ಬ್ರೇಕಿಂಗ್ ನ್ಯೂಸ್
12-12-22 10:37 pm Mangalore Correspondent ಕರಾವಳಿ
ಮಂಗಳೂರು, ಡಿ.12: ಡೀಮ್ಡ್ ಫಾರೆಸ್ಟ್ ತೆರವುಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇಂತಹ ರಾಜಕೀಯ ಹೇಳಿಕೆಗಳಿಂದ ಡೀಮ್ಡ್ ಫಾರೆಸ್ಟ್ ಬದಲಾವಣೆ ಮಾಡಲು ಸಾಧ್ಯವಾಗಲ್ಲ ಎಂದು ಮಾಜಿ ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆರು ಲಕ್ಷ ಹೆಕ್ಟೇರ್ ನಷ್ಟು ಡೀಮ್ಡ್ ಫಾರೆಸ್ಟ್ ಕಂದಾಯ ಇಲಾಖೆಗೆ ಬಿಟ್ಟು ಕೊಡಲು ಸರ್ವೆ ನಡೆಸಲಾಗಿತ್ತು. ರಕ್ಷಿತಾರಣ್ಯ ಎಂದು ಘೋಷಿಸಲಾಗಿರುವ ಭೂಮಿಯ ಬಗ್ಗೆ 2015ರಲ್ಲಿ ಜಂಟಿ ಸರ್ವೆ ನಡೆಸಲಾಗಿದ್ದು, ಜನವಸತಿ ಇರುವ ಕಡೆಗಳಲ್ಲಿ ತೆರವು ಮಾಡಲು ಗುರುತು ಹಾಕಲಾಗಿತ್ತು. ಈ ರೀತಿಯ ಸಮಸ್ಯೆ ಹೆಚ್ಚಿರುವುದು ಕರಾವಳಿಯ ಜಿಲ್ಲೆಗಳಲ್ಲಿ. ಆದರೆ, ಅದಿನ್ನೂ ಕಾರ್ಯಗತ ಆಗಿಲ್ಲ. ರಾಜಕೀಯ ನಾಯಕರು ತಾವು ಮಾಡಿದ್ದೇವೆಂದು ಬಡಾಯಿ ಕೊಚ್ಚಿಕೊಂಡ ಮಾತ್ರಕ್ಕೆ ಈ ಸಮಸ್ಯೆ ನಿವಾರಣೆ ಆಗುವುದಿಲ್ಲ.
ಡೀಮ್ಡ್ ಫಾರೆಸ್ಟ್ ಭೂಮಿಯನ್ನು ತೆರವುಗೊಳಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಂಕಿತ ಬೇಕಾಗುತ್ತದೆ. ಆನಂತರ, ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಸುಪ್ರೀಂ ಕೋರ್ಟಿನಲ್ಲಿ ಈ ಕುರಿತ ವ್ಯಾಜ್ಯ ಇರುವುದರಿಂದ ಹೇಳುತ್ತಿದ್ದೇನೆ. ನಾವು ಮಾಡಿದ್ದೇವೆಂದು ಹೇಳಿಕೆ ನೀಡಿದ ಮಾತ್ರಕ್ಕೆ ಸಮಸ್ಯೆ ನಿವಾರಣೆ ಆಗುವುದಿಲ್ಲ. ಬಹಳಷ್ಟು ಕಡೆ ಹಿಂದಿನ ಕಾಲದಲ್ಲಿ ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿರುವ ಜಾಗದಲ್ಲಿ ಜನವಸತಿ ಇದೆ. ಗದ್ದೆ, ತೋಟಗಳಿವೆ. ಇಂಥವನ್ನು ತೆರವು ಮಾಡುವುದಕ್ಕಾಗಿ ಜಂಟಿ ಸರ್ವೆ ಮಾಡಲಾಗಿತ್ತು. ಆ ಭೂಮಿಯನ್ನು ಕಂದಾಯ ಭೂಮಿಯೆಂದು ಪರಿವರ್ತಿಸಲು ಕಾನೂನು ತೊಡಕುಗಳಿದ್ದು, ಸೂಕ್ತವಾಗಿ ಸ್ಪಂದಿಸಿದಲ್ಲಿ ಮಾತ್ರ ಸಾಧ್ಯ ಎಂದು ರಮಾನಾಥ ರೈ ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದ ವಂದಿತಾ ಶರ್ಮ ಈಗ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ. ಡೀಮ್ಡ್ ಫಾರೆಸ್ಟ್ ಬಗ್ಗೆ ತಿಳಿದುಕೊಂಡವರಿದ್ದಾರೆ. ಪ್ರಯತ್ನ ಪಟ್ಟರೆ, ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯ ಎಂದು ರಮಾನಾಥ ರೈ ಹೇಳಿದರು. ದ.ಕ. ಜಿಲ್ಲೆಯಲ್ಲಿ ಚುನಾವಣೆಗೇನು ತಯಾರಿ ನಡೆದಿದೆ ಎಂದು ಕೇಳಿದ್ದಕ್ಕೆ, ನಾವು ಚುನಾವಣೆಗೆ ರೆಡಿ ಆಗಿದ್ದೇವೆ. ನಮ್ಮಲ್ಲಿ ಹೆಚ್ಚು ಅರ್ಜಿ ಹಾಕಿದ್ದಾರೆ ಅಂದ್ರೆ, ಗೆಲ್ಲುವ ಸಾಧ್ಯತೆ ಹೆಚ್ಚಿದೆಯೆಂದರ್ಥ. ಹಿಂದೆ ಎಂಟರಲ್ಲಿ ಏಳನ್ನು ಕಾಂಗ್ರೆಸ್ ಗೆದ್ದಿತ್ತು. ಆನಂತರ, ಕಳೆದ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನ ಗೆದ್ದಿತ್ತು. ಈ ಬಾರಿ ಮತ್ತೆ ಎಂಟರಲ್ಲಿ ಏಳು ಅಲ್ಲ, ಎಂಟು ಸ್ಥಾನ ಗೆಲ್ಲಬೇಕಾಗಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ನವೀನ್ ಡಿಸೋಜ, ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ಅಪ್ಪಿ ಮತ್ತಿತರರಿದ್ದರು.
Former Minister B. Ramanath Rai on Monday said statements by the Chief Minister and his colleagues to get 6 lakh hectares of land from the ‘deemed forest’ tag were only political, whereas the necessary order has to come from the Supreme Court.Speaking to reporters here, Mr. Rai said releasing deemed forestland for agriculture and other purposes was not as easy as making tall claims. He said when he was the Forest Minister, he had constituted a joint committee comprising officials from the forest and revenue departments to identify deemed forest lands that could be released from the tag.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm