ಇನ್ನೂ ಎರಡು ದಿನ ಮಳೆ ; ಕೊಯ್ಲಿಗೆ ಬಂದ ಭತ್ತಕ್ಕೆ ಪೆಟ್ಟು, ಕೃಷಿಕನಿಗೆ ಮತ್ತೆ ಏಟು !

14-10-20 05:00 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದ್ದು ಇನ್ನೂ ಎರಡು ದಿನ ಮಳೆಯಾಗುವ ಸೂಚನೆ ನೀಡಲಾಗಿದೆ.

ಮಂಗಳೂರು, ಅಕ್ಟೋಬರ್ 14: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಮತ್ತೆ ಮಳೆ  ಬಿರುಸುಗೊಂಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆ ನಿರಂತರ ಮಳೆಯಾಗುತ್ತಿದೆ. 

ಸತತ ಮಳೆಯಿಂದಾಗಿ ಮಂಗಳೂರಿನ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶಗಳಲ್ಲಿ ಚರಂಡಿಯಲ್ಲಿ ಮಳೆ ನೀರು ಫುಲ್ ಆಗಿ, ಆಸುಪಾಸಿನ ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಇದರಿಂದ ಹಲವು ಮನೆಗಳ ಆವರಣಗಳಲ್ಲಿ ನೀರು ನುಗ್ಗಿತ್ತು. 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದ್ದು ಇನ್ನೂ ಎರಡು ದಿನ ಮಳೆಯಾಗುವ ಸೂಚನೆ ನೀಡಲಾಗಿದೆ. ಸತತ ಮಳೆಯಿಂದಾಗಿ ಭತ್ತದ ಕೃಷಿಕರಿಗೆ ತೊಂದರೆಯಾಗಿದೆ. ಬಹುತೇಕ ಭಾಗದಲ್ಲಿ ನವರಾತ್ರಿ ವೇಳೆಗೆ ಭತ್ತ ಕೊಯ್ಲಿಗೆ ಬರುತ್ತದೆ. ಕಟಾವಿಗೆ ಬಂದಿರುವ ಭತ್ತಕ್ಕೆ ಮಳೆ ಬಿದ್ದರೆ ಹಾಳಾಗುತ್ತದೆ. ಕೊಯ್ಲು ಮಾಡಿ, ಮನೆ ತುಂಬಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಹೀಗಾಗಿ ಈ ಬಾರಿ ಅದೇ ಸಮಯದಲ್ಲಿ ಮಳೆ ಬಂದಿರುವುದು ಕರಾವಳಿಯ ಕೃಷಿಕರನ್ನು ಹೈರಾಣು ಮಾಡಿದೆ.

A deep depression formed over the Bay of Bengal caused very heavy rain in Andhra Pradesh, Telangana and Odisha as a result Daksihna Kannada and Udupi districts have declared orange alert.