ಬ್ರೇಕಿಂಗ್ ನ್ಯೂಸ್
24-11-22 07:04 pm Mangalore Correspondent ಕರಾವಳಿ
ಮಂಗಳೂರು, ನ.24: ನಿರೀಕ್ಷೆಯಂತೆ ಸುರತ್ಕಲ್ ಟೋಲ್ ಪ್ಲಾಜಾವನ್ನೂ ಹೆಜಮಾಡಿ ಟೋಲ್ ಗೇಟ್ ಜೊತೆಗೆ ಪೂರ್ತಿ ವಿಲೀನ ಮಾಡುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಮಾಡಿದೆ. ಜೊತೆಗೆ, ಸುರತ್ಕಲ್ ನಲ್ಲಿದ್ದ ಶುಲ್ಕದ ಹೊರೆ ಭಾರವನ್ನು ನೇರವಾಗಿ ಹೆಜಮಾಡಿಗೆ ಹೊರಿಸಲಾಗಿದೆ. ಆಮೂಲಕ ಸುರತ್ಕಲ್ ಟೋಲ್ ಗೇಟ್ ತೆರವಿನ ಬದಲು ಹೆಜಮಾಡಿಯಲ್ಲಿ ಟೋಲ್ ಗೇಟ್ ದಾಟುವ ಪ್ರಯಾಣಿಕರಿಗೆ ದುಪ್ಪಟ್ಟಿಗಿಂತಲೂ ಜಾಸ್ತಿ ಹೊರೆ ಹಾಕಲಾಗಿದೆ.
ಡಿಸೆಂಬರ್ 1ರಿಂದಲೇ ಹೆಜಮಾಡಿಯಲ್ಲಿ ಹೊಸ ದರ ಜಾರಿಗೆ ಬರಲಿದ್ದು, ಹೆಜಮಾಡಿಯಲ್ಲಿ ಆಗಬಹುದಾದ ಕಾನೂನು ಸುವ್ಯವಸ್ಥೆಯ ತೊಂದರೆಯನ್ನು ನಿಭಾಯಿಸಲು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದಾಗಿ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಎಚ್.ಎಸ್. ಲಿಂಗೇಗೌಡ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. ಕಳೆದ ಆರು ವರ್ಷಗಳಿಂದ ಅಕ್ರಮವಾಗಿ ನಡೆಸುತ್ತಿರುವ ಸುರತ್ಕಲ್ ಟೋಲ್ ಗೇಟನ್ನು ತೆರವು ಮಾಡಬೇಕೆಂದು ಕಳೆದ ಒಂದು ತಿಂಗಳಿನಿಂದ ಪ್ರತಿಭಟನಾ ಧರಣಿ ನಡೆಯುತ್ತಿದ್ದು, ಇದರ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ನಡೆದುಕೊಂಡಿದ್ದಾರೆ.
ಇದಲ್ಲದೆ, ಹೆಜಮಾಡಿಯಲ್ಲಿ ವಿಧಿಸಲಾಗುವ ಹೊಸ ದರ ಪಟ್ಟಿಯನ್ನೂ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಸುರತ್ಕಲ್ ಮತ್ತು ಹೆಜಮಾಡಿಯಲ್ಲಿ ಈಗ ವಿಧಿಸುತ್ತಿರುವ ಶುಲ್ಕವನ್ನು ಪೂರ್ತಿಯಾಗಿ ಕೂಡಿಸಿ, ನೇರವಾಗಿ ಹೊರೆ ಭಾರವನ್ನು ಜನರ ಮೇಲೆ ಹೊರಿಸಲಾಗಿದೆ. ಸುರತ್ಕಲ್ ಟೋಲ್ ಪ್ಲಾಜಾದಲ್ಲಿ ಈಗ ಕಾರು, ಜೀಪ್ ಗಳಿಗೆ ಇರುವ 60 ರೂ.ವನ್ನು ಹೆಜಮಾಡಿಯಲ್ಲಿ ಇರುವ 40 ರೂ.ಗೆ ಸೇರಿಸಿ, ಮುಂದಕ್ಕೆ 100 ರೂ. ವಿಧಿಸಲಾಗಿದೆ. ಅದೇ ರೀತಿ ಸುರತ್ಕಲ್ ಟೋಲ್ ನಲ್ಲಿ ರಿಟರ್ನ್ ಟ್ರಿಪ್ ದರ 90 ರೂ. ಮತ್ತು ಹೆಜಮಾಡಿಯವಲ್ಲಿ 55 ರೂ. ಇರುವುದನ್ನು ಒಟ್ಟುಗೂಡಿಸಿ 155 ರೂ. ಮಾಡಲಾಗಿದೆ.
ಹಾಗೆಯೇ ಕಾರು, ಜೀಪ್ ಗಳಿಗೆ 50 ಸಿಂಗಲ್ ಟ್ರಿಪ್ ತಿಂಗಳ ಪಾಸ್ ಗೆ ಸುರತ್ಕಲ್ ಟೋಲ್ ನಲ್ಲಿ 2050 ರೂ. ಇದೆ. ಹೆಜಮಾಡಿಯಲ್ಲಿ ಅದೇ ಸಿಂಗಲ್ ಟ್ರಿಪ್ ಪಾಸ್ ದರ 1410 ರೂ. ಇದೆ. ಅದನ್ನು ಒಟ್ಟುಗೂಡಿಸಿ, ಮುಂದಕ್ಕೆ 50 ಸಿಂಗಲ್ ಟ್ರಿಪ್ ಪಾಸ್ ದರನ್ನು 3460 ರೂ. ಮಾಡಲಾಗಿದೆ.
ಅದೇ ರೀತಿ, ಗೂಡ್ಸ್ ಮತ್ತು ಸಾಮಾನ್ಯ ರೀತಿಯ ಕಮರ್ಶಿಯಲ್ ವಾಹನಗಳಿಗೆ ಸುರತ್ಕಲ್ (ಹಾಲಿ 100 ರೂ.) ಮತ್ತು ಹೆಜಮಾಡಿ(70 ರೂ.) ಮುಂದಕ್ಕೆ 170 ರೂ. ಮಾಡಲಾಗಿದೆ. ಹಾಗೆಯೇ ಈ ವಾಹನಗಳ ರಿಟರ್ನ್ ಟ್ರಿಪ್ ದರ ಸುರತ್ಕಲ್ ನಲ್ಲಿ (150 ರೂ.) ಮತ್ತು ಹೆಜಮಾಡಿಯಲ್ಲಿ (100) ಒಟ್ಟುಗೂಡಿಸಿ 250 ಮಾಡಲಾಗಿದೆ. ಉಳಿದಂತೆ ಅವುಗಳ ಸಿಂಗಲ್ ಟ್ರಿಪ್ ಪಾಸನ್ನು ಸುರತ್ಕಲ್ (3315 ರೂ.) ಮತ್ತು ಹೆಜಮಾಡಿ (2275 ರೂ.) ಜೊತೆಗೂಡಿಸಿ 5590 ರೂ. ಮಾಡಲಾಗಿದೆ. ಅದೇ ರೀತಿ ಬಸ್, ಟ್ರಕ್ ಗಳಿಗೆ ಸುರತ್ಕಲ್ (210) ಮತ್ತು ಹೆಜಮಾಡಿ (145) ಜೊತೆಗೂಡಿಸಿ 355 ರೂ. ಮಾಡಲಾಗಿದೆ. ಅವುಗಳ ರಿಟರ್ನ್ ಟ್ರಿಪ್ ಸುರತ್ಕಲ್ 310 ರೂ. ಮತ್ತು ಹೆಜಮಾಡಿಯಲ್ಲಿ 215 ರೂ. ಜೊತೆಗೂಡಿಸಿ 525 ರೂ. ಮಾಡಲಾಗಿದೆ. ಅದೇ ರೀತಿ ಬಸ್, ಟ್ರಕ್ಕಿನ ಸಿಂಗಲ್ ಟ್ರಿಪ್ ಪಾಸ್ ದರ ಸುರತ್ಕಲ್ ನಲ್ಲಿದ್ದ 6940 ರೂ. ಮತ್ತು ಹೆಜಮಾಡಿಯಲ್ಲಿದ್ದ 4765 ರೂ. ಒಟ್ಟು ಸೇರಿಸಿ 11705 ರೂ. ಮಾಡಲಾಗಿದೆ.
ಉಳಿದಂತೆ ಎಲ್ಲ ರೀತಿ ಘನ ವಾಹನಗಳ ದರವನ್ನೂ ಸುರತ್ಕಲ್ ಮತ್ತು ಹೆಜಮಾಡಿಯಲ್ಲಿ ಹಾಲಿ ಇರುವ ಶುಲ್ಕವನ್ನು ಜೊತೆಗೂಡಿಸಿ ಹೊಸ ದರವನ್ನು ಹಾಕಲಾಗಿದೆ. ಆಮೂಲಕ ನೇರವಾಗಿ ಸುರತ್ಕಲ್ ಟೋಲ್ ಪ್ಲಾಜಾದ ಹೊರೆಯನ್ನು ಹೆಜಮಾಡಿಗೆ ದಾಟಿಸಲಾಗಿದೆ. ಕೊನೆಗೆ, ಸಾಮಾನ್ಯ ವಾಹನಗಳಿಗೆ 315 ರೂ.ಗೆ ತಿಂಗಳ ಪಾಸ್ ನೀಡಲಾಗುವುದು ಎಂದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
2018ರಲ್ಲೇ ಆಗಿತ್ತು ವಿಲೀನ ನಿರ್ಣಯ
2018ರಲ್ಲಿ ಹೆಜಮಾಡಿ ಟೋಲ್ ಗೇಟ್ ಶುರುವಾಗುವಾಗಲೇ ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಪ್ರಸ್ತಾಪ ಆಗಿತ್ತು. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ರಾಜ್ಯ ಸರಕಾರದ ಲೋಕೋಪಯೋಗಿ ಮತ್ತು ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ್ದರು. ಸಭೆಯಲ್ಲಿ ವಿಲೀನದ ಸಂದರ್ಭ ಜನರಿಗೆ ಹೊರೆಯಾಗದಂತೆ ಶುಲ್ಕವನ್ನು ಕಡಿತಗೊಳಿಸಲು ಸೂಚಿಸಲಾಗಿತ್ತು. ಆದರೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಗಾಳಿಗೆ ತೂರಲಾಗಿದ್ದು ಯಾವುದೇ ದಾಕ್ಷೀಣ್ಯ ತೋರದೆ ಸುರತ್ಕಲ್ ನಲ್ಲಿದ್ದ ಶುಲ್ಕದ ಹೊರೆಯನ್ನು ಹೆಜಮಾಡಿದೆ ಹೊರಿಸಲಾಗಿದೆ. ಅದರ ಜೊತೆಗೆ, ಸುರತ್ಕಲ್ ನಲ್ಲಿ ಕೆಎ 19 ವಾಹನಗಳಿಗಿದ್ದ ರಿಯಾಯಿತಿಯನ್ನೂ ರದ್ದು ಪಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದ ಪ್ರತಿ ಸಿಕ್ಕ ಬಳಿಕ ಜಿಲ್ಲಾಡಳಿತ ದರ ಪಟ್ಟಿಯನ್ನು ನಿರ್ಧರಿಸಲಿದೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ಶಾಸಕ ಭರತ್ ಶೆಟ್ಟಿ ಕೂಡ ಅದೇ ಮಾತುಗಳನ್ನು ಹೇಳಿದ್ದರು. ಶುಲ್ಕವನ್ನು ಪೂರ್ತಿ ಡಬಲ್ ಮಾಡುವುದಿಲ್ಲ. ಒಂದಷ್ಟು ಮಾತ್ರ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಜನಪ್ರತಿನಿಧಿಗಳು, ಧರಣಿ ನಿರತರ ಅಹವಾಲುಗಳಿಗೆ ಕಿವಿಗೊಡದೆ ಹೆದ್ದಾರಿ ಅಧಿಕಾರಿಗಳು ಹೊಸ ಆದೇಶ ಮಾಡಿದ್ದಾರೆ.
ಸುರತ್ಕಲ್ ಟೋಲ್ ಸುಲಿಗೆ ಬಿಜೆಪಿ ಆಡಳಿತದ ಜನದ್ರೋಹಕ್ಕೆ ಸಾಕ್ಷಿ ; ಮುನೀರ್ ಕಾಟಿಪಳ್ಳ
ಸುರತ್ಕಲ್ ಟೋಲ್ ವಿರೋಧಿಸಿ ಕಾಲ್ನಡಿಗೆ ಜಾಥಾ ; ಸುಂಕ ವಸೂಲಿ ನಿಲ್ಲುವ ತನಕ ನಿರಂತರ ಹೋರಾಟ ; ರಮಾನಾಥ ರೈ
ಸುರತ್ಕಲ್ ಟೋಲ್ ಧರಣಿ ಮುಂದುವರಿಕೆ ; ಹೆಜಮಾಡಿಯಲ್ಲಿ ಶುಲ್ಕ ಹೆಚ್ಚಿಸಿದರೆ ಹೋರಾಟದ ಎಚ್ಚರಿಕೆ
Mangalore Surathkal toll plaza merges with Hejamady awaits, new price list released. Organisations like Surathkal Toll Gate Virodhi Horata Samithi had demanded the closure of the toll plaza at Surathkal for the past several years.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm