ಬ್ರೇಕಿಂಗ್ ನ್ಯೂಸ್
15-10-20 08:08 pm Headline Karnataka News Network ಕರಾವಳಿ
ಮಂಗಳೂರು, ಅಕ್ಟೋಬರ್ .15 : ಪಚ್ಚನಾಡಿಯ ದುರಂತ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಆಗಿರುವುದು. ಅಲ್ಲಿ ಸಂತ್ರಸ್ತರಾದವರಿಗೆ ತಕ್ಷಣವೇ ಪರಿಹಾರ ಕೊಡಬೇಕು. ಪಾಲಿಕೆಯಲ್ಲಿ ಹಣ ಇಲ್ಲವೆಂದು ಕಾಲ ತಳ್ಳುವಂತಿಲ್ಲ. ಹಣ ಇಲ್ಲದಿದ್ದರೆ ಪಾಲಿಕೆಯ ಆಸ್ತಿಯನ್ನು ಅಡವಿಟ್ಟು ಸಂತ್ರಸ್ತ ಜನರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.
ಹೈಕೋರ್ಟ್ ದ್ವಿಸದಸ್ಯ ಪೀಠದ ವಿಚಾರಣೆಗೆ ಬಂದ ವೇಳೆ, ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕಾ ಗರಂ ಆಗಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಸರಕಾರ ಮೂಕ ಪ್ರೇಕ್ಷಕನಾಗಿ ಇರುವಂತಿಲ್ಲ. ಸ್ಥಳೀಯಾಡಳಿತದ ನಿರ್ಲಕ್ಷ್ಯದ ಧೋರಣೆಯಿಂದಾಗಿ ನಾಗರಿಕರಿಗೆ ನಷ್ಟವಾಗಿದೆ. ಪರಿಹಾರದ ಹಣ ನೀಡಲು ಫಂಡ್ ಇಲ್ಲವೆಂದರೆ ಪಾಲಿಕೆಯ ಆಸ್ತಿಯನ್ನು ಅಡ ಇಡುವುದಕ್ಕೆ ಅಥವಾ ಸಾಲ ಮಾಡುವುದಕ್ಕೆ ರಾಜ್ಯ ಸರಕಾರ ಅನುಮತಿ ನೀಡಬೇಕೆಂದು ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿ ಪಾಲಿಕೆಯ ಕಮಿಷನರ್ ಮುಂದಿನ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಬಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಕೋರ್ಟ್ ಛಾಟಿ ಬೀಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಪಾಲಿಕೆಯ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾಕೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಲ್ಲ ಎಂದು ಕೋರ್ಟ್ ಪ್ರಶ್ನೆ ಮಾಡಿದ್ದು ಈ ಬಗ್ಗೆ ವಿವರಣೆ ನೀಡುವಂತೆ ಮಂಡಳಿಗೆ ನೋಟೀಸ್ ಜಾರಿಗೊಳಿಸಿದೆ.
2019ರ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆಯ ಕಾರಣ ಪಚ್ಚನಾಡಿಯಲ್ಲಿ ಅವೈಜ್ಞಾನಿಕವಾಗಿ ಶೇಖರಣೆ ಮಾಡಿದ್ದ ಕಸದ ರಾಶಿ, ಕುಸಿತಕ್ಕೊಳಗಾಗಿ ಕೆಳಭಾಗದಲ್ಲಿ ಕೃಷಿ ಮಾಡಿಕೊಂಡಿದ್ದ ರೈತರ ಭೂಮಿಯನ್ನು ಆಹುತಿ ತೆಗೆದುಕೊಂಡಿತ್ತು. ಮಂದಾರ ಎನ್ನುವ ಊರೇ ಕಸದಲ್ಲಿ ಮುಳುಗಿ ಹೋಗಿತ್ತು. ಇದರಿಂದ ಅಲ್ಲಿ ನೆಲೆಸಿದ್ದ 24 ಕುಟುಂಬಗಳ ಮನೆಗಳು, ಎರಡು ದೇವಸ್ಥಾನಗಳು, ಕೃಷಿಭೂಮಿ ನೆಲಸಮವಾಗಿತ್ತು. ಈ ಬಗ್ಗೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಿದ್ದಲ್ಲದೆ, ಪರಿಹಾರ ರೂಪದಲ್ಲಿ ಸಂತ್ರಸ್ತರಿಗೆ 22 ಕೋಟಿ ರೂ. ನೀಡಬೇಕೆಂದು ಹೇಳಿತ್ತು. ರಾಜ್ಯ ಸರಕಾರ ಎಂಟು ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಇದೇ ವೇಳೆ, ಮಹಾನಗರ ಪಾಲಿಕೆಯಿಂದ 35 ಮಂದಿಗೆ ಕೃಷಿ ನಷ್ಟಕ್ಕಾಗಿ ಪರಿಹಾರ ನೀಡುವ ಭರವಸೆ ನೀಡಿತ್ತು. ಅದಕ್ಕೆ 3.5 ಕೋಟಿ ರೂಪಾಯಿ ಅಗತ್ಯವಿದ್ದು ಈಗ ಪಾಲಿಕೆಯ ಬಳಿ ಹಣವಿಲ್ಲವೆಂದು ಕೋರ್ಟಿಗೆ ಹೇಳಿಕೆ ನೀಡಿತ್ತು. ಪಾಲಿಕೆಯ ಅಹವಾಲು ಕೇಳಿದ ಕೋರ್ಟ್ ಗರಂ ಆಗಿದ್ದಲ್ಲದೆ ಸೂಕ್ತ ಪರಿಹಾರ ನೀಡಲು ನಿರ್ದೇಶನ ನೀಡಿದೆ.
The state high court (HC) has notified the state government to authorize Mangaluru City Corporation (MCC) to vow its fixed assets and raise loan from the bank to pay payment to families affected by the landslide at the Pachanady dumping yard in Mangalore.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am