ಪಂಪ್ವೆಲ್ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಪ್ರಸ್ತಾವನೆ ; ಪರಕೀಯ ಯಾಕೆ ಬೇಕು? ಕೋಟಿ ಚೆನ್ನಯರ ಪ್ರತಿಮೆ ಸ್ಥಾಪಿಸುವಂತೆ ಕಾಂಗ್ರೆಸ್ ಸವಾಲು  

01-12-22 09:05 pm       Mangalore Correspondent   ಕರಾವಳಿ

ನಗರದ ಪಂಪ್ವೆಲ್ ವೃತ್ತದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಮಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಡಿ.1: ನಗರದ ಪಂಪ್ವೆಲ್ ವೃತ್ತದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಮಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಕೀಯ ಶಿವಾಜಿ ಪ್ರತಿಮೆ ಯಾಕೆ ಬೇಕು, ನಮ್ಮಲ್ಲಿ ಸಾಧನೆ ಮಾಡಿರುವ ಮಂದಿ ಅನೇಕರಿದ್ದಾರೆ. ಅಂಥವರ ಪ್ರತಿಮೆ ಸ್ಥಾಪನೆ ಮಾಡಬಹುದಲ್ಲವೇ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.‌

ಛತ್ರಪತಿ ಶಿವಾಜಿ ಮರಾಠ ಅಸೋಸಿಯೇಷನ್‌ ನೀಡಿದ್ದ ಶಿವಾಜಿ ಪ್ರತಿಮೆಯ ಬೇಡಿಕೆಯನ್ನು ಪರಿಗಣಿಸಿ ನಗರದ ಮಹಾವೀರ ವೃತ್ತದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಕಾರ್ಯಸೂಚಿಯನ್ನು ಕಳೆದ ಬಾರಿ ಅ.29ರಂದು ನಡೆದಿದ್ದ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. 

Corporator Naveen D'Souza Appointed MCC Opposition Leader - Mangalorean.com

ಈ ಬಾರಿಯ ಕೌನ್ಸಿಲ್ ಸಭೆಯಲ್ಲಿ ಪ್ರತಿಪಕ್ಷದ ನಾಯಕ ನವೀನ್‌ ಡಿಸೋಜ ವಿಷಯ ಪ್ರಸ್ತಾಪಿಸಿ, ಪಂಪ್‌ವೆಲ್‌ನಲ್ಲಿ ಭಗವಾನ್‌ ಮಹಾವೀರರ ಕಲಶವಿದೆ. ಮಹಾವೀರ ವೃತ್ತ ಎಂದು ಹೆಸರು ಇದೆ. ಇನ್ನೊಂದೆಡೆ ಅಲ್ಲಿ ಮಹಾರಾಷ್ಟ್ರದವರು ನಮ್ಮ ಬಸ್‌ಗಳಿಗೆ ಮಸಿ ಬಳಿಯುತ್ತಿದ್ದಾರೆ. ಎಂಇಎಸ್ ಕನ್ನಡಿಗರಿಗೆ ವಿರೋಧ ನಿಲುವು ಹೊಂದಿದೆ. ಹಾಗಿರುವಾಗ ಮರಾಠ ರಾಜ ಶಿವಾಜಿ ಪ್ರತಿಮೆ ಇಲ್ಲಿ ಯಾಕೆ ಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಕಾರ್ಪೊರೇಟರುಗಳು, ನೀವು ಹಿಂದು ನಾಯಕರನ್ನು ಯಾವಾಗಲೂ ಆಕ್ಷೇಪಿಸುತ್ತೀರಿ. ಹಿಂದೂಗಳನ್ನು ಒಗ್ಗೂಡಿಸಿದ ಶಿವಾಜಿ ಪ್ರತಿಮೆ ಹಾಕಿದರೆ ತಪ್ಪೇನು? ಅವರನ್ನು ಮಹಾರಾಷ್ಟ್ರಕ್ಕೆ ಸೀಮಿತ ಮಾಡಬೇಡಿ ಎಂದು ಹೇಳಿದರು. 

Congress now has multiple ticket aspirants in six constituencies - The Hindu

ಕಾಂಗ್ರೆಸ್ ಸದಸ್ಯ ನವೀನ್‌ ಡಿಸೋಜ ಜತೆ ಶಶಿಧರ ಹೆಗ್ಡೆ ದನಿಗೂಡಿಸಿ, ನಾವು ಹಿಂದು ವಿರೋಧಿಗಳಲ್ಲ. ಭಾವನಾತ್ಮಕ ವಿಷಯ ಬಿಟ್ಟು, ರಚನಾತ್ಮಕ ಅಭಿವೃದ್ಧಿ ಕೆಲಸಗಳನ್ನು ಮಾಡಿ. ನಗರಕ್ಕೆ ಶಿವಾಜಿ ಕೊಡುಗೆ ಏನು? ನಮ್ಮವರೇ ಆಗಿರುವ ಕಯ್ಯಾರ, ಕಾರ್ನಾಡ್‌, ಕೆ.ಎಸ್‌.ಹೆಗ್ಡೆ ಮತ್ತಿತರರ ಪ್ರತಿಮೆ ಮಾಡಬಹುದಲ್ಲ? ಸಾಧ್ಯವಾದರೆ ಇತಿಹಾಸ ಪುರುಷರಾದ ಕೋಟಿ ಚೆನ್ನಯರ ಪುತ್ಥಳಿ ನಿರ್ಮಿಸಿ ಎಂದು ಸವಾಲು ಹಾಕಿದರು. ನವೀನ್ ಡಿಸೋಜ ಕೂಡ ಕೋಟಿ ಚೆನ್ನಯ ಪ್ರತಿಮೆ ಸ್ಥಾಪನೆಗೆ ಒತ್ತಾಯ ಮಂಡಿಸಿದರು.‌ 

BJP's Janotsava amid the existing chaos | Deccan Herald

ಇದರಿಂದ ಬಿಜೆಪಿ ಆಡಳಿತಕ್ಕೆ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ. ನಾಡಿನ ಸಾಧಕರ ಪ್ರತಿಮೆ ಸ್ಥಾಪಿಸುವಂತೆ ಕಾಂಗ್ರೆಸ್ ನೀಡಿದ ಸವಾಲನ್ನು ಸ್ವೀಕರಿಸಿದ ಬಿಜೆಪಿ ಸದಸ್ಯರು, ನಿಮ್ಮ ಆಕ್ಷೇಪವನ್ನು ದಾಖಲಿಸುತ್ತೇವೆ.‌ ಶಿವಾಜಿ ಪ್ರತಿಮೆ ವಿಚಾರ ಕಳೆದ ಬಾರಿಯೇ ಅನುಮೋದನೆ ಆಗಿತ್ತು. ಆಗ ನೀವು ವಿರೋಧ ಮಾಡಿರಲಿಲ್ಲ ಎಂದು ಹೇಳಿದರು.

New controversy shivaji statue in Mangalore congress opposed in MCC meeting.