ಬ್ರೇಕಿಂಗ್ ನ್ಯೂಸ್
21-12-22 11:42 am Mangalore Correspondent ಕರಾವಳಿ
ಉಳ್ಳಾಲ, ಡಿ.21: 13 ಅಂತಸ್ತಿನ ಅಪಾರ್ಟ್ ಮೆಂಟ್ ಒಂದರ ಫ್ಲ್ಯಾಟ್ ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯರು ಬಿಸಿ ಇಸ್ತ್ರಿ ಪೆಟ್ಟಿಗೆಯನ್ನ ಹಾಸಿಗೆ ಮೇಲಿಟ್ಟು ತೆರಳಿದ್ದರಿಂದ ಹಾಸಿಗೆಗೆ ಬೆಂಕಿ ಹರಡಿದ್ದು ಅಪಾರ್ಟ್ ಮೆಂಟ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ಅಗ್ನಿ ಅನಾಹುತ ತಪ್ಪಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಬಳಿಯಿರುವ ಪ್ಲಾಮಾ ನೆಸ್ಟ್ ಅಪಾರ್ಟ್ ಮೆಂಟಿನ ಫ್ಲ್ಯಾಟ್ ಸಂಖ್ಯೆ 202 ರಲ್ಲಿ ಅಗ್ನಿ ಅನಾಹುತ ನಡೆದಿದೆ. ಫ್ಲ್ಯಾಟ್ ನಲ್ಲಿ ತಂಗಿದ್ದ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರು ನಿನ್ನೆ ಬೆಳಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರ ಇದೆಯೆಂದು ಎಂದಿಗಿಂತ ಬೇಗನೆ ತೆರಳಿದ್ದರು. ಕಾಲೇಜಿಗೆ ತೆರಳುವ ತರಾತುರಿಯಲ್ಲಿ ವಿದ್ಯಾರ್ಥಿನಿಯರು ಬಟ್ಟೆಗಳಿಗೆ ಇಸ್ತ್ರಿ ಹಾಕಿ ಸ್ವಿಚ್ ಆಫ್ ಮಾಡದೆ, ಬಿಸಿ ಇಸ್ತ್ರಿ ಪೆಟ್ಟಿಗೆಯನ್ನ ಹಾಸಿಗೆ ಮೇಲಿಟ್ಟು ತೆರಳಿದ್ದಾರೆ.
ಬೆಳಗ್ಗಿನಿಂದ ಅಪಾರ್ಟ್ ಮೆಂಟ್ ನಿಂದ ಹೊಗೆಯ ವಾಸನೆ ಬರುತ್ತಿರುವುದನ್ನ ಅಲ್ಲಿನ ಮ್ಯಾನೇಜರ್ ಆಗಿರುವ ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಗ್ರಹಿಸಿ ಕಟ್ಟಡದಲ್ಲಿ ಶೋಧ ನಡೆಸಿದ್ದಾರೆ.
ಕೆಲ ಹೊತ್ತಿನ ನಂತರ 202 ಫ್ಲ್ಯಾಟ್ ಒಳಗಿಂದ ಹೊಗೆ ಬರುತ್ತಿರುವುದು ತಿಳಿದಿದೆ. ತಕ್ಷಣ ವಿದ್ಯಾರ್ಥಿನಿಯರನ್ನ ಸ್ಥಳಕ್ಕೆ ಕರೆಸಿ ಬೀಗ ತೆರೆದು ಒಳ ನುಗ್ಗಿದಾಗ ಹಾಸಿಗೆ ಹೊತ್ತಿ ಉರಿಯುತ್ತಿರುವುದನ್ನ ಕಂಡಿದ್ದಾರೆ. ಶಫೀಕ್ ಅವರು ವಾಚ್‌ಮೆನ್ ಲೋಕೇಶ್ ಸಹಕಾರದಿಂದ ಫ್ಲ್ಯಾಟ್ ಬಾಲ್ಕನಿಯಿಂದ ಬೆಂಕಿ ಆವರಿಸಿದ್ದ ಹಾಸಿಗೆಯನ್ನ ಕಟ್ಟಡದ ಕೆಳಕ್ಕೆ ಎಸೆದಿದ್ದಾರೆ. ಶಫೀಕ್ ಅವರ ಸಮಯ ಪ್ರಜ್ಞೆಯಿಂದ ಕಟ್ಟಡದಲ್ಲಿದ್ದ 100ಕ್ಕೂ ಹೆಚ್ಚು ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.
Mangalore Apartment in Derlakatte catches fire after students leave the iron plugged on. A big incident has been averted after the timely presence of Flat Manager.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm