ಬ್ರೇಕಿಂಗ್ ನ್ಯೂಸ್
12-12-22 10:58 pm Mangalore Correspondent ಕರಾವಳಿ
ಮಂಗಳೂರು, ಡಿ.12 : ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಯ ಪೂರ್ವ ತಯಾರಿಯಾಗಿ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಜಾತ್ಯತೀತ ಜನತಾದಳದ ಪ್ರಚಾರ ಜಾಥಾಕ್ಕೆ ನಗರದ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಲಾಯಿತು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಾಕೆ ಮಾದವ ಗೌಡ ರಥಕ್ಕೆ ಚಾಲನೆ ನೀಡಿದರು.
ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚರತ್ನ ಯೋಜನೆ ಈ ರಾಜ್ಯದ ನವನಿರ್ಮಾಣದ ಕಲ್ಪನೆ. ರಾಜ್ಯದ ಮೂಲೆ ಮೂಲೆಗಳಿಂದ ಬೆಂಬಲ ದೊರಕುತ್ತಿದ್ದು ವಿರೋಧ ಪಕ್ಷಗಳು ಇದರಿಂದ ಭೀತಿಗೊಳಗಾಗಿದ್ದಾರೆ ಎಂದು ಜಾಕೆ ಮಾಧವ ಗೌಡ ಹೇಳಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷೆ ಮತ್ತು ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ ಕುಮಾರಸ್ವಾಮಿಯವರ ಆದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು ವಿಧಾನಸಭಾ ಕ್ಷೇತ್ರದ 38 ವಾರ್ಡಗಳಲ್ಲಿ ಪ್ರಚಾರ ಜಾಥಾ ಸಂಚರಿಸಲಿದೆ ಎಂದು ಹೇಳಿದರು.
ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮಾತನಾಡಿ ಬಿಜೆಪಿ ಪಕ್ಷ ಜನರಲ್ಲಿ ಭೀತಿ, ದ್ವೇಷ ಹರಡುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಬೆಲೆ ನಿಯಂತ್ರಣ ಮಾಡಲು ಸಂಪೂರ್ಣ ಸೋತಿದೆ. ಇನ್ನೊಂದೆಡೆ ಕಾಂಗ್ರೆಸ್ ಅಧಿಕಾರ ಪಡೆದ ಹಾಗೆ ತಿರುಕನ ಕನಸು ಕಂಡಿದ್ದು ಮುಖ್ಯಮಂತ್ರಿ ಪೈಪೋಟಿಯಲ್ಲಿ ತೊಡಗಿದೆ ಎಂದು ಹೇಳಿದರು. ರಾಜ್ಯ ಜೆಡಿಎಸ್ ನಾಯಕರಾದ ರತ್ನಾಕರ ಸುವರ್ಣ, ಜಮೀರ್ ಷಾ, ಇಕ್ಬಾಲ್ ಮುಲ್ಕಿ. ದಿನಕರ್ ಉಳ್ಳಾಲ್ ಕಡಬ ಕ್ಷೇತ್ರದ ಅಧ್ಯಕ್ಷ ಮೀರಾ ಸಾಹೇಬ್, ಯುವನಾಯಕ ಪೈಜಲ್, ಕನಕದಾಸ ಕುಳೂರ್, ಮುನೀರ್ ಮುಕ್ಕಚೇರಿ, ವಿನ್ಸೆಂಟ್ ಕೋಡಿಕಲ್, ಅಲ್ತಾಫ್ ತುಂಬೆ, ರವೀಂದ್ರ ಉಳ್ಳಾಲ, ವೀಣಾ ಶೆಟ್ಟಿ, ಭಾರತೀ ಪುಷ್ಪರಾಜನ್, ಪ್ರಿಯಾ ಸಾಲಿಯಾನ್, ಯುವ ಜನತಾದಳ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿಲಾಲ್ ಮಹಮದ್ ಉಪಸ್ಥಿತರಿದ್ದರು.
HD Kumaraswamy will surely become next cm of Karnataka, Madava Gowda.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm