ಬ್ರೇಕಿಂಗ್ ನ್ಯೂಸ್
29-11-22 03:09 pm Mangalore Correspondent ಕರಾವಳಿ
ಮಂಗಳೂರು, ನ.29 : ಕೊರೊನಾ ಸೋಂಕಿನ ಎರಡು ವರ್ಷದ ಬಳಿಕ ಪ್ರವಾಸೋದ್ಯಮ ಉತ್ತೇಜನ ಪಡೆದಿದೆ. ಎರಡು ವರ್ಷಗಳ ಬಳಿಕ ಐಷಾರಾಮಿ ಪ್ರವಾಸಿ ಹಡಗು ಮಂಗಳೂರಿಗೆ ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್ ಯುರೋಪಾ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ.
ಹಡಗಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಮಂಗಳೂರು ಬಂದರಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು, ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್ ಅಲೋಶಿಯಸ್ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್ ಮುಂತಾದ ಸ್ಥಳಗಳಿಗೆ ಬಸ್ ಇನ್ನಿತರ ಖಾಸಗಿ ವಾಹನಗಳಲ್ಲಿ ಭೇಟಿ ನೀಡಿದರು.
ಮಂಗಳೂರು ಭೇಟಿಯ ಬಳಿಕ ಹಡಗು ಕೊಚ್ಚಿಗೆ ಪ್ರಯಾಣ ಬೆಳೆಸಿತು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಪ್ರವಾಸಿ ಹಡುಗಳ ಭೇಟಿ ಸಂಪೂರ್ಣ ಸ್ಥಗಿತಗೊಂಡಿತ್ತು. ವಿದೇಶಿ ಪ್ರವಾಸಿಗರು ತಪಾಸಣೆ ಇಲ್ಲದೆ ಮಂಗಳೂರು ಭೇಟಿಗೆ ಅವಕಾಶ ಇರಲಿಲ್ಲ. ಕೊರೊನಾ ತೀವ್ರತೆ ಕಡಿಮೆಯಾದ ಬಳಿಕ, ಇದೇ ಮೊದಲ ಬಾರಿಗೆ ವಿದೇಶಿ ಐಷಾರಾಮಿ ಹಡಗು ಪ್ರವಾಸ ಹೊರಟಿದೆ. ವಿವಿಧ ದೇಶಗಳ ಸಿರಿವಂತರು ಭಾರತದ ಕಡಲ ನಗರಿಗಳಿಗೆ ಭೇಟಿ ಕೊಡುತ್ತಿದ್ದಾರೆ. ಏಶ್ಯಾ ದೇಶಗಳ ಉದ್ದಕ್ಕೂ ಈ ಹಡಗು ಸಂಚರಿಸಲಿದೆ.
ಮಂಗಳೂರಿಗೆ ಭೇಟಿಯಿತ್ತ ವಿದೇಶಿ ಪ್ರವಾಸಿಗರನ್ನು ಕರಾವಳಿಯ ಸೊಗಡು ಯಕ್ಷಗಾನ ವೇಷ, ಚೆಂಡೆ ವಾದನದ ಮೂಲಕ ಸ್ವಾಗತ ಮಾಡಲಾಯಿತು.
The tourism industry, which was hit hard due to the coronavirus pandemic for two years, is springing back to life again. Cruise ship Europa 2 carrying 271 tourists on board and 373 personnel reached New Mangalore Port Trust (NMPT) on Monday, November 28.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm