ಬ್ರೇಕಿಂಗ್ ನ್ಯೂಸ್
13-12-22 09:45 pm Mangalore Correspondent ಕರಾವಳಿ
ಮಂಗಳೂರು, ಡಿ.13: ಕರಾವಳಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವುದಕ್ಕೆ ಎಲ್ಲ ರೀತಿಯ ಶ್ರಮ ಹಾಕಲಾಗುತ್ತಿದೆ. ಅದಕ್ಕಾಗಿ ಮಂಗಳೂರಿನ ಕಾಂಗ್ರೆಸ್ ಕಚೇರಿಯ ವಾಸ್ತು ಬದಲಾವಣೆಗೂ ಪಕ್ಷದ ನಾಯಕರು ಮುಂದಾಗಿದ್ದಾರೆ. ವಾಸ್ತು ಶಾಸ್ತ್ರಜ್ಞರ ಸಲಹೆಯಂತೆ, ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದ ಮೆಟ್ಟಿಲುಗಳನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗಿದೆ.
ಕಾಂಗ್ರೆಸ್ ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು. ಸಾಮಾನ್ಯವಾಗಿ ವಾಸ್ತು ಪದ್ಧತಿ ಪ್ರಕಾರ, ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ಕೊಡಲಾಗುತ್ತದೆ. ಮೂರು, ಐದು, ಏಳು ಹೀಗೆ ಮೆಟ್ಟಿಲುಗಳ ಸಂಖ್ಯೆ ಇರುತ್ತದೆ. ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಎಂಟು ಮೆಟ್ಟಿಲು ಇರುವುದನ್ನು ಎರಡು ವರ್ಷದ ಹಿಂದೆ ಬಂದಿದ್ದ ವಾಸ್ತು ಶಾಸ್ತ್ರಜ್ಞರೊಬ್ಬರು ಆಕ್ಷೇಪಿಸಿದ್ದರು. 2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ ಆದಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಸೋತಿದ್ದೂ ಆಗಿತ್ತು. ವಾಸ್ತು ತಜ್ಞರ ಸೂಚನೆಯ ಬಳಿಕ ಕಚೇರಿಗೆ ಹೊಕ್ಕುವ ಬಾಗಿಲಿನಲ್ಲಿಯೇ ಅಪದ್ಧ ಇದ್ದರೆ ಸೋಲಾಗದೇ ಇರುತ್ತಾ ಎನ್ನುವ ಮಾತುಗಳು ಕೇಳಿಬಂದಿದ್ದವು.

ಹೀಗಾಗಿ ಈ ಬಾರಿ ಚುನಾವಣೆಗೆ ಕೆಲವೇ ತಿಂಗಳಿರುವಾಗ ಮೆಟ್ಟಿಲುಗಳನ್ನು ಬದಲಿಸಿದ್ದು, ಒಂದು ಮೆಟ್ಟಲು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಎರಡು ದಿನಗಳಿಂದ ಮೆಟ್ಟಿಲ ಕಾಮಗಾರಿ ನಡೆಯುತ್ತಿದ್ದು, ತರಾತುರಿಯಲ್ಲಿ ಕೆಲಸ ಸಾಗುತ್ತಿದೆ. ಈ ಬಗ್ಗೆ ಪಕ್ಷದ ಹಿರಿಯ ಜಿಲ್ಲಾ ಸದಸ್ಯರೊಬ್ಬರಲ್ಲಿ ಕೇಳಿದಾಗ, ಹಾಗೇನಿಲ್ಲ. ಮೆಟ್ಟಿಲ ಅಡಿಭಾಗದಲ್ಲಿ ನೀರಿನ ವಾಟರ್ ಟ್ಯಾಂಕ್ ಇಡಲಾಗಿತ್ತು. ಅದು ಲೀಕೇಜ್ ಆಗಿತ್ತು. ಅದನ್ನು ಕಲ್ಲು ತುಂಬಿಸಿ ಬಂದ್ ಮಾಡಲಾಗಿದ್ದು, ಹೆಚ್ಚುವರಿ ಇರುವ ಜಾಗವನ್ನು ಫಿಲ್ ಮಾಡಲು ಒಂದು ಮೆಟ್ಟಲು ಹೆಚ್ಚಿಸಲಾಗಿದೆ ಎಂದರು. ಇನ್ನೊಬ್ಬ ಸದಸ್ಯರಲ್ಲಿ ವಾಸ್ತು ಪ್ರಕಾರ ಮಾಡುತ್ತಿದ್ದೀರಂತೆ, ಹೌದಾ ಎಂದು ಕೇಳಿದಾಗ, ಹೌದು ಎಂದರು.
ವಾಸ್ತು ತಜ್ಞರು ಮೆಟ್ಟಿಲು ಆ ಭಾಗದಲ್ಲಿ ಇರಲೇಬಾರದು ಎಂದಿದ್ದಾರೆ. ಅವರು ಹೇಳಿದ್ದನ್ನು ಎಲ್ಲ ಕೇಳಿದರೆ, ಇಡೀ ಕಟ್ಟಡ ಬದಲಿಸಬೇಕಾದೀತು. ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡುತ್ತಿದ್ದೇವೆ. ಮೊದಲ ಮಹಡಿಯಲ್ಲೂ ಕೆಲವು ಬದಲಾವಣೆಗೆ ಸೂಚಿಸಿದ್ದಾರೆ. ಜಿಲ್ಲಾಧ್ಯಕ್ಷರ ಚೇಂಬರ್ ಆ ಜಾಗದಲ್ಲಿ ಇರಬಾರದು ಎಂದಿದ್ದಾರೆ. ಅದನ್ನು ಯಾವಾಗ ಬದಲಾವಣೆ ಮಾಡಲಾಗುತ್ತೆ ಎಂದು ಗೊತ್ತಿಲ್ಲ ಎಂದರು. ಒಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಬದಲಾವಣೆ ಅಂತೂ ಆಗುತ್ತಿದೆ. ಆದರೆ ಜಿಲ್ಲಾ ಕಾಂಗ್ರೆಸ್ ನಾಯಕರ ಒಳಗಿನ ಮುಸುಕಿನ ಗುದ್ದಾಟದ ವಾಸ್ತು ಯಾವಾಗ ಬದಲಾವಣೆ ಆಗುತ್ತೋ ಏನೋ..
Vastu Dosh at the congress office in Mangalore, staircase vastu, repair in progress. Congress office had 8 steps but after Vastu dosh it has been advised to make nine steps.
18-06-26 09:57 pm
HK News Staffer
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
19-06-26 03:31 pm
HK News Staffer
ಅಸ್ಸಾಂ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿ...
19-06-26 12:24 pm
Bejai, Kadri Water Issue: ಬಿಜೈ, ಕದ್ರಿಗೆ ಕಲುಷಿ...
18-06-26 12:33 pm
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm