊಂಡಿದ್ದರೆ, ಇವತ್ತು ಈ ಘಟನೆ ಸಂಭವಿಸುತ್ತಿರಲಿಲ್ಲ. ಆಡಳಿತದಲ್ಲಿರುವ ಸರಕಾರದ ವೈಫಲ್ಯವೇ ಈ ಘಟನೆಗೆ ಕಾರಣ. ಎಸ್ಡಿಪಿಐ ಜೊತೆಗೆ ಅನೈತಿಕ ಮೈತ್ರಿ ರಾಜ್ಯಾದ್ಯಂತ ಭಯೋತ್ಪಾದಕರ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಸರಕಾರ ಇನ್ನಾದರೂ ಚುನಾವಣೆ ಗಿಮಿಕ್ ಅನ್ನು ಬಿಟ್ಟುಬಿಡಲಿ. ರಾಜ್ಯದ ಜನರ ಜೀವದ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಲಿ. ಬಾಂಬ್ ಬ್ಲಾಸ್ಟ್ ನಂತಹ ವಿಧ್ವಂಸಕ ಕೃತ್ಯವನ್ನು ಎಸಗಿದವರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ, ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಒಳಪಡಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರ ಆಗ್ರಹಿಸಿದ್ದಾರೆ.
            
            
            Autorickshaw blast in Mangalore, BJP government failure reason slams Hindu Maha Sabha Pavitran.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm