ಮಿಥುನ್ ಹೇಳಿಕೆ ಹೆಸರಲ್ಲಿ ರಾಜಕೀಯ ಕೆಸರೆರಚಾಟ ; ಜೋಗಿ ಸಮುದಾಯಕ್ಕೆ ಅವಮಾನ 'ಆಗಿದೆ - ಆಗಿಲ್ಲ' !

15-10-20 03:47 pm       Mangalore Correspondent   ಕರಾವಳಿ

ಯೋಗಿ ಆದಿತ್ಯನಾಥ್ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೀಡಿದ ಹೇಳಿಕೆ ವಿಚಾರ ಈಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.

ಮಂಗಳೂರು, ಅಕ್ಟೋಬರ್ 15: ಯೋಗಿ ಆದಿತ್ಯನಾಥ್ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೀಡಿದ ಹೇಳಿಕೆ ವಿಚಾರ ಈಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಮಿಥುನ್ ರೈ ಹೇಳಿಕೆಯಿಂದ ಜೋಗಿ ಸಮುದಾಯಕ್ಕೆ ಅವಮಾನ ಆಗಿದೆ ಎಂದು ಜೋಗಿ ಸುಧಾರಕ ಸಂಘದಿಂದ ಪತ್ರಿಕಾ ಹೇಳಿಕೆ ನೀಡಲಾಗಿತ್ತು. ಇದೀಗ ಜೋಗಿ ಸಮುದಾಯಕ್ಕೇ ಸೇರಿದ ಕಾಂಗ್ರೆಸ್ ಮುಖಂಡ ಮತ್ತು ಮನಪಾ ಮಾಜಿ ಮೇಯರ್ ಹರಿನಾಥ್, ಮಿಥುನ್ ರೈ ಹೇಳಿಕೆಯಿಂದ ಜೋಗಿ ಸಮುದಾಯಕ್ಕೆ ಯಾವುದೇ ಅವಮಾನ ಆಗಿಲ್ಲ ಎಂದಿದ್ದಾರೆ. 

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹರಿನಾಥ್, ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆಗಳು ಬರುತ್ತಿವೆ. ನಮ್ಮ ಸಮಾಜಕ್ಕೆ ಮಿಥುನ್ ರೈ ಅವಮಾನ ಮಾಡಿಲ್ಲ. ಜೋಗಿ ಸುಧಾರಕ ಸಂಘದ ಕಿರಣ್ ಜೋಗಿ ಓರ್ವ ಸ್ವಯಂ ಘೋಷಿತ ಅಧ್ಯಕ್ಷನಷ್ಟೇ. ಯಾವುದೇ ಚುನಾವಣೆ ಎದುರಿಸಿ ಅಧ್ಯಕ್ಷರಾಗಿಲ್ಲ. ಜೋಗಿ ಸಮುದಾಯದ ಸಮಸ್ಯೆಯನ್ನು ಯಾರೂ ಕೂಡ ಆಲಿಸುವುದಿಲ್ಲ. ಈಗ ಮಿಥುನ್ ರೈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವುದು ಖಂಡನೀಯ. ಇದು ರಾಜಕೀಯ ಪ್ರೇರಿತ ಹೇಳಿಕೆ ಎಂದು ಹರಿನಾಥ್ ಹೇಳಿದರು.

ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಶಶಿಧರ್ ಹೆಗ್ಡೆ, ಟೀಕೆ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Youth Congress leader Mithun Rai who spoke hurtful words about Up Cm Yogi hasn't hurt the Jogi community clarifies Mangalore former Mayor Harinath in the press meet held at the Press Club in Mangalore here on 15 Thursday, October 2020