ಬ್ರೇಕಿಂಗ್ ನ್ಯೂಸ್
25-12-22 08:00 pm Mangalore Correspondent ಕರಾವಳಿ
ಮಂಗಳೂರು, ಡಿ.25 : ಕಾಟಿಪಳ್ಳ ಜಲೀಲ್ ಹತ್ಯೆ ಪ್ರಕರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆ, ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳ ಬಂಧನ ಆಗಲಿದೆ. ವಿಚಾರಣೆ ಬಳಿಕ ಕೃತ್ಯದ ಹಿನ್ನೆಲೆ, ಸತ್ಯಾಸತ್ಯತೆ ತಿಳಿದು ಬರಲಿದೆ ಎಂದಿದ್ದಾರೆ.
ಮೂಡುಬಿದ್ರೆಗೆ ತೆರಳುವ ಹಾದಿಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ, ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಹತ್ಯೆ ಘಟನೆ ಹಿನ್ನೆಲೆಯಲ್ಲಿ ಯಾರು ಕೂಡ ಊಹಾಪೋಹಕ್ಕೆ ಅವಕಾಶ ನೀಡಬೇಡಿ. ಜನರು ಶಾಂತಿ ಕಾಪಾಡಲು ಆದ್ಯತೆ ಕೊಡಬೇಕಿದೆ. ಪ್ರಕರಣದಲ್ಲಿ ತನಿಖೆಯ ಹೊಣೆಯನ್ನು ಪೊಲೀಸರಿಗೆ ಬಿಟ್ಟು ಬಿಡಿ, ಮುಕ್ತ ತನಿಖೆ ನಡೆಸಿ ಯಾರೇ ಆರೋಪಿಗಳಿದ್ದರೂ, ಅವರನ್ನು ಬಂಧಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಒಂದು ಘಟನೆಗೆ ಇನ್ನೇನೋ ಮಾಡಲು ಹೋಗಬೇಡಿ !
ನೈತಿಕ ಪೊಲೀಸ್ ವಿಚಾರದಲ್ಲಿ ಈ ಹಿಂದೆ ತಾವು ನೀಡಿದ್ದ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹೇಳಿಕೆಯೇ ಅಹಿತಕರ ಘಟನೆಗಳಿಗೆ ಕಾರಣ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ, ಯಾರೇ ಆಗಲಿ, ಹಿಂಸೆಗೆ ಆಸ್ಪದ ಕೊಟ್ಟಲ್ಲಿ ಅದನ್ನು ಹತ್ತಿಕ್ಕುವ ಕೆಲಸವನ್ನು ಸಮಾಜ, ಸರಕಾರ ಮಾಡುತ್ತದೆ. ಹಿಂಸೆಗೆ ದಾರಿ ಮಾಡಿಕೊಡುವಂಥ ಯಾವುದೇ ಪ್ರಕ್ರಿಯೆಯನ್ನು ಹತ್ತಿಕ್ಕುವುದು ಸಮಾಜ ಮತ್ತು ಸರ್ಕಾರದ ಕರ್ತವ್ಯ. ಅದನ್ನು ನಿರಾಕರಣೆ ಮಾಡಲಾಗದು. ಯಾವುದೇ ಒಂದು ಘಟನೆಯಾದರೆ ಅದಕ್ಕೆ ಪ್ರತಿಯಾಗಿ ಇನ್ನೇನೊ ಮಾಡಲು ಹೋದರೆ ಆ ಘಟನೆಯ ನೈಜ ಕಾರಣ ಏನೆನ್ನುವುದು ತಪ್ಪಿ ಹೋಗುತ್ತದೆ. ಯಾವುದೇ ಘಟನೆಯಾದ್ರೂ ತನಿಖೆಯ ಹೊಣೆಯನ್ನು ಪೊಲೀಸರಿಗೆ ಬಿಟ್ಟುಬಿಡಿ. ಮುಕ್ತ, ನಿಷ್ಪಕ್ಷಪಾತ ತನಿಖೆ ಮಾಡಿ, ಘಟನೆಯ ನೈಜ ಕಾರಣವನ್ನು ಹೊರಗೆ ತರುತ್ತಾರೆ ಎಂದು ಹೇಳಿದರು.
"It's unfortunate that Jaleel has been murdered. The police will take suitable action. The probe is in progress. As per eye witnesses two people have murdered Jaleel. We have faith that they will be caught and will be interrogated to find the motive behind the murder," said chief minister Basavaraj Bommai here on Sunday, December 25,
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm