ಬ್ರೇಕಿಂಗ್ ನ್ಯೂಸ್
26-12-22 01:32 pm Udupi Correspondent ಕರಾವಳಿ
ಉಡುಪಿ, ಡಿ.25: ಕಳೆದ ಮೇ ತಿಂಗಳಲ್ಲಿ ಉದ್ಘಾಟನೆಯಾದ ಎರಡೇ ದಿನದಲ್ಲಿ ತುಂಡಾಗಿ ಕೊಚ್ಚಿ ಹೋಗಿದ್ದ ಮಲ್ಪೆಯ ತೇಲುವ ಸೇತುವೆಯನ್ನು ಮತ್ತೆ ಯಥಾಸ್ಥಿತಿಗೆ ತರಲಾಗಿದೆ. ಕೇರಳ ಮತ್ತು ಮುಂಬೈನ ತಜ್ಞರು ಪರಿಶೀಲನೆ ನಡೆಸಿದ ಬಳಿಕ ತೇಲುವ ಸೇತುವೆಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ಡಿ.25ರಂದು ಲೋಕಾರ್ಪಣೆ ಮಾಡಲಾಗಿದೆ.
ಉಡುಪಿ ಶಾಸಕ ರಘುಪತಿ ಭಟ್, ಎರಡನೇ ಬಾರಿಗೆ ಸೇತುವೆಯನ್ನು ಉದ್ಘಾಟನೆ ಮಾಡಿದ್ದು, ಪ್ರವಾಸಿಗರ ಬಳಕೆಗೆ ಚಾಲನೆ ನೀಡಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಎಸ್ಪಿ ಅಕ್ಷಯ್ ಹಾಕೆ ಉಪಸ್ಥಿತರಿದ್ದರು. ಕರ್ನಾಟಕದ ಮೊಟ್ಟಮೊದಲ ತೇಲುವೆ ಸೇತುವೆ ಇದಾಗಿದ್ದು, ಇದಕ್ಕೂ ಮೊದಲು ಕೇರಳದಲ್ಲಿ ಇದೇ ಮಾದರಿಯ ತೇಲುವ ಸೇತುವೆಯನ್ನು ಮಾಡಲಾಗಿತ್ತು. ಅಲ್ಲಿನದ್ದೇ ಮಾದರಿಯಲ್ಲಿ ಮಲ್ಪೆ ಬೀಚ್ ನಲ್ಲಿ ಪ್ರಯೋಗ ಮಾಡಲಾಗಿತ್ತು. ಆದರೆ ಇಲ್ಲಿನ ಸಮುದ್ರದ ಭೋರ್ಗರೆತದ ನಡುವೆ ಸೇತುವೆ ಕೊಚ್ಚಿ ಹೋಗಿತ್ತು.
ಇದೀಗ ಮುಂಬೈನ ಎಚ್ಎನ್ ಮೆರೈನ್ ಕಂಪನಿಯ ತಜ್ಞರು ಬಂದು ಸರ್ಟಿಫೈ ಮಾಡಿದ್ದಾರೆ. ಅಲ್ಲದೆ, ಸೇತುವೆಯ ಸಾಮರ್ಥ್ಯ ಮತ್ತು ಶಕ್ತಿಯ ಬಗ್ಗೆ ಪ್ರಯೋಗವನ್ನೂ ಮಾಡಿದ್ದಾರೆ. ಇತ್ತೀಚೆಗೆ ಬಂದಿದ್ದ ಮಾಂಡೋಸ್ ಚಂಡಮಾರುತದ ಸಂದರ್ಭದಲ್ಲಿ ಅಬ್ಬರದ ಅಲೆಗಳಿಗೆ ಸೇತುವೆಯನ್ನು ನೀರಿನಲ್ಲಿ ಬಿಟ್ಟು ಸಮಸ್ಯೆ ಎದುರಾಗುತ್ತಾ ಎಂದು ಪರೀಕ್ಷೆಗೆ ಒಡ್ಡಲಾಗಿತ್ತು. ಪ್ರಾಯೋಗಿಕ ಪರೀಕ್ಷೆಯ ಬಳಿಕ ಉಡುಪಿ ಜಿಲ್ಲಾಡಳಿತ ಪ್ರವಾಸಿಗರ ಬಳಕೆಗೆ ಅನುಮತಿ ನೀಡಿದೆ.
ತೇಲುವ ಸೇತುವೆಯು 120 ಮೀಟರ್ ಉದ್ದವಿದ್ದು, 3.5 ಮೀಟರ್ ಅಗಲ ಹೊಂದಿದೆ. ಏಕಕಾಲದಲ್ಲಿ ನೂರಕ್ಕೂ ಹೆಚ್ಚು ಮಂದಿ ನಿಲ್ಲುವಷ್ಟು ಸಾಮರ್ಥ್ಯವನ್ನೂ ಹೊಂದಿದೆ. ಸೇತುವೆಯ ಎರಡೂ ಬದಿಯಲ್ಲಿ ಸ್ಟೀಲ್ ರಾಡ್ ಇಡಲಾಗಿದ್ದು, ಪ್ರವಾಸಿಗರು ಅದನ್ನು ಹಿಡಿದು ನಡೆದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಸೇತುವೆಯ ಉದ್ದಕ್ಕೂ 15 ಮಂದಿ ಲೈಫ್ ಗಾರ್ಡ್, 50 ಮಂದಿ ಲೈಫ್ ಬಾಯ್ಸ್ ಮತ್ತು ಮುಂಜಾಗ್ರತೆಗಾಗಿ ಬೋಟ್ ಇರುತ್ತದೆ. ಸೇತುವೆಯ ಮೇಲೆ ಹೋಗುವ ಮಂದಿ ಪ್ರತಿಯೊಬ್ಬರೂ ಲೈಫ್ ಜಾಕೆಟ್ ಹಾಕ್ಕೊಂಡು ಹೋಗಬೇಕಾಗುತ್ತದೆ. ಶೇಖರ್ ಪುತ್ರನ್, ಧನಂಜಯ ಕಾಂಚನ್ ಮತ್ತು ಸುದೇಶ್ ಶೆಟ್ಟಿ ಪಾಲುದಾರಿಕೆಯಲ್ಲಿ ತೇಲುವ ಸೇತುವೆಯನ್ನು ವ್ಯವಸ್ಥೆ ಮಾಡಲಾಗಿದೆ.
MLA Raghupati Bhat inaugurated floating bridge at Malpe beach on Sunday December 25. Bhat said that except Kerala, Malpe beach is the only one that has floating bridge which will increase the joy of tourists. Former minister Pramod Madhwaraj and SP Akshay Hake were the chief guests. A similar bridge was inaugurated in May but it got broken in just two days due to technical fault.
18-06-26 09:57 pm
HK News Staffer
ಪರಿಷತ್ ಚುನಾವಣೆ; ಮೈತ್ರಿ ಪಕ್ಷಕ್ಕೆ ತೀವ್ರ ಮುಖಭಂಗ,...
18-06-26 07:15 pm
ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾ...
18-06-26 01:25 pm
Jayadeva Hospital, Mysuru: ಮೈಸೂರಿನ ಜಯದೇವ ಆಸ್ಪ...
18-06-26 01:17 pm
ಧರ್ಮಸ್ಥಳ ಕೇಸ್ ; ಎಡಪಂಥೀಯರ ಒತ್ತಡಕ್ಕೆ ಎಸ್ಐಟಿ, ಷಡ...
17-06-26 10:12 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
19-06-26 12:24 pm
HK News Staffer
Bejai, Kadri Water Issue: ಬಿಜೈ, ಕದ್ರಿಗೆ ಕಲುಷಿ...
18-06-26 12:33 pm
ಬಸ್ಸೋ, ಬಸ್ ನಿಲ್ದಾಣವೋ ? ಗುರುಪುರ ಬಂಡಸಾಲೆಯಲ್ಲಿ ವ...
16-06-26 11:35 am
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
18-06-26 01:20 pm
HK News Staffer
ಸ್ಕೂಟರಲ್ಲಿ ನಾಲ್ವರು ಹೆಣ್ಮಕ್ಕಳ ಜಾಲಿ ರೈಡ್; ನಿಯಂತ...
17-06-26 01:41 pm
ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯ...
16-06-26 08:32 pm
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm