ಬ್ರೇಕಿಂಗ್ ನ್ಯೂಸ್
23-11-22 03:08 pm Mangalore Correspondent ಕರಾವಳಿ
ಮಂಗಳೂರು, ನ.23: ಮತಾಂಧ ಶಕ್ತಿಗಳು ಸೇರಿಕೊಂಡು ದೇಶದ ಆಂತರಿಕ ಭದ್ರತೆ, ಸಾಮರಸ್ಯ ಕದಡಲು ಇಂಥ ಕೆಲಸಕ್ಕೆ ಕೈಹಾಕಿವೆ. ಆದರೆ ಭಯೋತ್ಪಾದಕ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಶಕ್ತ ಇದೆ. ಉಗ್ರರನ್ನು ಬೆಳೆಯುವುದಕ್ಕೆ ಅವಕಾಶ ಕೊಡುವುದಿಲ್ಲ. ಈಗಾಗ್ಲೇ ಕೇಂದ್ರದ ತನಿಖಾ ತಂಡಗಳು ಮತ್ತು ರಾಜ್ಯ ಪೊಲೀಸ್ ಇಲಾಖೆ ಈ ಬಗ್ಗೆ ಕೆಲಸ ಮಾಡುತ್ತಿವೆ. ಉಗ್ರನಿಗೆ ಯಾರೆಲ್ಲ ಬೆಂಬಲ ನೀಡಿದ್ದಾರೆ, ಆತನ ಬ್ಯಾಕ್ ಗ್ರೌಂಡ್ ಏನು ಅನ್ನುವುದನ್ನು ಪತ್ತೆ ಮಾಡಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಡಿಜಿಪಿ ಪ್ರವೀಣ್ ಸೂದ್ ಜೊತೆಗೆ ಮಂಗಳೂರಿಗೆ ಭೇಟಿಯಿತ್ತ ಗೃಹ ಸಚಿವರು, ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಆನಂತರ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ. ಆದರೆ ಈತನ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಆತ ಗುಣಮುಖ ಆಗಬೇಕಾಗಿದೆ. ಎಂಟು ತಜ್ಞ ವೈದ್ಯರ ತಂಡ ಆತನಿಗೆ ಚಿಕಿತ್ಸೆ ನೀಡುತ್ತಿದೆ. ಇದರ ಜೊತೆ ಆಟೋ ಚಾಲಕನಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇದರ ಜೊತೆಗೆ ಸರಕಾರದಿಂದ ಆಟೋ ಚಾಲಕನಿಗೆ ಪರಿಹಾರ ಕೊಡಿಸುವಲ್ಲಿ ಮುಖ್ಯಮಂತ್ರಿ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದರು.
ತೀರ್ಥಹಳ್ಳಿಯಿಂದಲೇ ಯಾಕೆ ಭಯೋತ್ಪಾದಕರು ಹುಟ್ಟಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೀರ್ಥಹಳ್ಳಿ ಸುಸಂಸ್ಕೃತರ ಊರು. ಒಳ್ಳೆಯ ಸಾಹಿತಿಗಳು, ಮಹಾನುಭಾವರು ಬಂದಿದ್ದಾರೆ. ಈಗ ಅಂಥ ಜಾಗದಲ್ಲಿ ಮತಾಂಧರು ಸೇರಿಕೊಂಡಿದ್ದಾರೆ. ಕರಾವಳಿಗೆ ಲಿಂಕ್ ಇರುವುದರಿಂದ ಇಂಥದ್ದೆಲ್ಲ ಬೆಳೆಯುತ್ತಿದೆ ಎಂದರು. ಶಿವಮೊಗ್ಗದಲ್ಲಿ ದೇಶದ್ರೋಹ ಪ್ರಕರಣ ಆಗಿದ್ದರೂ, ಆತನ ಬಗ್ಗೆ ನಿಗಾ ಇಟ್ಟಿಲ್ಲ ಯಾಕೆ, ಗುಪ್ತಚರ ವೈಫಲ್ಯ ಅಲ್ಲವೇ ಎಂಬ ಪ್ರಶ್ನೆಗೆ, ಶಾರೀಕ್ ಹಿಂದು ಹೆಸರಿನಲ್ಲಿ ಓಡಾಡುತ್ತಿದ್ದ. ಪದೇ ಪದೇ ಜಾಗ ಬದಲಾವಣೆ ಮಾಡುತ್ತಿದ್ದ. ಹಿಂದು ಐಡಿ ಕಾರ್ಡ್ ಇಟ್ಟುಕೊಂಡಿದ್ದರಿಂದ ಪತ್ತೆ ಸಾಧ್ಯವಾಗಿಲ್ಲ. ನಮ್ಮ ತನಿಖಾ ಏಜನ್ಸಿಗಳು ನಿಗಾ ಇಟ್ಟಿದ್ದವು. ತೀರ್ಥಹಳ್ಳಿಯ ಅಂಗಡಿಯಲ್ಲಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದು ಸವಾಲಾಗಿತ್ತು ಎಂದು ಅಸಹಾಯಕತೆಯನ್ನು ಹೇಳಿಕೊಂಡರು.
ಗೋಡೆ ಬರಹ ಪ್ರಕರಣದಲ್ಲಿ ಹೈಕೋರ್ಟಿನಿಂದ ಜಾಮೀನು ಸಿಕ್ಕಿತ್ತು. ಆನಂತರ, ತನಿಖಾ ತಂಡಗಳು ನಿಗಾ ಇಟ್ಟಿದ್ದವು. ಇತ್ತೀಚೆಗೆ ಶಿವಮೊಗ್ಗದ ಬೆಳವಣಿಗೆಯ ಬಳಿಕ ತಪ್ಪಿಸಿಕೊಂಡಿದ್ದ ಎಂದು ಹೇಳಿದ ಅವರು, ಬಾಂಬ್ ಸ್ಫೋಟದಿಂದ ಭಾರೀ ದೊಡ್ಡ ದುರಂತ ಆಗುವ ಸಾಧ್ಯತೆ ಇತ್ತು. ಏನೋ ಸಣ್ಣದಾಗಿ ಆಗಿದ್ದರಿಂದ ಬಚಾವ್ ಆಗಿದೆ. ಭಯಾನಕ ದುರಂತ ಆಗುವುದು ತಪ್ಪಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಿಜಿಪಿ ಪ್ರವೀಣ್ ಸೂದ್, ಕಮಿಷನರ್ ಶಶಿಕುಮಾರ್, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಇದ್ದರು.
State home minister Araga Jnanendra who visited the cooker bomb explosion spot at Naguri, said that the incident has been taken seriously and the investigation will be handed over to National Investigation Agency (NIA) in a day or two. Speaking to media, after holding a meeting with the officials here on Wednesday November 23, he said, “I have visited the spot and also met the victim Purushottam Poojary. I also held a meeting with the cops and had detailed discussion over the incident.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm