ಬ್ರೇಕಿಂಗ್ ನ್ಯೂಸ್
05-12-22 02:44 pm Mangalore Correspondent ಕರಾವಳಿ
ಮಂಗಳೂರು, ಡಿ.5 : ನಗರ ಹೊರವಲಯದ ಗುರುಪುರದಲ್ಲಿ ಎರಡು ಲಾರಿ ಮುಖಾಮುಖಿ ಡಿಕ್ಕಿಯಾಗಿ ಚಾಲಕರಿಬ್ಬರು ಸಾವನಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಕೆಂಪು ಮಣ್ಣು ಹೇರಿಕೊಂಡು ಆಂಧ್ರಕ್ಕೆ ಹೊರಟಿದ್ದ ಕಂಟೇನರ್ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಗುರುಪುರ ಇಳಿಜಾರಿನಲ್ಲಿ ಎದುರಿನಿಂದ ಬರುತ್ತಿದ್ದ ಈಚರ್ ಲಾರಿಗೆ ಡಿಕ್ಕಿಯಾಗಿದೆ.
ಕೈಕಂಬ ಕಡೆಯಿಂದ ಬರುತ್ತಿದ್ದ ಹತ್ತು ಚಕ್ರದ ಲಾರಿಯು ವಾಮಂಜೂರಿನಿಂದ ಮೂಡುಬಿದ್ರೆ ಕಡೆಗೆ ತೆರಳುತ್ತಿದ್ದ ಈಚರ್ ಲಾರಿಗೆ ನೇರವಾಗಿ ಡಿಕ್ಕಿಯಾಗಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಈಚರ್ ಲಾರಿ ಚಾಲಕ ಮತ್ತು ಮಾಲಕರಾಗಿದ್ದ ಕಾವೂರು ಹರಿಪದವು ನಿವಾಸಿ ಲೋಕನಾಥ್ ಶೆಟ್ಟಿಗಾರ್(52) ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಂಟೇನರ್ ಲಾರಿಯಲ್ಲಿ ಚಾಲಕನಾಗಿದ್ದ ಆಂಧ್ರಪ್ರದೇಶ ಮೂಲದ ಬಲರಾಮ್ (55) ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.



ಗಂಜಿಮಠ ಬಳಿಯಿಂದ ಕೆಂಪು ಮಣ್ಣು ಹೇರಿಕೊಂಡು ಆಂಧ್ರ ಪ್ರದೇಶಕ್ಕೆ ಹೊರಟಿದ್ದ ಕಂಟೇನರ್ ಲಾರಿ ಗುರುಪುರದಿಂದ ಇಳಿಜಾರು ಹೆದ್ದಾರಿಯಲ್ಲಿ ಬರುತ್ತಿದ್ದಾಗ ಓವರ್ ಲೋಡ್ ಕಾರಣದಿಂದ ಬ್ರೇಕ್ ಸಿಗದೆ ನುಗ್ಗಿ ಬಂದಿದೆ. ಬೆಳಗ್ಗೆ ಎಂದಿನಂತೆ ಜಲ್ಲಿ ಕ್ರಶರ್ ನತ್ತ ಸಾಗುತ್ತಿದ್ದ ಈಚರ್ ಲಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಈಚರ್ ಲಾರಿ ಅಪ್ಪಚ್ಚಿಯಾಗಿ ಹೊಂಡಕ್ಕೆ ಪಲ್ಟಿಯಾಗಿ ಬಿದ್ದಿದೆ. ಅದರ ಚಾಲಕ ಲೋಕನಾಥ್ ದಾರುಣ ಸಾವು ಕಂಡಿದ್ದಾರೆ.



ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ಅರ್ಧ ಗಂಟೆ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎರಡೂ ಲಾರಿಯಲ್ಲಿದ್ದ ಕ್ಲೀನರ್ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಬಜ್ಪೆ ಪೊಲೀಸರು ಬಳಿಕ ಕ್ರೇನ್ ತರಿಸಿ ಲಾರಿಯನ್ನು ತೆರವು ಮಾಡಿ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ. ಗಾಯಗೊಂಡ ಇಬ್ಬರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Sever accident in gurupur near Mangalore truck drivers spot death.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
05-09-26 04:58 pm
HK News Staffer
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
05-09-26 08:58 pm
HK News Staffer
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm