ಬ್ರೇಕಿಂಗ್ ನ್ಯೂಸ್
30-11-22 06:29 pm Mangalore Correspondent ಕರಾವಳಿ
ಮಂಗಳೂರು, ನ.30: ರಾಜ್ಯ ಸರಕಾರದ ಮುಸ್ಲಿಂ ಕಾಲೇಜು ಸ್ಥಾಪನೆ ಪ್ರಸ್ತಾಪ ಚುನಾವಣೆ ಕಾಲದಲ್ಲಿ ಮುಸ್ಲಿಮರನ್ನು ಓಲೈಸುವ ತಂತ್ರಗಾರಿಕೆ. ಮುಖ್ಯಮಂತ್ರಿ ಬೊಮ್ಮಾಯಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮುಸ್ಲಿಮರಿದ್ದು, ಅವರನ್ನು ಓಲೈಸುವುದಕ್ಕಾಗಿ ಮುಸ್ಲಿಮ್ ಹೆಣ್ಮಕ್ಕಳಿಗಾಗಿ ಕಾಲೇಜು ನಿರ್ಮಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದು ಚುನಾವಣೆ ಮೊದಲು ಸಾಧ್ಯವಾಗುವ ಕೆಲಸ ಅಲ್ಲ ಎಂದು ಮುಸ್ಲಿಂ ಜಸ್ಟಿಸ್ ಫೋರಂ ಸಂಘಟನೆಯ ಪ್ರಮುಖರಾದ ರಫಿಯುದ್ದೀನ್ ಕುದ್ರೋಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಕ್ಫ್ ಇಲಾಖೆಯಿಂದ ಮುಸ್ಲಿಂ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇದು ಸರಕಾರದ ದುಡ್ಡಿನಿಂದ ಮಾಡುತ್ತಿರುವುದಲ್ಲ. ವಕ್ಫ್ ಇಲಾಖೆಯ ಆಸ್ತಿಯಲ್ಲಿ ಬರುವ ಆದಾಯದಿಂದ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ಮುಸ್ಲಿಮರನ್ನು ಪ್ರತ್ಯೇಕವಾಗಿ ನೋಡುವ, ತುಳಿಯುವ ಮನೋಭಾವ ಸಮಾಜದಲ್ಲಿ ಬೆಳೆಯುತ್ತಿದೆ. ಇದಕ್ಕಾಗಿ ಮುಸ್ಲಿಂ ಜಸ್ಟಿಸ್ ಫೋರಂ ಅನ್ನುವ ಸಂಘಟನೆ ಕಟ್ಟಿದ್ದು, ಮುಸ್ಲಿಮರ ಹಿತ ಕಾಯುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಲವ್ ಜಿಹಾದ್ ಕುರಿತ ಪ್ರಶ್ನೆಗೆ, ಈವರೆಗೂ ದೇಶದಲ್ಲಿ ಲವ್ ಜಿಹಾದ್ ಇರುವ ಬಗ್ಗೆ ಸಾಬೀತಾಗಿಲ್ಲ. ಕೇರಳ ಹೈಕೋರ್ಟ್, ದೆಹಲಿ, ಉತ್ತರ ಪ್ರದೇಶ ಕೋರ್ಟ್ ವಿವಿಧ ಸಂದರ್ಭಗಳಲ್ಲಿ ಲವ್ ಜಿಹಾದ್ ಅನ್ನುವುದು ಇಲ್ಲ ಎಂದೇ ಹೇಳಿದೆ. ಹಿಂದು ಸಂಘಟನೆಗಳು ಮಾತ್ರ ಲವ್ ಜಿಹಾದ್ ಅನ್ನುವುದನ್ನು ಹೇಳುತ್ತಿವೆ. ನಮ್ಮಲ್ಲಿ ಜಿಹಾದ್ ಅನ್ನುವುದಕ್ಕೆ ಅರ್ಥ ಇದೆ. ಲವ್ ಜಿಹಾದ್ ಅನ್ನುವುದು ಇಲ್ಲ ಎಂದರು. ಹಾಗಾದರೆ, ಸುಳ್ಯದಲ್ಲಿ ಕಳೆದ ಬಾರಿ ಮತಾಂತರಗೊಂಡಿದ್ದ ಮಹಿಳೆಯೊಬ್ಬರು ಲವ್ ಜಿಹಾದ್ ಮಾಡಿದ್ದಾರೆ, ತಮ್ಮನ್ನು ಮದುವೆಯಾಗಿ ಮತಾಂತರಿಸಿ ಬೀದಿಗೆ ತಳ್ಳಿದ್ದಾರೆ ಎಂದು ಪ್ರಶ್ನೆ ಮಾಡಿದ್ದರಲ್ಲಾ ಎಂಬ ಪ್ರಶ್ನೆಗೆ, ಅಲ್ಲಿ ಮತಾಂತರ ಪ್ರಶ್ನೆ ಬಂದಿಲ್ಲ. ಆಕೆಯನ್ನು ಗಂಡ ಬೇರೆಯದೇ ಕಾರಣಕ್ಕೆ ತ್ಯಜಿಸಿದ್ದ. ಆನಂತರ ಆ ಮಹಿಳೆಯನ್ನು ಬೇರೆ ಯುವಕನೊಂದಿಗೆ ಮದುವೆ ಮಾಡಲಾಗಿತ್ತು. ಅಲ್ಲಿಗೆ ಆ ವಿವಾದ ಬಗೆಹರಿದಿತ್ತು ಎಂದರು.
ಹಿಂದು ಯುವತಿಯರನ್ನು ಮದುವೆಯಾಗಿ ಮತಾಂತರಿಸುವುದು, ಅವರನ್ನು ಬೀದಿಗೆ ತಳ್ಳುವ ಕೆಲಸ ಬಹಳಷ್ಟು ಕಡೆ ಆಗಿದೆಯಲ್ಲಾ ಎಂಬ ಪ್ರಶ್ನೆಗೆ, ಅದು ಮುಸ್ಲಿಮರು ಮಾತ್ರ ಮಾಡಿದ್ದಲ್ಲ. ಹಿಂದುಗಳು ಕೂಡ ಮಾಡಿದ್ದಾರೆ. ಹಲವಾರು ಕಡೆ ಆಗಿದೆ, ಮಾಧ್ಯಮಗಳು ಅದನ್ನು ಹೈಲೈಟ್ ಮಾಡಿಲ್ಲ ಎಂದರು. ಪ್ರೀತಿಸಿ ಮತಾಂತರಿಸುವುದು ಯಾಕೆಂದು ಕೇಳಿದ್ದಕ್ಕೆ, ಗಂಡನಾದವನು ಪತ್ನಿಗೆ ತನ್ನ ವಿಶ್ವಾಸವನ್ನು ಹೇಳುವುದು, ಅದನ್ನು ಅನುಸರಿಸುವಂತೆ ಮಾಡುವುದು ತಪ್ಪಾಗುತ್ತದೆಯೇ ಎಂದು ಪ್ರಶ್ನಿದರು.
ಮುಸ್ಲಿಂ ಧರ್ಮದಲ್ಲಿ ಅನೈತಿಕ ಕೆಲಸ ಮಾಡುವುದಕ್ಕೆ ನಿಷೇಧ ಇದೆ. ಯಾವುದೇ ಅಪರಾಧ ಕೃತ್ಯ, ಅನೈತಿಕ ಕೆಲಸ ಮಾಡಿದರೆ ಮಸೀದಿಯಿಂದ ಹೊರ ಹಾಕಬೇಕೆಂಬ ನಿಯಮ ಇದೆ ಎಂದಾಗ, ಅಕ್ರಮ ಗೋಸಾಗಾಟ, ಗಾಂಜಾ ಪ್ರಕರಣಗಳಲ್ಲಿ ಮುಸ್ಲಿಂ ಯುವಕರು ಆರೋಪಿಗಳಾಗಿದ್ದಾರೆ, ನೀವು ಯಾವ ರೀತಿಯ ಜಾಗೃತಿ ಮೂಡಿಸಿದ್ದೀರಿ ಎಂದು ಪ್ರಶ್ನೆ ಮಾಡಲಾಯಿತು. ರಾಜ್ಯದಲ್ಲಿ ಗೋವನ್ನು ಅಕ್ರಮವಾಗಿ ಸಾಗಿಸುವುದಕ್ಕೆ ಮತ್ತು ವಧಿಸುವುದಕ್ಕೆ ಮಾತ್ರ ನಿಷೇಧ ಇದೆ. ಗೋವಿನ ಮಾಂಸ ತಿನ್ನುವುದಕ್ಕೆ ನಿಷೇಧ ಇಲ್ಲ. ತೊಕ್ಕೊಟ್ಟಿನಲ್ಲಿ ಗೋಮಾಂಸ ಇದ್ದ ಕಾರಣಕ್ಕೆ ಹೊಟೇಲ್ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸುತ್ತೇವೆ. ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇವೆ. ಗಾಂಜಾ ಪ್ರಕರಣದಲ್ಲಿ ಸಿಕ್ಕಿಬಿದ್ದವರನ್ನು ಧಾರ್ಮಿಕ ಮುಖಂಡರು ಸಮಾಜದಿಂದ ಹೊರಗಿಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
The state government's proposal to set up a Muslim college is a ploy to woo Muslims during the elections. Chief Minister Bommai, who has the highest number of Muslims in the constituency, has proposed to build a college for Muslim girls to woo them. This is not something that is possible before the elections," said Rafiuddin Qudroli, a leader of the Muslim Justice Forum.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm